Anupam Kher: ‘ಕಾಶ್ಮೀರ್​ ಫೈಲ್ಸ್​ ಚಿತ್ರದಲ್ಲಿ ಏನೋ ಸಮಸ್ಯೆ ಇರಬಹುದು’; ಆಸ್ಕರ್​ನಿಂದ ಔಟ್​ ಆಗಿದ್ದಕ್ಕೆ ಅನುಪಮ್​ ಖೇ​ರ್​ ಪ್ರತಿಕ್ರಿಯೆ

|

Updated on: Jan 26, 2023 | 1:01 PM

The Kashmir Files | Oscar Awards: ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಆಸ್ಕರ್​ಗೆ​ ನಾಮಿನೇಟ್​ ಆಗಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಆ ಬಗ್ಗೆ ​ಅನುಪಮ್​ ಖೇರ್​ ಪ್ರತಿಕ್ರಿಯಿಸಿದ್ದಾರೆ.

Anupam Kher: ‘ಕಾಶ್ಮೀರ್​ ಫೈಲ್ಸ್​ ಚಿತ್ರದಲ್ಲಿ ಏನೋ ಸಮಸ್ಯೆ ಇರಬಹುದು’; ಆಸ್ಕರ್​ನಿಂದ ಔಟ್​ ಆಗಿದ್ದಕ್ಕೆ ಅನುಪಮ್​ ಖೇ​ರ್​ ಪ್ರತಿಕ್ರಿಯೆ
ಅನುಪಮ್ ಖೇರ್
Follow us on

95ನೇ ಆಸ್ಕರ್​ ಪ್ರಶಸ್ತಿಯ (Oscar Awards) ನಾಮಿನೇಷನ್​ ಪಟ್ಟಿ ಇತ್ತೀಚೆಗಷ್ಟೇ ಪ್ರಕಟ ಆಯಿತು. 300ಕ್ಕೂ ಅಧಿಕ ಸಿನಿಮಾಗಳು ನಾಮನಿರ್ದೇಶನಗೊಳ್ಳಲು ಅರ್ಹತೆ ಪಡೆದಿದ್ದವು. ಆ ಪೈಕಿ ಒಂದಷ್ಟು ಸಿನಿಮಾಗಳಿಗೆ ಮಾತ್ರ ನಾಮಿನೇಟ್​​ ಆಗುವ ಅವಕಾಶ ಸಿಕ್ಕಿದೆ. ಇನ್ನುಳಿದ ಸಿನಿಮಾಗಳಿಗೆ ತೀವ್ರ ನಿರಾಸೆ ಆಗಿದೆ. ಕನ್ನಡದ ‘ಕಾಂತಾರ’, ‘ವಿಕ್ರಾಂತ್​ ರೋಣ’, ಹಿಂದಿಯ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾಗಳು ರೇಸ್​ನಿಂದ ಹೊರಗುಳಿದಿವೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರಕ್ಕೆ ಆಸ್ಕರ್​ ಸಿಗಬೇಕು ಎಂಬುದು ಹಲವರ ಆಸೆ ಆಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಕುರಿತಾಗಿ ಆ ಚಿತ್ರದ ನಟ ಅನುಪಮ್​ ಖೇರ್​ (Anupam Kher) ಅವರು ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದ ‘ನಾಟು ನಾಟು..’ ಹಾಡು ಆಸ್ಕರ್​ ಪ್ರಶಸ್ತಿಗೆ ನಾಮಿನೇಟ್​ ಆಗಿದೆ. ಆ ಬಗ್ಗೆ ಅನುಪಮ್​ ಖೇರ್​ ಅವರಿಗೆ ಖುಷಿ ಇದೆ. ‘ಆರ್​ಆರ್​ಆರ್​ ಚಿತ್ರಕ್ಕೆ ಕ್ರಿಟಿಕ್ಸ್​ ಚಾಯ್ಸ್​ ಮತ್ತು ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಬಂದಿದೆ. ಭಾರತೀಯ ಚಿತ್ರರಂಗಕ್ಕೆ ಇದು ಹೆಮ್ಮೆಯ ವಿಚಾರ. ಅದನ್ನು ನಾವೇಕೆ ಸೆಲೆಬ್ರೇಟ್​ ಮಾಡಬಾರದು? ದಿ ಕಾಶ್ಮೀರ್​ ಫೈಲ್ಸ್​ ಸಿನಿಮಾದಲ್ಲಿ ಖಂಡಿತವಾಗಿ ಏನೋ ಸಮಸ್ಯೆ ಇರಬಹುದು’ ಎಂದು ಅನುಪಮ್​ ಖೇರ್​ ಹೇಳಿದ್ದಾರೆ.

