ಮಲೈಕಾ ಅರೋರಾ ಮಾಜಿ ಪತಿ, ಸಲ್ಮಾನ್ ಖಾನ್ (Salman Khan) ಸಹೋದರ ಅರ್ಬಾಜ್ ಖಾನ್ ಕಳೆದ ವರ್ಷ ಡಿಸೆಂಬರ್ ಅಂತ್ಯಕ್ಕೆ ಎರಡನೇ ವಿವಾಹ ಆದರು. ಮೇಕಪ್ ಆರ್ಟಿಸ್ಟ್ ಆಗಿರುವ ಶುರಾ ಖಾನ್ ಜೊತೆ ಅವರ ವಿವಾಹ ಕಾರ್ಯ ನೆರವೇರಿತ್ತು. ಅವರು ಮತ್ತೆ ಸಂಸಾರ ಜೀವನ ಆರಂಭಿಸಿರುವುದಕ್ಕೆ ಸಹೋದರರಾದ ಸಲ್ಮಾನ್ ಖಾನ್, ಸೋಹೈಲ್ ಖಾನ್ ಸಂತಸ ವ್ಯಕ್ತಪಡಿಸಿದ್ದರು. ಅಚ್ಚರಿಯ ವಿಚಾರ ಎಂದರೆ ಅರ್ಬಾಜ್ ಡೇಟಿಂಗ್ ವಿಚಾರ ಸಲ್ಮಾನ್ ಖಾನ್ ಹಾಗೂ ಸೋಹೈಲ್ ಖಾನ್ಗೆ ಗೊತ್ತೇ ಇರಲಿಲ್ಲ. ಈ ವಿಚಾರವನ್ನು ಸಂದರ್ಶನ ಒಂದರಲ್ಲಿ ಅರ್ಬಾಜ್ ರಿವೀಲ್ ಮಾಡಿದ್ದಾರೆ.
ಅರ್ಬಾಜ್ ಯಾರದ್ದೋ ಜೊತೆ ಸುತ್ತಾಡುತ್ತಿದ್ದಾರೆ, ಯಾರನ್ನೋ ಭೇಟಿ ಮಾಡುತ್ತಾರೆ ಎನ್ನುವ ವಿಚಾರ ಸಲ್ಮಾನ್ ಖಾನ್ಗೆ ತಿಳಿದಿತ್ತು. ಆದರೆ, ಅವರು ಯಾರು ಅನ್ನೋ ವಿಚಾರ ಗೊತ್ತಿರಲಿಲ್ಲ. ‘ಆರಂಭದಲ್ಲಿ ಅವರಿಗೆ ಈ ಬಗ್ಗೆ ಗೊತ್ತಿರಲಿಲ್ಲ. ನಾನು ಯಾರನ್ನೋ ಭೇಟಿ ಮಾಡುತ್ತಿದ್ದೇನೆ ಎಂಬುದಷ್ಟೇ ಅವರಿಗೆ ತಿಳಿದಿತ್ತು. ನಾನು ದೊಡ್ಡ ಸ್ಟೆಪ್ ತೆಗೆದುಕೊಳ್ಳುತ್ತಿದ್ದೇನೆ ಎನ್ನುವ ವಿಚಾರ ಗೊತ್ತಾದಾಗ ಅವರಿಗೆ ಖುಷಿ ಆಯಿತು. ಎರಡು ಪ್ರಬುದ್ಧ ವ್ಯಕ್ತಿಗಳು ಈ ನಿರ್ಧಾರ ಮಾಡಿದ್ದಾರೆ ಎಂದಾಗ ಅದನ್ನು ಪ್ರೀತಿ ಪಾತ್ರರು ಬೆಂಬಲಿಸಿಯೇ ಬೆಂಬಲಿಸುತ್ತಾರೆ’ ಎಂದಿದ್ದಾರೆ ಅರ್ಬಾಜ್ ಖಾನ್.
ಶುರಾ ಖಾನ್ ಅವರಿಗೂ ಚಿತ್ರರಂಗದ ಜೊತೆ ನಂಟಿದೆ. ಬಾಲಿವುಡ್ ನಟಿ ರವೀನಾ ಟಂಡನ್ ಹಾಗೂ ಅವರ ಮಗಳು ರಾಶಾ ತಡಾನಿ ಅವರ ಮೇಕಪ್ ಆರ್ಟಿಸ್ಟ್ ಆಗಿ ಶುರಾ ಕಾರ್ಯನಿರ್ವಹಿಸುತ್ತಿದ್ದಾರೆ. ‘ಪಾಟ್ನಾ ಶುಕ್ಲಾ’ ಸಿನಿಮಾದಲ್ಲಿ ಅರ್ಬಾಜ್ ಹಾಗೂ ರವೀನಾ ಒಟ್ಟಾಗಿ ನಟಿಸಿದ್ದರು. ಆಗ ಶುರಾ ಅವರನ್ನು ಭೇಟಿ ಆಗಿದ್ದರು ಅರ್ಬಾಜ್. ಇಬ್ಬರ ಮಧ್ಯೆ ಪ್ರೀತಿ ಬೆಳೆಯಿತು. ನಂತರ ಮದುವೆ ಆದರು.
ಈ ಮೊದಲು ಅರ್ಬಾಜ್ ಹಾಗೂ ಮಲೈಕಾ ಅರೋರಾ ಮದುವೆ ಆಗಿದ್ದರು. ಆ ಬಳಿಕ ಇಬ್ಬರೂ ವಿಚ್ಛೇದನ ಪಡೆದರು. ಆದರೆ, ಈ ಮದುವೆಗೆ ಮಲೈಕಾ ಆಗಮಿಸಿರಲಿಲ್ಲ. ಇದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಈ ಮದುವೆಯಲ್ಲಿ ರವೀನಾ ಟಂಡನ್, ರಾಶಾ, ಸಲ್ಮಾನ್ ಖಾನ್, ಸೋಹೈಲ್ ಖಾನ್, ಸಲೀಮ್ ಖಾನ್ ಮೊದಲಾದವರು ಹಾಜರಿ ಹಾಕಿದ್ದರು. ಸಲ್ಲು ಸಹೋದರಿ ಅರ್ಪಿತಾ ಖಾನ್ ಮನೆಯಲ್ಲಿ ವಿವಾಹ ಕಾರ್ಯ ನಡೆದಿತ್ತು.
ಇದನ್ನೂ ಓದಿ: ಎರಡನೇ ಮದುವೆ ಆದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್; ಹಾರೈಸಿದ ಮಲೈಕಾ ಪುತ್ರ
ಸಲ್ಮಾನ್ ಖಾನ್ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಅವರು ತುಂಬಾನೇ ಪ್ರಭಾವಶಾಲಿ ವ್ಯಕ್ತಿ ಆಗಿ ಬೆಳೆದು ನಿಂತಿದ್ದಾರೆ. ಅವರ ಸಿನಿಮಾಗಳಿಗೆ ದೊಡ್ಡ ಮಟ್ಟದಲ್ಲಿ ಬಿಸ್ನೆಸ್ ಮಾಡುವ ಶಕ್ತಿ ಇದೆ. ಆದರೆ, ಅರ್ಬಾಜ್ ಖಾನ್ ಬಳಿ ಅಷ್ಟು ಎತ್ತರಕ್ಕೆ ಬೆಳೆದು ನಿಲ್ಲೋಕೆ ಸಾಧ್ಯವಾಗಲೇ ಇಲ್ಲ. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:59 am, Fri, 9 February 24