ಒಟಿಟಿಯಲ್ಲಿ ಬ್ಲಾಕ್ ಬಸ್ಟರ್ ಕೊಟ್ಟ ಬಳಿಕ, ದೊಡ್ಡ ಪರದೆಯತ್ತ ಶಾರುಖ್ ಪುತ್ರ ಆರ್ಯನ್
Shah Rukh Khan son: ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿ ಮೂಲಕ ಮೊದಲ ಪ್ರಯತ್ನದಲ್ಲಿಯೇ ದೊಡ್ಡ ಜಯ ಸಾಧಿಸಿದ್ದಾರೆ. ಆರ್ಯನ್ ಖಾನ್ ಇದೀಗ ಚಿಕ್ಕ ಪರದೆಯಿಂದ ದೊಡ್ಡ ಪರದೆಯತ್ತ ಹೆಜ್ಜೆ ಇಡುವ ಪ್ರಯತ್ನದಲ್ಲಿದ್ದು, ಮಗನ ಪ್ರಯತ್ನಕ್ಕೆ ಶಾರುಖ್ ಖಾನ್ ಅವರೇ ಬಂಡವಾಳ ಹೂಡಲಿದ್ದಾರೆ.

ಶಾರುಖ್ ಖಾನ್ (Shah Rukh Khan) ಪುತ್ರ ಆರ್ಯನ್ ಖಾನ್ ನಿರ್ದೇಶನ ಮಾಡಿರುವ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿ ಇತ್ತೀಚೆಗಷ್ಟೆ ಬಿಡುಗಡೆ ಆಗಿ ದೊಡ್ಡ ಹಿಟ್ ಆಗಿದೆ. ಶಾರುಖ್ ಖಾನ್ ಪುತ್ರನ ಚಿತ್ರರಂಗದ ಪ್ರವೇಶ ಎಂಬ ಕಾರಣಕ್ಕೆ ಈ ವೆಬ್ ಸರಣಿ ಬಹಳ ಸದ್ದು ಮಾಡಿತ್ತು. ನಿರೀಕ್ಷೆಗೆ ತಕ್ಕಂತೆ ವೆಬ್ ಸರಣಿ ಪ್ರೇಕ್ಷಕನಿಗೆ ಇಷ್ಟವಾಗಿದ್ದು ದೊಡ್ಡ ಹಿಟ್ ಆಗಿದೆ. ಇಮ್ರಾನ್ ಹಶ್ಮಿ ಅವರಂತೂ ‘ಬ್ಯಾಡ್ಸ್ ಆಫ್ ಬಾಲಿವುಡ್’ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದಿದ್ದರೆ 600 ಕೋಟಿಗೂ ಹೆಚ್ಚು ಗಳಿಸುತ್ತಿತ್ತು’ ಎಂದಿದ್ದಾರೆ. ಚಿಕ್ಕ ಪರದೆಯಲ್ಲಿ ಭಾರಿ ಯಶಸ್ಸು ಗಳಿಸಿರುವ ಶಾರುಖ್ ಖಾನ್ ಪುತ್ರ ಇದೀಗ ದೊಡ್ಡ ಪರದೆಯತ್ತ ಹೆಜ್ಜೆ ಹಾಕಿದ್ದಾರೆ.
‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಯ ಮೊದಲ ಸೀಸನ್ ಮುಗಿದಿದ್ದು, ಆರ್ಯನ್ ಖಾನ್, ವೆಬ್ ಸರಣಿಯ ಎರಡನೇ ಸೀಸನ್ ನಿರ್ದೇಶಿಸಲು ಸಜ್ಜಾಗಿದ್ದಾರೆ. ಆದರೆ ಎರಡನೇ ಸೀಸನ್ಗೆ ವೆಬ್ ಸರಣಿಯನ್ನು ಮುಗಿಸಲಿರುವ ಆರ್ಯನ್ ಖಾನ್ ಅದಾದ ಬಳಿಕ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರಂತೆ. ಅದೂ ತಮ್ಮ ತಂದೆ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರನ್ನು ನಾಯಕನನ್ನಾಗಿ ಹಾಕಿಕೊಳ್ಳಲಿದ್ದಾರೆ.