Oscar 2023 Nomination: ಆಸ್ಕರ್​ ನಾಮಿನೇಷನ್​ ಲಿಸ್ಟ್​ ಪ್ರಕಟ; ಭಾರತಕ್ಕೆ ಬಂಪರ್​ ಚಾನ್ಸ್​

ಇದನ್ನೂ ಓದಿ
‘ದಿ ಕಾಶ್ಮೀರ್​ ಫೈಲ್ಸ್​ ಚಿತ್ರ ಆಸ್ಕರ್​ಗೆ ಹೋದ್ರೆ ಭಾರತಕ್ಕೆ ಮುಜುಗರ; ಇದು ದ್ವೇಷ ಹಬ್ಬಿಸುವ ಕಸ’: ಕೇಳಿಬಂತು ಕಟು ಟೀಕೆ
Aamir Khan: ವಿರೋಧದ ನಡುವೆಯೂ ‘ಆಸ್ಕರ್​’ ಗಮನ ಸೆಳೆದ ‘ಲಾಲ್​ ಸಿಂಗ್​ ಚಡ್ಡಾ’; ಆಮಿರ್​ ಖಾನ್​ ಫ್ಯಾನ್ಸ್​ ಖುಷ್​
ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್​ ಸ್ಮಿತ್​ಗೆ ಆಸ್ಕರ್​ನಿಂದ 10 ವರ್ಷ ಬ್ಯಾನ್​; ಅಕಾಡೆಮಿ ನಿರ್ಧಾರ
ಆಸ್ಕರ್​ ವೇದಿಕೆಯಲ್ಲಿ ನಟ ಕ್ರಿಸ್​ ರಾಕ್​ ಕೆನ್ನೆಗೆ ಹೊಡೆದ ವಿಲ್​ ಸ್ಮಿತ್​ ಬಗ್ಗೆ ತಾಯಿಯ ಪ್ರತಿಕ್ರಿಯೆ ಏನು?

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಕಡಿಮೆ ಬಜೆಟ್​ನಲ್ಲಿ ತಯಾರಾಗಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಹಲವು ಆಯಾಮದಿಂದ ಈ ಸಿನಿಮಾ ಚರ್ಚೆಗೆ ಒಳಗಾಗಿದೆ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆಯ ಘಟನೆಗಳನ್ನು ಆಧರಿಸಿ ಈ ಚಿತ್ರ ತಯಾರಾಗಿದೆ. ವಿವೇಕ್​ ಅಗ್ನಿಹೋತ್ರಿ ಅವರು ಇದಕ್ಕೆ ನಿರ್ದೇಶಮ ಮಾಡಿದ್ದಾರೆ. ಈ ಸಿನಿಮಾ ಆಸ್ಕರ್​ಗೆ ನಾಮಿನೇಟ್​ ಆಗಿಲ್ಲ ಎಂಬ ಕಾರಣಕ್ಕೆ ಅಭಿಮಾನಿಗಳು ಇತ್ತೀಚೆಗೆ  #boycottoscars ಎಂದು ಹ್ಯಾಶ್ ಟ್ಯಾಗ್​ ಟ್ರೆಂಡ್​ ಆರಂಭಿಸಿದ್ದರು.

ಭಾರತಕ್ಕೆ ಆಸ್ಕರ್​ ನಿರೀಕ್ಷೆ:

ಭಾರತದ ಒಂದಷ್ಟು ಸಿನಿಮಾಗಳು ಈ ಬಾರಿ ಶಾರ್ಟ್​ಲಿಸ್ಟ್​ ಆಗಿದ್ದರಿಂದ ನಾಮಿನೇಷನ್​ ಪ್ರಕ್ರಿಯೆ ಮೇಲೆ ಸಖತ್​ ನಿರೀಕ್ಷೆ ಮೂಡಿತ್ತು. ಅಂತಿಮವಾಗಿ ಭಾರತಕ್ಕೆ ಮೂರು ನಾಮಿನೇಷನ್​ ಸಿಕ್ಕಿದೆ. ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಬೆಸ್ಟ್​ ಒರಿಜಿನಲ್​ ಸಾಂಗ್​ ವಿಭಾಗದಲ್ಲಿ ನಾಮಿನೇಟ್​ ಆಗಿದೆ. ಭಾರತದ ‘ಆಲ್​ ದಟ್​ ಬ್ರೀಥ್ಸ್​’, ‘ದಿ ಎಲಿಫೆಂಟ್​ ವಿಸ್ಪರರ್ಸ್​’ ಕಿರುಚಿತ್ರಗಳು ಕೂಡ ನಾಮಿನೇಟ್​ ಆಗಿದ್ದು, ಭಾರತಕ್ಕೆ ಈ ಬಾರಿ ಆಸ್ಕರ್​ ಗೆಲ್ಲುವ ಚಾನ್ಸ್​ ದಟ್ಟವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:01 pm, Thu, 26 January 23