ಎಲ್ಲವೂ ಶಾರುಖ್ ಖಾನ್ ಅವರಂತೆ; ಆರ್ಯನ್​ಗೆ ತಂದೆಯ ಎಷ್ಟೆಲ್ಲ ವಿಚಾರ ಹೋಲುತ್ತೆ ನೋಡಿ

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ತಮ್ಮ ನಿರ್ದೇಶನದ ಮೂಲಕ ಗಮನ ಸೆಳೆದಿದ್ದಾರೆ. ಅವರ ನೋಟ ಮತ್ತು ಧ್ವನಿಯಲ್ಲಿ ಶಾರುಖ್ ಅವರೊಂದಿಗಿನ ಹೋಲಿಕೆ ಅನೇಕರನ್ನು ಆಕರ್ಷಿಸಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಆರ್ಯನ್ ಭವಿಷ್ಯದಲ್ಲಿ ನಟನೆಯಲ್ಲಿಯೂ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆಯಿದೆ.

ಎಲ್ಲವೂ ಶಾರುಖ್ ಖಾನ್ ಅವರಂತೆ; ಆರ್ಯನ್​ಗೆ ತಂದೆಯ ಎಷ್ಟೆಲ್ಲ ವಿಚಾರ ಹೋಲುತ್ತೆ ನೋಡಿ
ಶಾರುಖ್-ಆರ್ಯನ್
Updated By: ರಾಜೇಶ್ ದುಗ್ಗುಮನೆ

Updated on: Sep 24, 2025 | 10:48 AM

ಶಾರುಖ್ ಖಾನ್ (Shah Rukh Kahn) ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರು ಬಾಲಿವುಡ್​ನ ಬಾದ್​ಶಾ ಆಗಿದ್ದಾರೆ. ಅವರ ಖ್ಯಾತಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಇದೆ. ಅವರ ಆಸ್ತಿ ಏಳು ಸಾವಿರ ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರಿಗೆ ಮೂವರು ಮಕ್ಕಳು. ಆರ್ಯನ್ ಖಾನ್, ಸುಹಾನಾ ಖಾನ್ ಹಾಗೂ ಅಬ್​ರಾಮ್. ಆರ್ಯನ್ ಖಾನ್ ನೋಡಿದ ಅನೇಕರು ಶಾರುಖ್ ಖಾನ್​ ಅವರ ಪಡಿ ಅಚ್ಚು ಎಂದು ಕರೆದಿದ್ದಾರೆ. ಅದಕ್ಕೆ ಕಾರಣವೂ ಇದೆ.

ಸೈಫ್ ಅಲಿ ಖಾನ್ ಮಗ ನೋಡಲು ಸೇಮ್​ ಟು ಸೇಮ್ ಸೈಫ್ ಅಲಿ ಖಾನ್ ರೀತಿಯೇ ಇದ್ದಾರೆ. ಇದು ಅನೇಕರಿಗೆ ಅನಿಸಿದೆ. ಆರ್ಯನ್ ಖಾನ್ ಕೂಡ ಹಾಗೆಯೇ ಇದ್ದಾರೆ. ಆರ್ಯನ್ ‘ಬ್ಯಾಡ್ಸ್ ಆಫ್ ಬಾಲಿವುಡ್’ ಹೆಸರಿನ ವೆಬ್ ಸರಣಿ ನಿರ್ದೇಶನ ಮಾಡಿದ್ದಾರೆ. ಈ ಸರಣಿ ಇತ್ತೀಚೆಗೆ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಕಂಡಿದೆ. ಇದಾದ ಬಳಿಕ ಆರ್ಯನ್ ಜನಪ್ರಿಯತೆ ಹೆಚ್ಚಾಗಿದೆ.