ಆರ್ಯನ್ ಖಾನ್ ನಿರ್ದೇಶಿಸಿದ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸರಣಿಗಾಗಿ ಶಾರುಖ್ ಖಾನ್ ಬಂಡವಾಳ ಹೂಡಿಕೆ ಮಾಡಿದ್ದು ಮಾತ್ರವಲ್ಲದೆ ಅತಿಥಿ ಪಾತ್ರಕ್ಕೆ ಆಮಿರ್ ಖಾನ್, ಸಲ್ಮಾನ್ ಖಾನ್, ರಾಜಮೌಳಿ, ಬಾದ್ಶಾ, ಹೃತಿಕ್ ರೋಷನ್, ಇಮ್ರಾನ್ ಹಶ್ಮಿ, ಕರಣ್ ಜೋಹರ್ ಇನ್ನೂ ಹಲವು ಬಾಲಿವುಡ್ ದಿಗ್ಗಜರನ್ನು ಒಟ್ಟಿಗೆ ಸೇರಿಸಿದರು. ಇದೀಗ ಆರ್ಯನ್ ಖಾನ್ರ ಮೊದಲ ಸಿನಿಮಾಕ್ಕೂ ಸಹ ಶಾರುಖ್ ಖಾನ್ ಅವರೇ ಬಂಡವಾಳ ಹಾಕುವ ಜೊತೆಗೆ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ ಸಹ.
ಇದನ್ನೂ ಓದಿ:‘ಕಿಂಗ್’ ಚಿತ್ರಕ್ಕಾಗಿ ಹಾಲಿವುಡ್ ಪೋಸ್ ಕದ್ದ ಶಾರುಖ್ ಖಾನ್? ಶುರುವಾಯ್ತು ಚರ್ಚೆ
ಶಾರುಖ್ ಖಾನ್ ಇದೀಗ ತಮ್ಮ ಇಬ್ಬರು ಮಕ್ಕಳನ್ನೂ ಚಿತ್ರರಂಗದಲ್ಲಿ ಗಟ್ಟಿಯಾಗಿ ಲಾಂಚ್ ಮಾಡುವ ಪ್ರಯತ್ನದಲ್ಲಿದ್ದಾರೆ. ಮಗಳು ಸುಹಾನಾ ಖಾನ್ ಈಗಾಗಲೇ ‘ಆರ್ಚಿಸ್’ ಸಿನಿಮಾನಲ್ಲಿ ನಟಿಸಿದ್ದರು. ಆದರೆ ಅದಾದ ಬಳಿಕ ಅವರಿಗೆ ಯಾವ ಸಿನಿಮಾನಲ್ಲಿಯೂ ಪಾತ್ರ ಸಿಗಲಿಲ್ಲ. ಬಳಿಕ ಶಾರುಖ್ ಖಾನ್ ಅವರೇ ತಮ್ಮ ಹೊಸ ಸಿನಿಮಾ ‘ಕಿಂಗ್’ನಲ್ಲಿ ಸುಹಾನಾ ಖಾನ್ ಅವರಿಗೆ ಪ್ರಮುಖ ಪಾತ್ರವೊಂದನ್ನು ನೀಡಿದ್ದಾರೆ. ಮಗ ಆರ್ಯನ್ ಖಾನ್ ವೆಬ್ ಸರಣಿಗೂ ಸಹ ಕೋಟ್ಯಂತರ ರೂಪಾಯಿ ಬಂಡವಾಳ ಹಾಕಿದ್ದಾರೆ. ನಂತರ ಆರ್ಯನ್ ಖಾನ್ ಮೊದಲ ಸಿನಿಮಾಕ್ಕೂ ಸಹ ದೊಡ್ಡ ಮೊತ್ತದ ಬಂಡವಾಳ ಹೂಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




