ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಡ್ರಗ್ಸ್ ಕೇಸ್ನಲ್ಲಿ ಜೈಲು ಸೇರಿರುವ ಅವರಿಗೆ ಎಷ್ಟೇ ಪ್ರಯತ್ನ ಮಾಡಿದರೂ ಜಾಮೀನು ಸಿಗುತ್ತಿಲ್ಲ. ಆ ಕಾರಣಕ್ಕಾಗಿ ಅವರಿಗೆ ಚಿಂತೆ ಶುರುವಾಗಿದೆ. ಮಾನಸಿಕವಾಗಿ ಅವರು ಕುಗ್ಗಿ ಹೋಗಿದ್ದಾರೆ. ಹಾಗಾಗಿ ಆರ್ಥರ್ ರೋಡ್ ಜೈಲು ಅಧಿಕಾರಿಗಳು ಒಂದು ಸಲಹೆ ನೀಡಿದ್ದಾರೆ. ಕೆಲವು ಪುಸ್ತಕಗಳನ್ನು ಓದುವಂತೆ ಅಧಿಕಾರಿಗಳು ಆರ್ಯನ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ, ರಾಮ ಮತ್ತು ಸೀತೆಯ ಕುರಿತ ಪುಸ್ತಕಗಳನ್ನು ಅವರು ಓದುತ್ತಿದ್ದಾರೆ.
ಹುಟ್ಟಿನಿಂದಲೇ ಶ್ರೀಮಂತಿಕೆಯ ಜೀವನ ಕಂಡಿರುವ ಆರ್ಯನ್ಗೆ ಜೈಲಿನಲ್ಲಿ ಹೊಂದಿಕೊಳ್ಳುವುದು ಕಷ್ಟ ಆಗುತ್ತಿದೆ. ಮಾನಸಿಕವಾಗಿ ಅವರು ಘಾಸಿಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬಲು ಒಳ್ಳೆಯ ಪುಸ್ತಕಗಳು ಸಹಾಯ ಮಾಡಬಲ್ಲವು. ಕಳೆದ ಕೆಲವು ದಿನಗಳಿಂದ ಅವರು ಪುಸ್ತಕ ಓದಲು ಶುರು ಮಾಡಿದ್ದಾರೆ. ‘ದಿ ಲಯನ್ಸ್ ಗೇಟ್’ ಪುಸ್ತಕ ಓದಿ ಮುಗಿಸಿದ ಮೇಲೆ ಅವರು ರಾಮ ಮತ್ತು ಸೀತೆಯ ಕುರಿತ ಕೃತಿಯನ್ನು ಕೈಗೆತ್ತಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.
ಖೈದಿಗಳು ಬಯಸಿದರೆ ಜೈಲಿನ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳನ್ನು ಓದಬಹುದು. ಮನೆಯವರಿಂದ ಪುಸ್ತಕಗಳನ್ನು ಕೂಡ ತರಿಸಿಕೊಳ್ಳಬಹುದು. ಅಧ್ಯಾತ್ಮ, ಸದಾಚಾರ ಮುಂತಾದ ಒಳ್ಳೆಯ ವಿಚಾರಕ್ಕೆ ಸಂಬಂಧಿಸಿದ ಕೃತಿಗಳಿಗೆ ಮಾತ್ರ ಅವಕಾಶ. ಒಂದು ವೇಳೆ ಖೈದಿಯು ಮನೆಯವರಿಂದ ತರಿಸಿಕೊಂಡ ಪುಸ್ತಕವನ್ನು ಬಿಡುಗಡೆ ಸಂದರ್ಭದಲ್ಲಿ ಜೈಲಿನಲ್ಲೇ ಬಿಟ್ಟು ಹೋದರೆ ಆ ಕೃತಿಯನ್ನು ಜೈಲಿನ ಗ್ರಂಥಾಲಯದಲ್ಲಿ ಇರಿಸಲಾಗುವುದು. ಮುಂಬರುವ ಖೈದಿಗಳಿಗೆ ಆ ಪುಸ್ತಕ ನೀಡಲಾಗುತ್ತದೆ.
ಮುಂಬೈನ ವಿಶೇಷ ಎನ್ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ. ಹಾಗಾಗಿ ಅವರ ಪರ ವಕೀಲರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಆರ್ಯನ್ ಬಂಧನದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ ಸಂದರ್ಭದಲ್ಲಿ ಶಾರುಖ್ ಖಾನ್ ಕುಟುಂಬಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.
ಆರ್ಯನ್ ಖಾನ್ ಜೊತೆ ಸ್ನೇಹ ಹೊಂದಿರುವ ಅನನ್ಯಾ ಪಾಂಡೆ ಅವರಿಗೂ ಈಗ ಸಂಕಷ್ಟ ಎದುರಾಗಿದೆ. ಅವರ ಮನೆ ಮೇಲೆ ಎನ್ಸಿಬಿ ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು. ಬಳಿಕ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಸದ್ಯ ಅವರ ಮೊಬೈಲ್ ಮತ್ತು ಲ್ಯಾಪ್ಟಾಪ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿನ ವಾಟ್ಸಪ್ ಚಾಟ್ಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ:
Aryan Khan: ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಆರ್ಯನ್ ಖಾನ್; ಅಧಿಕಾರಿಗಳಿಗೆ ತಲೆಬಿಸಿ ತಂದ ಶಾರುಖ್ ಮಗನ ವರ್ತನೆ
ದಳಪತಿ ವಿಜಯ್ ಸಿನಿಮಾದಿಂದ ಅನನ್ಯಾ ಪಾಂಡೆ ಔಟ್? ಡ್ರಗ್ಸ್ ಕೇಸ್ ಬೆನ್ನಲ್ಲೇ ಇನ್ನೊಂದು ಗಾಸಿಪ್