3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?

Anushka Sharma: ನಟಿ ಅನುಷ್ಕಾ ಶರ್ಮಾ ಕೊಹ್ಲಿಯ ಮದುವೆಯಾಗಿ ಎರಡು ಮಕ್ಕಳ ತಾಯಾದ ಬಳಿಕ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಅನುಷ್ಕಾ ನಾಯಕಿಯಾಗಿ ಮೊದಲು ನಟಿಸಿದ್ದು ಶಾರುಖ್ ಖಾನ್ ನಟನೆಯ ‘ರಬ್ ನೇ ಬನಾದಿ ಜೋಡಿ’ ಸಿನಿಮಾದಲ್ಲಿ. ಅಸಲಿಗೆ ಆಮಿರ್ ಖಾನ್ ನಟನೆಯ ‘3 ಇಡಿಯಟ್ಸ್’ ಸಿನಿಮಾಕ್ಕೂ ಅನುಷ್ಕಾ ಶರ್ಮಾ ಆಡಿಷನ್ ಕೊಟ್ಟಿದ್ದರು. ಆದರೆ ಆಯ್ಕೆ ಆಗಲಿಲ್ಲ.

3 ಈಡಿಯಟ್ಸ್ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದ ಅನುಷ್ಕಾ ಶರ್ಮಾ; ರಿವೀಲ್ ಆಗಿದ್ದೆಲ್ಲಿ?
Anushka Sharma
Updated By: ಮಂಜುನಾಥ ಸಿ.

Updated on: Feb 18, 2025 | 2:56 PM

ಅನುಷ್ಕಾ ಶರ್ಮಾ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಮತ್ತೆ ನಟನೆಗೆ ಮರಳೋದು ಅನುಮಾನ ಎಂದೇ ಹೇಳಲಾಗುತ್ತಿದೆ. ಸದ್ಯ ಪತಿ ವಿರಾಟ್ ಕೊಹ್ಲಿ ಜೊತೆ ಸೇರಿ ಅವರು ಲಂಡನ್ನಲ್ಲಿ ಸೆಟಲ್ ಆಗುವ ಪ್ಲ್ಯಾನ್ ನಲ್ಲಿ ಇದ್ದಾರೆ. ಅವರ ಮಕ್ಕಳಿಗೂ ಅಲ್ಲಿಯೇ ಶಿಕ್ಷಣ ಕೊಡಿಸುವ ಆಲೋಚನೆ ಇದೆ. ಹೀಗಿರುವಾಗಲೇ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದರು.

2009ರಲ್ಲಿ ‘3 ಈಡಿಯಟ್ಸ್’ ಸಿನಿಮಾ ಬಂತು. ಈ ಚಿತ್ರದಲ್ಲಿ ಪಿಯಾ ಸಹಸ್ರಬುದ್ಧೆ ಪಾತ್ರವನ್ನು ಮಾಡಲು ಅನುಷ್ಕಾ ಅವರು ಆಡಿಷನ್ ನೀಡಿದ್ದರು. ಆದರೆ, ಅವರು ಸೆಲೆಕ್ಟ್ ಆಗಲೇ ಇಲ್ಲ. ಈ ಪಾತ್ರ ಕರೀನಾ ಕಪೂರ್ ಖಾನ್ ಕೈ ಸೇರಿತ್ತು. ಈ ವಿಚಾರವನ್ನು ‘ಪಿಕೆ’ ಸಿನಿಮಾ ಸಂದರ್ಭದಲ್ಲಿ ಅನುಷ್ಕಾ ರಿವೀಲ್ ಮಾಡಿದ್ದರು.

ಅನುಷ್ಕಾ ಅವರು ಆಡಿಷನ್ ನೀಡಿದ ವಿಡಿಯೋನ ರಾಜ್ಕುಮಾರ್ ಹಿರಾನಿ ಹಾಗೂ ಆಮಿರ್ ಖಾನ್ ಎದುರು ಪ್ರದರ್ಶನ ಮಾಡಲಾಯಿತು. ಅನುಷ್ಕಾ ಅವರು ಅದ್ಭುತವಾಗಿ ನಟಿಸಿದ್ದರು. ಅನುಷ್ಕಾ ಅವರನ್ನು ಏಕೆ ಈ ಪಾತ್ರಕ್ಕೆ ಆಯ್ಕೆ ಮಾಡಿಲ್ಲ ಎಂದು ಆಮಿರ್ ಖಾನ್ ಅವರೇ ಅಚ್ಚರಿಪಟ್ಟಿದ್ದರು. ಈ ಬಗ್ಗೆ ಅವರು ರಾಜ್ಕುಮಾರ್ ಹಿರಾನಿ ಅವರನ್ನು ಕೂಡ ಕೇಳಿದರು.

ಇದನ್ನೂ ಓದಿ:ಕಂಗನಾ ರನೌತ್​ ಸಿನಿಮಾ ನೋಡಿ ಫಿದಾ ಆದ ನಟಿ ಮೃಣಾಲ್ ಠಾಕೂರ್

ರಾಜ್ಕುಮಾರ್ ಹಿರಾನಿ ಅವರಿಗೆ ಈ ವಿಚಾರ ಗೊತ್ತೇ ಇರಲಿಲ್ಲ. ಅವರು ಕೂಡ ಶಾಕ್ ಆದರು. ‘ನಾನು ಅನುಷ್ಕಾನ ಸಂದರ್ಶಿಸಿದ್ದೇನೆ’ ಎಂಬ ರೀತಿಯಲ್ಲಿ ಇತ್ತು ಅವರ ನೋಟ. 2007ರಲ್ಲಿ ಅನುಷ್ಕಾ ಸಂದರ್ಶನ ನೀಡಿದ್ದರು. ಇದಾದ 7 ವರ್ಷಗಳ ಬಳಿಕ ‘ಪಿಕೆ’ ಸಿನಿಮಾ ಬಂದಿತ್ತು. ಹೀಗಾಗಿ, ರಾಜ್ಕುಮಾರ್ ಹಿರಾನಿ ಅವರಿಗೆ ಅದು ನೆನಪಿನಲ್ಲಿ ಇರಲೇ ಇಲ್ಲ.

ಅನುಷ್ಕಾ ಶರ್ಮಾ ಅವರು ‘ರಬ್ ನೇ ಬನಾದಿ ಜೋಡಿ’ (2008) ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಶಾರುಖ್ ಖಾನ್ ಜೊತೆ ಮೊದಲ ಸಿನಿಮಾದಲ್ಲಿ ನಟಿಸಿ ಎಲ್ಲರ ಗಮನ ಸೆಳೆದರು. ಅವರ ಮೊದಲ ಚಿತ್ರವೇ ಹಿಟ್ ಆಗಿದ್ದರಿಂದ ಬಾಲಿವುಡ್ನಲ್ಲಿ ಅವರಿಗೆ ಭದ್ರ ಬುನಾದಿ ಸಿಕ್ಕಂತೆ ಆಯಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