
ಸೆಲೆಬ್ರಿಟಿಗಳಿಗೆ ತಮ್ಮದೇ ಆದ ಉದ್ಯಮ ಹೊಂದಿರುತ್ತಾರೆ. ರೆಸ್ಟೋರೆಂಟ್ನ ಆರಂಭಿಸಿ ಅಲ್ಲಿ ಊಟಕ್ಕೆ ದುಬಾರಿ ಬೆಲೆಯನ್ನು ನಿಗದಿ ಮಾಡೋದು ಗೊತ್ತೇ ಇದೆ. ಈಗ ಖ್ಯಾತ ಗಾಯಕ ಅರಿಜಿತ್ ಸಿಂಗ್ ಕೂಡ ಹೋಟೆಲ್ ಆರಂಭಿಸಿದ್ದಾರೆ. ಹಾಗಂತ ಇದ್ಯಾವುದೂ ದುಬಾರಿ ಹೋಟೆಲ್ ಅಲ್ಲ. ಇಲ್ಲಿ ಒಂದು ಊಟಕ್ಕೆ ಅವರು ಚಾರ್ಜ್ ಮಾಡೋದು ಕೇವಲ 40 ರೂಪಾಯಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ. ಒಳ್ಳೆಯ ಗುಣಮಟ್ಟದ ಊಟದ ಜೊತೆಗೆ ಕಡಿಮೆ ಬೆಲೆಯಲ್ಲಿ ಆಹಾರ ದೊರೆಯುವಂತೆ ಮಾಡುವುದು ಅವರ ಉದ್ದೇಶ.
ಅರಿಜಿತ್ ಸಿಂಗ್ ಅವರ ಹುಟ್ಟೂರು ಪಶ್ಚಿಮ ಬಂಗಾಳದ ಮುರ್ಷಿದಾ ಬಾದ್ನವರು. ಅವರು ಹುಟ್ಟೂರಿಗೆ ಏನನ್ನಾದರೂ ಮಾಡಬೇಕು ಎಂದು ಕನಸು ಕಂಡವರು. ಆ ಕನಸು ಈಗ ಈಡೇರಿದೆ. ಸಾಮಾನ್ಯ ಜನರಿಗೆ ಊಟ ಕೊಡುವ ಉದ್ದೇವನ್ನು ಅವರು ಹೊಂದಿದ್ದಾರೆ. ವಿಶೇಷ ಎಂದರೆ ಅರಿಜಿತ್ ಸಿಂಗ್ ತಂದೆ ಗುರುದಯಾಳ ಸಿಂಗ್ ಅವರು ರೆಸ್ಟೋರೆಂಟ್ನ ಉದ್ಯಮ ಹೊಂದಿದ್ದಾರೆ.
ಅರಿಜಿತ್ ಸಿಂಗ್ ರೆಸ್ಟೋರೆಂಟ್ನಲ್ಲಿ ಒಂದು ಊಟದ ಬೆಲೆ 40 ರೂಪಾಯಿ ಮಾತ್ರ. ಹಾಗಂದ ಮಾತ್ರಕ್ಕೆ ಎಲ್ಲರಿಗೂ ಇಲ್ಲಿ 40 ರೂಪಾಯಿ ಅಲ್ಲ. ವಿದ್ಯಾರ್ಥಿಗಳಿಗೆ 40 ರೂಪಾಯಿಯಲ್ಲಿ ಊಟ ಸಿಗಲಿದೆ. ಇದರ ಜೊತೆಗೆ ಅಗತ್ಯ ಇರುವವರಿಗೂ ಕಡಿಮೆ ಬೆಲೆಯಲ್ಲಿ ಆಹಾರ ದೊರೆಯಲಿದೆ. ಈ ವಿಚಾರಕ್ಕೆ ಅವರು ಮೆಚ್ಚುಗೆ ಪಡೆದಿದ್ದಾರೆ.
ಇದನ್ನೂ ಓದಿ:ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?
ಅರಿಜಿತ್ ಸಿಂಗ್ ಅವರಿಗೆ ದೇಶದ ಬಗ್ಗೆ ಅಪಾರ ಕಾಳಜಿ ಹಾಗೂ ಪ್ರೀತಿ ಇದೆ. ಅಬು ಧಾಬಿಯಲ್ಲಿ ಅವರ ಶೋ ಇತ್ತು. ಆದರೆ, ಪಾಕಿಸ್ತಾನ ಮತ್ತು ಭಾರತದ ದಾಳಿ ಬಳಿಕ ಈ ಶೋನ ಮುಂದಕ್ಕೆ ಹಾಕಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾ ಮಾಹಿತಿ ನೀಡಿದ್ದಾರೆ. ಅಲ್ಲದೆ ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸೋದಾಗಿ ಅವರು ಹೇಳಿದ್ದಾರೆ.
ಅರಿಜಿತ್ ಸಿಂಗ್ ಅವರು 18ನೇ ವಯಸ್ಸಿಗೆ ವೃತ್ತಿ ಜೀವನ ಆರಂಭಿಸಿದರು. 300ಕ್ಕೂ ಅಧಿಕ ಹಾಡುಗಳನ್ನು ಅವರು ಹಾಡಿದ್ದಾರೆ. ಕನ್ನಡದಲ್ಲಿ ಅವರು ಹಾಡುಗಳನ್ನು ಹಾಡಿದ್ದು ಕಡಿಮೆ ಎನ್ನಬಹುದು. ಆದರೆ, ಹಿಂದಿಯಲ್ಲಿ ಅವರ ಹಾಡಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