Aryan Khan ಆರ್ಯನ್ ಖಾನ್​​ಗೆ ಜಾಮೀನು ಸಿಕ್ಕಿದರೂ ಇಂದು ರಾತ್ರಿ ಜೈಲಲ್ಲೇ ಕಳೆಯಬೇಕು; ನಾಳೆ ಬೆಳಗ್ಗೆ ಬಿಡುಗಡೆ

| Updated By: ರಶ್ಮಿ ಕಲ್ಲಕಟ್ಟ

Updated on: Oct 29, 2021 | 6:45 PM

ಗುರುವಾರ ಸಂಜೆ ಜಾಮೀನು ಮಂಜೂರಾಗಿದ್ದು, ಹೈಕೋರ್ಟ್ ಶುಕ್ರವಾರ ಅವರ ಜಾಮೀನಿನ ಷರತ್ತುಗಳನ್ನು ನಿರ್ದೇಶಿಸಿದೆ. ಆರ್ಯನ್ ಖಾನ್ ಮತ್ತು ಇತರ ಆರೋಪಿಗಳು 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಶ್ಯೂರಿಟಿ ಪಾವತಿಸಬೇಕು.

Aryan Khan ಆರ್ಯನ್ ಖಾನ್​​ಗೆ ಜಾಮೀನು ಸಿಕ್ಕಿದರೂ ಇಂದು ರಾತ್ರಿ ಜೈಲಲ್ಲೇ ಕಳೆಯಬೇಕು; ನಾಳೆ ಬೆಳಗ್ಗೆ ಬಿಡುಗಡೆ
ಆರ್ಯನ್ ಖಾನ್
Follow us on

ಮುಂಬೈ: ಆರ್ಯನ್ ಖಾನ್ (Aryan Khan) ಇಂದು ಜೈಲಿನಿಂದ ಬಿಡುಗಡೆಯಾಗುವುದಿಲ್ಲ. ನಾಳೆ ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಆರ್ಥರ್ ರೋಡ್ ಜೈಲು (Arthur Road Jail)ಅಧಿಕಾರಿಗಳು ಹೇಳಿದ್ದಾರೆ.  ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿರುವುದರಿಂದ ಮನ್ನತ್‌ನಲ್ಲಿ ಸಂಭ್ರಮಾಚರಣೆ ನಡೆದಿದೆ. ಗುರುವಾರ ಸಂಜೆ ಜಾಮೀನು ಮಂಜೂರಾಗಿದ್ದು, ಹೈಕೋರ್ಟ್ ಶುಕ್ರವಾರ ಅವರ ಜಾಮೀನಿನ ಷರತ್ತುಗಳನ್ನು ನಿರ್ದೇಶಿಸಿದೆ. ಆರ್ಯನ್ ಖಾನ್ ಮತ್ತು ಇತರ ಆರೋಪಿಗಳು 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಶ್ಯೂರಿಟಿ ಪಾವತಿಸಬೇಕು. ಜಾಮೀನು ಷರತ್ತುಗಳ ಪ್ರಕಾರ, ಅವರು ಅನುಮತಿಯಿಲ್ಲದೆ ಮುಂಬೈನಿಂದ ಹೊರಗೆ ಪ್ರಯಾಣಿಸಲು ಸಹ ಅನುಮತಿಸಲಾಗುವುದಿಲ್ಲ. 23ರ ಹರೆಯದ ಆರ್ಯನ್ ಖಾನ್ ಆರ್ಥರ್ ರೋಡ್ ಜೈಲಿನಲ್ಲಿ ಇಂದು ರಾತ್ರಿ ಕಳೆಯಬೇಕಿದೆ. ನಾಳೆ ಬೆಳಗ್ಗೆ ಅವರನ್ನು ಬಿಡುಗಡೆ ಮಾಡುವುದಾಗಿ ಜೈಲು ಅಧಿಕಾರಿಗಳು ಹೇಳಿದ್ದಾರೆ.

ಮುಂಬೈ ಕರಾವಳಿಯ ಕ್ರೂಸ್ ಹಡಗಿನಲ್ಲಿ ಡ್ರಗ್ ದಾಳಿಯ ಸಂದರ್ಭದಲ್ಲಿ ಬಂಧಿಸಲ್ಪಟ್ಟ 25 ದಿನಗಳ ನಂತರ ಮೂವರಿಗೆ ಜಾಮೀನು ನೀಡಲಾಗಿದೆ.

