ಹೇಗಿದೆ ‘ವಿಜಯ್ 69′ ಸಿನಿಮಾ? ಅನುಪಮ್ ಖೇರ್ ನಟನೆಗೆ ಮೆಚ್ಚುಗೆ

| Updated By: ರಾಜೇಶ್ ದುಗ್ಗುಮನೆ

Updated on: Nov 09, 2024 | 2:28 PM

ಅಕ್ಷಯ್ ರಾಯ್ ಅವರ ನಿರ್ದೇಶನದಲ್ಲಿ ‘ವಿಜಯ್ 69' ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾ ನವೆಂಬರ್ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಂಡಿದೆ. ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್​  ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ.

ಹೇಗಿದೆ ‘ವಿಜಯ್ 69 ಸಿನಿಮಾ? ಅನುಪಮ್ ಖೇರ್ ನಟನೆಗೆ ಮೆಚ್ಚುಗೆ
ಅನುಪಮ್ ಖೇರ್
Follow us on

ಅನುಪಮ್ ಖೇರ್ ಅವರಿಗೆ ಈಗ 69 ವರ್ಷ ವಯಸ್ಸು. ಅವರ ನಟನೆಯ ‘ದಿ ಸಿಗ್ನೇಚರ್’ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಈಗ ಅವರ ನಟನೆಯ ‘ವಿಜಯ್ 69′ ಸಿನಿಮಾ ನೆಟ್​ಫ್ಲಿಕ್ಸ್ ಒಟಿಟಿ ಮೂಲಕ ರಿಲೀಸ್​ಗೆ ಆಗಿದೆ. ಇದರಲ್ಲಿ ಅನುಪಮ್ ಖೇರ್ ಅವರು ‘ವಿಜಯ್ ಮ್ಯಾಥ್ಯೂ’ ಹೆಸರಿನ ಪಾತ್ರವನ್ನು ನಿರ್ವಹಿಸಿದ್ದಾರೆ.

ಅಕ್ಷಯ್ ರಾಯ್ ಅವರ ನಿರ್ದೇಶನದಲ್ಲಿ ‘ವಿಜಯ್ 69′ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾ ನವೆಂಬರ್ 8ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಕಂಡಿದೆ. ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್​  ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಇದನ್ನು ಮನೀಶ್ ಶರ್ಮಾ ಹಾಗೂ ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಈ ಚಿತ್ರವನ್ನು ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಸೂಚಿಸಿದ್ದಾರೆ. ‘ಏನಾದರೂ ಸಾಧಿಸಬೇಕು ಎಂದಾಗ ವಯಸ್ಸು ಅನ್ನುವುದು ಕೇವಲ ಸಂಖ್ಯೆ ಎಂಬುದು ಈ ಸಿನಿಮಾ ಸಾಬೀತು ಮಾಡುತ್ತದೆ’ ಎಂದು ಕೆಲವರು ಹೇಳಿದ್ದಾರೆ. ಅನೇಕರು ಅನುಪಮ್ ಖೇರ್ ಅವರ ನಟನೆಯನ್ನು ಬಾಯ್ತುಂಬ ಹೊಗಳಿದ್ದಾರೆ.  ಇನ್ನೂ ಕೆಲವರು ಸಿನಿಮಾದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಅನುಪಮ್ ಖೇರ್ ನಟನಾ ಕ್ಷೇತ್ರಕ್ಕೆ ಕಾಲಿಟ್ಟು 40 ವರ್ಷಗಳಾಗಿವೆ. ಅವರು ಕನ್ನಡದಲ್ಲಿ ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಸಿನಿಮಾದಲ್ಲಿ ಎಎನ್ ರಾವ್ ಹೆಸರಿನ ಪಾತ್ರ ಮಾಡಿದ್ದರು.


ಇದನ್ನೂ ಓದಿ: 68ನೇ ವಯಸ್ಸಿಗೆ ಈಜು ಕಲಿತ ಅನುಪಮ್ ಖೇರ್; ಈ ವಯಸ್ಸಲ್ಲಿ ಚಾಲೆಂಜ್ ಸ್ವೀಕರಿಸೋದೇಕೆ?

ಅಂದಹಾಗೆ ‘ವಿಜಯ್ 69′ ಚಿತ್ರಕ್ಕಾಗಿ ಅವರು ಈಜು ಕಲಿತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘68ನೇ ವಯಸ್ಸಿನಲ್ಲಿ ಈಜು ಕಲಿತಿದ್ದೇನೆ. ನಂತರ ವಯಸ್ಸು ಕೇವಲ ಸಂಖ್ಯೆ ಎಂದು ನಾನು ಅರಿತುಕೊಂಡೆ’ ಎಂದಿದ್ದರು ಅವರು. ಈ ಚಿತ್ರದಲ್ಲಿ ಚಂಕಿ ಪಾಂಡೆ, ಮಿಹಿರ್ ಅಹುಜಾ, ಅದ್ರಿಜಾ ಸಿನ್ಹಾ ಮುಂತಾದ ಹಲವು ನಟರು ಈ ಚಿತ್ರದಲ್ಲಿದ್ದು, ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.