ಇದನ್ನೂ ಓದಿ
ಸಾಯಿ ಪಲ್ಲವಿ ಪಡಿಯಚ್ಚು ಪೂಜಾ ಕಣ್ಣನ್;  ಕನ್​ಫ್ಯೂಸ್ ಆಗೋದು ಗ್ಯಾರಂಟಿ
‘ಓಜಿ’ ಟ್ರೇಲರ್ ಈವೆಂಟ್​ನಲ್ಲಿ ಮಳೆಯಲ್ಲಿ ನೆನೆದು ಹಾಸಿಗೆ ಹಿಡಿದ ಪವನ್
ರಿಯಾಲಿಟಿ ಶೋ ತೊರೆಯುವ ನಿರ್ಧಾರಕ್ಕೆ ಬಂದ ಧನಶ್ರೀ; ಕಾರಣ ಏನು?
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ

ಟ್ರೇಲರ್ ಲಾಂಚ್ ಈವೆಂಟ್​ ವೇಳೆ ಆರ್ಯನ್ ಖಾನ್ ಮಾತನಾಡುತ್ತಿದ್ದರು. ಇದನ್ನು ನೋಡಿದ ಅನೇಕರಿಗೆ ಆರ್ಯನ್ ಧ್ವನಿ ಹಾಗೂ ಶಾರುಖ್ ಖಾನ್ ಧ್ವನಿ ಒಂದೇ ರೀತಿ ಎನಿಸಿದೆ. ಇಬ್ಬರ ಮಧ್ಯೆ ಮುಖದ ಹೋಲಿಕೆ ಕೂಡ ಒಂದೇ ರೀತಿ ಇದೆ. ಇಷ್ಟೇ ಅಲ್ಲ, ಶಾರುಖ್ ಖಾನ್ ಅವರು ನಡೆದುಕೊಳ್ಳುವ ರೀತಿಗೂ ಆರ್ಯನ್ ಖಾನ್ ನಡೆದುಕೊಳ್ಳುವ ರೀತಿಗೂ ಸಾಮ್ಯತೆ ಇದೆ.

ಆರ್ಯನ್ ಖಾನ್ ವಿಡಿಯೋ

ಆರ್ಯನ್ ಖಾನ್ ಅವರು ಒಳ್ಳೆಯ ನಿರ್ದೇಶಕರು ನಿಜ. ಅವರು ನಟನೆಗೆ ಕಾಲಿಡಬೇಕು ಎಂಬುದು ಅನೇಕರ ಕೋರಿಕೆ. ಶಾರುಖ್ ಖಾನ್ ಹೋದ ಬಳಿಕ ಅವರ ಸ್ಥಾನವನ್ನು ಯಾರು ತುಂಬೋದು ಎಂಬ ಪ್ರಶ್ನೆ ಇದೆ. ಇದಕ್ಕೆ ಸಂಬಂದಿಸಿದಂತೆ ಅನೇಕರು ಆರ್ಯನ್ ಖಾನ್ ಅವರ ಹೆಸರನ್ನು ಹೇಳುತ್ತಿದ್ದಾರೆ. ಶಾರುಖ್ ಖಾನ್ ಅವರಂತೆ ಆರ್ಯನ್ ಕಾಣೋದಕ್ಕೆ ಅವರನ್ನು ಎಲ್ಲರೂ ಮುಂದಿನ ಶಾರುಖ್ ಎಂದು ಕರೆದಿದ್ದಾರೆ.

ಇದನ್ನೂ ಓದಿ: ಶಾರುಖ್ ಖಾನ್ ಪುತ್ರನ ಸಹವಾಸದಿಂದ ರಣ್​​ಬೀರ್​​ ಕಪೂರ್​​ ವಿರುದ್ಧ ದೂರು

ಶಾರುಖ್ ಖಾನ್ ವಯಸ್ಸು ಈಗ 60 ದಾಟಿದೆ. ಅವರು ಇನ್ನೂ ಫಿಟ್ ಆಗಿದ್ದಾರೆ. ಇನ್ನೂ ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಅವರು ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ‘ಕಿಂಗ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 8:02 am, Wed, 24 September 25