Aryan Khan: ಆರ್ಯನ್​ಗೆ ಜಾಮೀನು ಕೊಡಿಸಬಹುದೇ ಸಲ್ಮಾನ್​ಗೆ ಜಾಮೀನು ಕೊಡಿಸಿದ್ದ ವಕೀಲರು?; ಇಂದು ನಡೆಯಲಿದೆ ವಿಚಾರಣೆ

Aryan Khan drugs case: ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು (ಬುಧವಾರ) ಮುಂಬೈನ ಸೆಷನ್ಸ್ ಕೋರ್ಟ್​ನಲ್ಲಿ ನಡೆಯಲಿದೆ. ಸಲ್ಮಾನ್ ಖಾನ್​ಗೆ ಜಾಮೀನು ಕೊಡಿಸಿದ್ದ ವಕೀಲ ಅಮಿತ್ ದೇಸಾಯಿ ಇಂದು ಆರ್ಯನ್ ಪರ ವಾದ ಮಂಡಿಸಲಿದ್ದಾರೆ.

Aryan Khan: ಆರ್ಯನ್​ಗೆ ಜಾಮೀನು ಕೊಡಿಸಬಹುದೇ ಸಲ್ಮಾನ್​ಗೆ ಜಾಮೀನು ಕೊಡಿಸಿದ್ದ ವಕೀಲರು?; ಇಂದು ನಡೆಯಲಿದೆ ವಿಚಾರಣೆ
ಆರ್ಯನ್ ಖಾನ್

ಬಾಲಿವುಡ್‌ನ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿಯ ವಿಚಾರಣೆ ಇಂದು(ಬುಧವಾರ) ನಡೆಯಲಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್, ಅರ್ಥರ್ ಜೈಲಿನಲ್ಲಿದ್ದಾರೆ. ಈಗಾಗಲೇ‌ ಹಲವು ಬಾರಿ ಆರ್ಯನ್ ಜಾಮೀನು ಅರ್ಜಿಯ ವಿಚಾರಣೆ ನಡೆದಿದ್ದು, ಜಾಮೀನನ್ನು ನಿರಾಕರಿಸಲಾಗಿತ್ತು. ಇಂದು ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆಯು ಮುಂಬೈನ ಸೆಷನ್ಸ್ ಕೋರ್ಟ್​​ನಲ್ಲಿ ಮಧ್ಯಾಹ್ನ 2.45ಕ್ಕೆ ನಡೆಯಲಿದೆ.

ಇಂದು ಬೆಳಗ್ಗೆ 11 ಗಂಟೆಯೊಳಗೆ ಎನ್​ಸಿಬಿ ಮುಂಬೈ ಸೆಷನ್ಸ್ ಕೋರ್ಟ್ ಪ್ರತಿಕ್ರಿಯೆ ಸಲ್ಲಿಸಲಿದೆ. ಅದು ಆರ್ಯನ್​ಗೆ ಜಾಮೀನು ನಿಡುವುದನ್ನು ವಿರೋಧಿಸುವ ಸಾಧ್ಯತೆಗಳಿವೆ. ಎನ್​ಸಿಬಿಯು ಈಗಾಗಲೇ ಹಲವರ ಹೇಳಿಕೆಗಳನ್ನು ದಾಖಲಿಸಿದೆ. ಇತ್ತೀಚೆಗೆ ಆರ್ಯನ್ ಅವರನ್ನು ಹಡಗಿನ ಬಳಿ ಡ್ರಾಪ್ ಮಾಡಿದ್ದ ಡ್ರೈವರ್ ಹೇಳಿಕೆಗಳನ್ನು ದಾಖಲಿಸಿತ್ತು.

