AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋದಲ್ಲಿ ಸ್ಟಂಟ್ ಮಾಡಿದ ವರುಣ್ ಧವನ್​​ಗೆ ದಂಡ

ವರುಣ್ ಧವನ್ ಮುಂಬೈ ಮೆಟ್ರೋದಲ್ಲಿ ಮಾಡಿದ ಸ್ಟಂಟ್ ವಿವಾದಕ್ಕೆ ಕಾರಣವಾಗಿದೆ. ಮೆಟ್ರೋ ಹ್ಯಾಂಡಲ್‌ಗಳಿಗೆ ನೇತಾಡುವ ಮೂಲಕ ಮಾಡಿದ ವಿಡಿಯೋ ವೈರಲ್ ಆಗಿದ್ದು, ಮುಂಬೈ ಮೆಟ್ರೋ ಆಡಳಿತದಿಂದ ಎಚ್ಚರಿಕೆ ಹಾಗೂ 500 ರೂ. ದಂಡ ವಿಧಿಸಲಾಗಿದೆ. ಇದು ಮೆಟ್ರೋ ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದ್ದು, ಇತರ ಪ್ರಯಾಣಿಕರಿಗೂ ತೊಂದರೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋದಲ್ಲಿ ಸ್ಟಂಟ್ ಮಾಡಿದ ವರುಣ್ ಧವನ್​​ಗೆ ದಂಡ
ವರುಣ್ ಧವನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 28, 2026 | 10:36 AM

Share

‘ಬಾರ್ಡರ್ 2’ ಚಿತ್ರ (Border 2 Movie) ಯಶಸ್ಸು ಕಂಡಿದೆ. ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಹೀಗಿರುವಾಗಲೇ ವರುಣ್ ಧವನ್ ಅವರು ಬೇರೆಯದೇ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಶನಿವಾರ, ವರುಣ್ ಧವನ್ ಮುಂಬೈನಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವಿಡಿಯೋ ವೈರಲ್ ಆಗಿದೆ. ಮೆಟ್ರೋದಲ್ಲಿ ಮಾಡಿದ ಸ್ಟಂಟ್‌ನಿಂದಾಗಿ ವರುಣ್ ತೊಂದರೆಗೆ ಸಿಲುಕಿದ್ದಾರೆ. ಅವರಿಗೆ ದಂಡ ಕೂಡ ವಿಧಿಸಲಾಗಿದೆ.

ಮುಂಬೈ ಮೆಟ್ರೋದಲ್ಲಿನ ಹ್ಯಾಂಡಲ್‌ಗಳಲ್ಲಿ ನೇತಾಡುವ ಮೂಲಕ ವರುಣ್ ಧವನ್ ಪುಲ್-ಅಪ್ ಮಾಡಲು ಪ್ರಯತ್ನಿಸಿದರು. ಆ ವಿಡಿಯೋ ವೈರಲ್ ಆಗಿದೆ. ಇದರಿಂದ ಅವರು ವಿವಾದಕ್ಕೆ ಸಿಲುಕಿದರು. ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರು ದೊಡ್ಡ ವಿವಾದಕ್ಕೆ ಸಿಲುಕಿದರು. ಅವರಿಗೆ ದಂಡವನ್ನೂ ವಿಧಿಸಲಾಯಿತು.

ಮುಂಬೈ ಮೆಟ್ರೋ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ (MMMOCL) ಅದೇ ವೀಡಿಯೊವನ್ನು ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿ ವರುಣ್ ಧವನ​್​ಗೆ ಕಿವಿಮಾತು ಹೇಳಿದೆ. ವರುಣ್ ಧವನ್ ಅವರನ್ನು ಟ್ಯಾಗ್ ಮಾಡುವ ಮೂಲಕ ಸುರಕ್ಷತಾ ಸಂದೇಶವನ್ನು ಸಹ ನೀಡಿದೆ.

‘ವರುಣ್ ಧವನ್, ದಯವಿಟ್ಟು ಮುಂಬೈ ಮೆಟ್ರೋದಲ್ಲಿ ಈ ಸ್ಟಂಟ್ ಮಾಡಬೇಡಿ. ಸ್ನೇಹಿತರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸುವುದು ಖುಷಿ ನೀಡುತ್ತದೆ ಎಂದು ನಮಗೆ ತಿಳಿದಿದೆ. ಆದರೆ ಈ ಹ್ಯಾಂಡಲ್‌ಗಳನ್ನು ಹಿಡಿದು ನೇತಾಡುವುದು ಸರಿ ಅಲ್ಲ. ಮೆಟ್ರೋದಲ್ಲಿನ ಹ್ಯಾಂಡಲ್‌ಗಳು ಇರೋದು ಪ್ರಯಾಣಿಕರ ಸುರಕ್ಷತೆಗಾಗಿ. ಇಂತಹ ಕೃತ್ಯಗಳು ಅಪಾಯಕಾರಿ ಮಾತ್ರವಲ್ಲ, ಇತರ ಪ್ರಯಾಣಿಕರಿಗೂ ಕಿರಿಕಿರಿ ಉಂಟುಮಾಡಬಹುದು’ ಎಂದು ಮುಂಬೈ ಮೆಟ್ರೋ ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ. ಇದು ಎಲ್ಲೆಡೆ ಚರ್ಚೆಗೆ ನಾಂದಿ ಹಾಡಿತು ಮತ್ತು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ವರುಣ್ ಅವರನ್ನು ಟ್ರೋಲ್ ಮಾಡಿದ್ದಾರೆ.

ಇದನ್ನೂ ಓದಿ: ಏರಿಕೆ ಕಂಡ ‘ಬಾರ್ಡರ್ 2’ ಸಿನಿಮಾ ಕಲೆಕ್ಷನ್; 2 ದಿನಕ್ಕೆ ಎಷ್ಟು ಕೋಟಿ?

ಈ ಮಧ್ಯೆ, ಮೆಟ್ರೋದಲ್ಲಿ ಪ್ರಯಾಣಿಸುವಾಗ ಮೆಟ್ರೋ ರೈಲಿನ ಹ್ಯಾಂಡಲ್‌ಗೆ ನೇತಾಡಿದ್ದಕ್ಕಾಗಿ ನಟ ವರುಣ್ ಧವನ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಮುಂಬೈ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MMRDA) ಕೊನೆಗೂ ವರುಣ್ ಧವನ್‌ಗೆ 500 ರೂ. ದಂಡ ವಿಧಿಸಿದ್ದು, ರೈಲಿನ ಹ್ಯಾಂಡಲ್‌ಗೆ ನೇತಾಡುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.