ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಮಾಡಿಕೊಂಡ ಆಸ್ತಿ ಎಷ್ಟು?

ಖ್ಯಾತ ಗಾಯಕ ಅರಿಜಿತ್ ಸಿಂಗ್ 38ನೇ ವಯಸ್ಸಿಗೆ ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರ ಅವರ ಲಕ್ಷಾಂತರ ಅಭಿಮಾನಿಗಳಿಗೆ ದುಃಖ ತಂದಿದೆ. ಕೋಟ್ಯಾಂತರ ಆಸ್ತಿ, ಪ್ರತಿ ಹಾಡಿಗೆ ಲಕ್ಷಗಳಲ್ಲಿ ಶುಲ್ಕ ಪಡೆಯುತ್ತಿದ್ದ ಅರಿಜಿತ್, ಇನ್ನುಮುಂದೆ ಲೈವ್ ಕಾನ್ಸರ್ಟ್‌ಗಳಲ್ಲಿ ಮಾತ್ರ ಹಾಡಲಿದ್ದಾರೆ. ಅವರ ವೃತ್ತಿಜೀವನ, ಸಂಪತ್ತು, ಮತ್ತು ಮುಂದಿನ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ.

ನಿವೃತ್ತಿ ಘೋಷಣೆಗೂ ಮೊದಲು ಅರಿಜಿತ್ ಮಾಡಿಕೊಂಡ ಆಸ್ತಿ ಎಷ್ಟು?
ಅರಿಜಿತ್ ಸಿಂಗ್
Edited By:

Updated on: Jan 28, 2026 | 8:12 AM

ಬಾಲಿವುಡ್‌ನ ಪ್ರಸಿದ್ಧ ಗಾಯಕ ಅರಿಜಿತ್ ಸಿಂಗ್ (Arijith Singh) ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದಾರೆ. ಅವರು ಅನೇಕ ಜನಪ್ರಿಯ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವರಿಗೆ ಈಗಿನ್ನೂ 38 ವರ್ಷ. ಇನ್ನುಮುಂದೆ ಅವರು ಯಾವುದೇ ಹೊಸ ಹಾಡುಗಳನ್ನು ಹಾಡೋದಿಲ್ಲ. ಬದಲಿಗೆ ಹಳೆಯ ಹಾಡುಗಳನ್ನು ವೇದಿಕೆ ಮೇಲೆ ಹಾಡುತ್ತಾರೆ. ಅವರ ಸಂಪತ್ತು ಎಷ್ಟು? ಪ್ರತಿ ಹಾಡಿಗೆ ಚಾರ್ಜ್ ಮಾಡೋದು ಎಷ್ಟು? ಆ ಬಗ್ಗೆ ಇಲ್ಲಿದೆ ವಿವರ.

ಅರಿಜಿತ್ ಸಿಂಗ್ ಅವರ ಹಿನ್ನೆಲೆ ಗಾಯನದಿಂದ ನಿವೃತ್ತಿ ಘೋಷಿಸಿದ್ದು ಅವರ ಲಕ್ಷಾಂತರ ಅಭಿಮಾನಿಗಳ ದುಃಖ ತಂದಿದೆ. ಅವರು ಇಂಡಿಯನ್ ಐಡಲ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಹಿನ್ನೆಲೆ ಗಾಯಕರಾದರು. ಅವರಿಗೆ ವಿಶ್ವಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.

15 ವರ್ಷಗಳ ವೃತ್ತಿಜೀವನದಲ್ಲಿ, ಅರಿಜಿತ್ ಸಿಂಗ್ ಪ್ರಪಂಚದಾದ್ಯಂತ ಕೋಟ್ಯಂತರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಹಿಂದಿ, ಕನ್ನಡ, ಬೆಂಗಾಲಿ, ಮರಾಠಿ ಮತ್ತು ತೆಲುಗು ಭಾಷೆಗಳಲ್ಲಿ 400 ಕ್ಕೂ ಹೆಚ್ಚು ಹಾಡುಗಳಿಗೆ ಅವರು ಧ್ವನಿ ನೀಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರಿಜಿತ್ ಸಿಂಗ್ ಅವರ ಆಸ್ತಿ 414 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಅರಿಜಿತ್ ಸಿಂಗ್ ಲೈವ್ ಕಾನ್ಸರ್ಟ್​​ಗಳಿಗೆ ಭಾರಿ ಶುಲ್ಕ ವಿಧಿಸುತ್ತಾರೆ. ಅವರ ವಾರ್ಷಿಕ ಆದಾಯ 70 ಕೋಟಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಬ್ರಾಂಡ್ ಪ್ರಚಾರಗಳೂ ಸೇರಿವೆ. ಅರಿಜಿತ್ ಸಿಂಗ್ ಎರಡು ಗಂಟೆಗಳ ನೇರ ಪ್ರದರ್ಶನಕ್ಕೆ ಅಂದಾಜು 8 ಕೋಟಿ ಶುಲ್ಕ ವಿಧಿಸುತ್ತಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: 38ನೇ ವಯಸ್ಸಿಗೆ ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್​ರ ಮುಂದಿನ ಯೋಜನೆ ಏನು?

ಮುಂಬೈನ ವರ್ಸೋವಾ ಪ್ರದೇಶದ ಕಟ್ಟಡವೊಂದರಲ್ಲಿ ಅರಿಜಿತ್ ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದು, ಇದರ ಬೆಲೆ 9 ಕೋಟಿ ರೂಪಾಯಿ. ರಿಯಲ್ ಎಸ್ಟೇಟ್ ಹೂಡಿಕೆಗಳ ಹೊರತಾಗಿ, ಅವರು 1.8 ರಿಂದ 4 ಕೋಟಿ ರೂ. ಮೌಲ್ಯದ ರೇಂಜ್ ರೋವರ್ ವೋಗ್, 57 ಲಕ್ಷ ರೂ. ನಿಂದ 1.5 ಕೋಟಿ ರೂ. ಮೌಲ್ಯದ ಹಮ್ಮರ್ H3 ಮತ್ತು ಮರ್ಸಿಡಿಸ್-ಬೆಂಜ್​ ಅನ್ನು ಸಹ ಹೊಂದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರಿಜಿತ್ ಸಿಂಗ್ ಒಂದು ಚಿತ್ರಕ್ಕಾಗಿ ಹಾಡನ್ನು ಹಾಡಲು 8 ರಿಂದ 10 ಲಕ್ಷ ರೂ.ಗಳನ್ನು ಪಡೆಯುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.