‘ಹಿಟ್​ ಆಂಡ್ ರನ್’ ಕೇಸ್​ನಲ್ಲಿ ಸಲ್ಮಾನ್​ಗೆ ಜಾಮೀನು ಕೊಡಿಸಿದ್ದ ವಕೀಲ ಅಮಿತ್ ದೇಸಾಯಿ ಇಂದು ಆರ್ಯನ್ ಪರ ವಕಾಲತ್ತು:
ನಟಿ ರಿಯಾ ಚಕ್ರವರ್ತಿ ಸೇರಿದಂತೆ ಹಲವು ಖ್ಯಾತ ತಾರೆಯರ ಪ್ರಕರಣವನ್ನು ನಿರ್ವಹಿಸಿದ್ದ ಖ್ಯಾತ ವಕೀಲ ಸತೀಸ್ ಮಾನೆಶಿಂಧೆ ಆರ್ಯನ್ ಪರ ವಾದ ಮಂಡಿಸಿದ್ದರು. ಆದರೆ ಅವರು ಜಾಮೀನು ಕೊಡಿಸಲು ವಿಫಲರಾಗಿರುವ ಹಿನ್ನೆಲೆಯಲ್ಲಿ ಇಂದು ಮತ್ತೋರ್ವ ಖ್ಯಾತ ವಕೀಲ ಆರ್ಯನ್ ಪರ ವಕಾಲತ್ತು ವಹಿಸಲಿದ್ದಾರೆ. ಬಾಲಿವುಡ್ ತಾರೆ ಸಲ್ಮಾನ್‌ ಖಾನ್‌ಗೆ ‘ಹಿಟ್ ಆಂಡ್ ರನ್’ ಪ್ರಕರಣದಲ್ಲಿ ಜಾಮೀನು ಕೊಡಿಸಿದ್ದ ಅಮಿತ್ ದೇಸಾಯಿ ಇಂದು ಆರ್ಯನ್ ಪರ ವಾದ ಮಂಡಿಸಲಿದ್ದಾರೆ. ಆದ್ದರಿಂದ ಇಂದಿನ ವಿಚಾರಣೆಯು ಕುತೂಹಲ ಹೆಚ್ಚಿಸಿದೆ.

ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಶಾರುಖ್ ಖಾನ್ ಸೇರಿದಂತೆ ಹಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಿಂದಾಗಿ ಶಾರುಖ್ ಖಾನ್ ಕಂಗೆಟ್ಟಿದ್ದಾರೆ ಎಂದು ಬಾಲಿವುಡ್ ಲೈಫ್ ವರದಿ ಮಾಡಿತ್ತು. ಅವರು ಮತ್ತು ಪತ್ನಿ ಗೌರಿ ಖಾನ್ ಊಟ, ತಿಂಡಿಯ ಕಡೆಗೂ ಗಮನ ಕೊಡದೆ ಮಗನ ಕುರಿತು ಚಿಂತಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಕರಣದ ನಂತರ ಶಾರುಖ್ ದಂಪತಿ ತಮ್ಮ ಮನ್ನತ್ ನಿವಾಸದಿಂದ ಹೊರಗೆ ಬಂದಿಲ್ಲ. ಚಿತ್ರೀಕರಣದಲ್ಲಿ ಬ್ಯುಸಿಯಿದ್ದ ಶಾರುಖ್, ಬಿಗ್ ಬಜೆಟ್ ಚಿತ್ರಗಳನ್ನೂ ಮುಂದಕ್ಕೆ ದೂಡಿದ್ದಾರೆ. ಇದರಿಂದ ಸಾಕಷ್ಟು ನಷ್ಟವಾದರೂ ಮಗನಿಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತು ಬಾಲಿವುಡ್ ಅಂಗಳದಿಂದ ಕೇಳಿಬರುತ್ತಿದೆ.

ಇದನ್ನೂ ಓದಿ:

ಹೈದರಾಬಾದ್​ನಲ್ಲಿ ಪತ್ತೆಯಾದ ಗರಿಗರಿ ನೋಟುಗಳ ಕಪಾಟು; 142 ಕೋಟಿ ಮೌಲ್ಯದ ಹಣ! ಫೋಟೋ ನೋಡಿ

ಡ್ರಗ್ಸ್​ ಕೇಸ್​: ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ; ಶಾರುಖ್​ ಪುತ್ರನಿಗೆ ಮುಗಿಯದ ಸಂಕಷ್ಟ

Read Full Article

Click on your DTH Provider to Add TV9 Kannada