ಬಿಡುಗಡೆ ಆದೇಶದ ಪ್ರತಿಯನ್ನು ಬಿಡುಗಡೆಗಾಗಿ ಆರ್ಥರ್ ರೋಡ್ ಜೈಲಿನ ಹೊರಗಿನ ಜಾಮೀನು ಪೆಟ್ಟಿಗೆಯಲ್ಲಿ ಹಾಕಬೇಕು. ಇದಕ್ಕಾಗಿ ಜೈಲು ಅಧಿಕಾರಿಗಳು ಸಂಜೆ 5.35 ರವರೆಗೆ ಕಾಯುತ್ತಾರೆ ಎಂದು, ಆರ್ಥರ್ ರೋಡ್ ಜೈಲ್ ಅಧೀಕ್ಷಕ ನಿತಿನ್ ವಾಯ್ಚಾಲ್ ಹೇಳಿದ್ದಾರೆ. ಇಂದು ಕೊನೆಯ ಬಾರಿಗೆ ಜಾಮೀನು ಪೆಟ್ಟಿಗೆ ತೆರೆಯಲಾಗಿದೆ. ನಿಯಮಗಳು ಯಾರಿಗೂ ಬದಲಾಗುವುದಿಲ್ಲ. ಆರ್ಯನ್ ಇಂದು ಹೊರಗೆ ಬರುವುದಿಲ್ಲ. ಇದುವರೆಗೆ ಜೈಲಿನಲ್ಲಿ ಆರ್ಯನ್ ನಡುವಳಿಕೆ ಚೆನ್ನಾಗಿತ್ತು ಎಂದು ಅವರು ಹೇಳಿರುವುದಾಗಿ ಇಂಡಿಯಾ ಟಿವಿ ವರದಿ ಮಾಡಿದೆ.

ನಾವು ಕಳೆದ ಮೂರು ದಿನಗಳಿಂದ ಸ್ವತಂತ್ರ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದೇವೆ ಮತ್ತು ನಾವು ಐದು ಅಧಿಕಾರಿಗಳು ಮತ್ತು ಮೂವರು ಖಾಸಗಿ ಸಾಕ್ಷಿಗಳನ್ನು ಪರೀಕ್ಷಿಸಿದ್ದೇವೆ ಮತ್ತು ವಿವಿಧ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ ಎಂದು ಐಷಾರಾಮಿ ಹಡಗಿನಲ್ಲಿ ಡಗ್ಸ್ ಪ್ರಕರಣದ ಕುರಿತು ಡಿಡಿಜಿ ಎನ್‌ಸಿಬಿ ಜ್ಞಾನೇಶ್ವರ್ ಸಿಂಗ್ ಹೇಳಿದ್ದಾರೆ.

ಸಮೀರ್ ವಾಂಖೆಡೆ ಅವರನ್ನು ಕಳೆದ ದಿನ ವಿಚಾರಣೆಗೊಳಪಡಿಸಿದ್ದು ಅವರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ನಾವು ಅದನ್ನು ವಿಶ್ಲೇಷಿಸುತ್ತಿದ್ದೇವೆ. ನಾವು ಇನ್ನೂ ಕೆಲವು ದಾಖಲೆಗಳನ್ನು ಕೇಳಿದ್ದೇವೆ ಮತ್ತು ಅಗತ್ಯವಿದ್ದರೆ ಅವರನ್ನು ಮತ್ತೆ ಸಂಪರ್ಕಿಸುತ್ತೇವೆ. ಲಭ್ಯವಿರುವ ಎಲ್ಲಾ ಮೂಲಗಳ ಮೂಲಕ ಸಾಕ್ಷಿ ಪ್ರಭಾಕರ್ ಸೈಲ್ ಅವರೊಂದಿಗೆ ಸಂಪರ್ಕವನ್ನು ಸ್ಥಾಪಿಸಲು ನಾವು ಪ್ರಯತ್ನಿಸಿದ್ದೇವೆ. ಸೈಲ್ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಮಾಧ್ಯಮ ವರದಿಗಳು ಬಂದಿದ್ದರಿಂದ ನಮಗೆ ಸಹಾಯ ಮಾಡುವಂತೆ ನಾವು ಮುಂಬೈ ಪೊಲೀಸ್ ಕಮಿಷನರ್ ಅವರನ್ನು ವಿನಂತಿಸಿದ್ದೇವೆ. ಅವರಿಗೆ ಇನ್ನೂ ನೋಟಿಸ್ ನೀಡಲು ನಮಗೆ ಸಾಧ್ಯವಾಗಿಲ್ಲ. ಅವರು ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕ ಸಾಕ್ಷಿಯಾಗಿರುವುದರಿಂದ ಅವರು ತನಿಖೆಗೆ ಸೇರುತ್ತಾರೆ ಎಂದು ನಾನು ಭಾವಿಸುತ್ತೇನೆ. ಕೆ.ಪಿ.ಗೋಸಾವಿ ಬಂಧನದಲ್ಲಿದ್ದಾರೆ. ಅವರನ್ನು ತನಿಖೆಗೆ ಒಳಪಡಿಸಲು ಅನುಮತಿಗಾಗಿ ನಾವು ನ್ಯಾಯಾಲಯದ ಮೊರೆ ಹೋಗಬೇಕಾಗಿದೆ. ಈ ಪ್ರಕರಣದಲ್ಲಿ ನಾವು ತನಿಖೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಸಿಂಗ್ ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ಪುತ್ರನ ಜಾಮೀನಿಗೆ ನಟಿ ಜೂಹಿ ಚಾವ್ಲಾರಿಂದ ಶ್ಯೂರಿಟಿ; 1 ಲಕ್ಷ ರೂ.ಬಾಂಡ್​ಗೆ ಸಹಿ

Published On - 6:26 pm, Fri, 29 October 21