ಭಾರತೀಯ ಚಿತ್ರರಂಗದಲ್ಲಿ ಸಾಮಾನ್ಯವಾಗಿ ನಿರ್ದೇಶಕರಿಗಿಂತ ಹೀರೋಗೆ ಹೆಚ್ಚಿನ ಸಂಭಾವನೆ ಸಿಗುತ್ತದೆ. ಆದರೆ, ಕೆಲವೇ ಕೆಲವು ಸ್ಟಾರ್ ನಿರ್ದೇಶಕರು ಮಾತ್ರ ಹೀರೋಗೆ ಸರಿಯಾಗಿ ಸಂಭಾವನೆ ಪಡೆಯುತ್ತಾರೆ. ಆ ಸಾಲಿಗೆ ಅಯಾನ್ ಮುಖರ್ಜಿ ಕೂಡ ಸೇರ್ಪಡೆ ಆಗುತ್ತಿದ್ದಾರೆ. ‘ವಾರ್ 2’ ಚಿತ್ರವನ್ನು (War 2 Movie) ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ಮೊತ್ತ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ. ಯಶ್ ರಾಜ್ ಫಿಲ್ಮ್ಸ್ (Yash Raj Films) ಕ್ಯಾಂಪ್ನಲ್ಲಿ ದೊಡ್ಡ ಸಂಭಾವನೆ ಪಡೆದ ಎರಡನೇ ನಿರ್ದೇಶಕ ಎನ್ನುವ ಖ್ಯಾತಿಗೆ ಇವರು ಭಾಗಿ ಆಗಿದ್ದಾರೆ.
ಬಾಲಿವುಡ್ನಲ್ಲಿ ಬಿಸ್ನೆಸ್ ಇಲ್ಲದೆ ಕಷ್ಟಪಡುತ್ತಿದ್ದ ವೇಳೆ ‘ಬ್ರಹ್ಮಾಸ್ತ್ರ’ ಸಿನಿಮಾ ರಿಲೀಸ್ ಆಗಿ ಭರ್ಜರಿ ಕಲೆಕ್ಷನ್ ಮಾಡಿತು. ಈ ಸಿನಿಮಾಗೆ ನಿರ್ದೇಶನ ಮಾಡಿದ್ದು ಅಯಾನ್ ಮುಖರ್ಜಿ. ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಸಿನಿಮಾ ಭರ್ಜರಿ ಬಿಸ್ನೆಸ್ ಮಾಡಿತು. ಅಯಾನ್ ಮುಖರ್ಜಿಗೆ ಚಿತ್ರದಿಂದ ಬೇಡಿಕೆ ಹೆಚ್ಚಿದೆ. ಹೀಗಾಗಿ, ‘ವಾರ್ 2’ ಚಿತ್ರಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ.
‘ವಾರ್’ ಸಿನಿಮಾದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದರು. ಈ ಸಿನಿಮಾಗೆ ಈಗ ಸೀಕ್ವೆಲ್ ಬರುತ್ತಿದೆ. ‘ವಾರ್’ ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಆ ಬಳಿಕ ಅವರು ‘ಪಠಾಣ್’ ಚಿತ್ರ ನಿರ್ದೇಶನ ಮಾಡಿದರು. ಈ ಚಿತ್ರಕ್ಕೆ ಅವರು ಭರ್ಜರಿ ಸಂಭಾವನೆ ಪಡೆದಿದ್ದರು. ಈಗ ‘ವಾರ್ 2’ ಚಿತ್ರಕ್ಕಾಗಿ ಅಯಾನ್ ಬರೋಬ್ಬರಿ 32 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಯಶ್ ರಾಜ್ ನಿರ್ಮಾಣ ಸಂಸ್ಥೆ ಅಯಾನ್ಗೆ ಹೆಚ್ಚು ಒತ್ತು ನೀಡುತ್ತಿದೆ.
ಇದನ್ನೂ ಓದಿ: ‘ಕ್ರಿಶ್ 4’ ಚಿತ್ರದಿಂದ ಹೊರಬಂದ ಹೃತಿಕ್ ರೋಷನ್ ತಂದೆ? ಗಟ್ಟಿ ನಿರ್ಧಾರ ತೆಗೆದುಕೊಂಡ ರಾಕೇಶ್
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಸೃಷ್ಟಿ ಮಾಡಿದೆ. ‘ಟೈಗರ್’ ಸರಣಿ, ‘ವಾರ್’, ‘ಪಠಾಣ್’ ಚಿತ್ರಗಳು ಇದೇ ಯೂನಿವರ್ಸ್ನಲ್ಲಿ ಮೂಡಿ ಬಂದಿದೆ. ‘ವಾರ್ 2’ ಚಿತ್ರಕ್ಕೂ ಈ ಯೂನಿವರ್ಸ್ ಸಿನಿಮಾಗಳಿಗೆ ಕನೆಕ್ಷನ್ ನೀಡುವ ಕೆಲಸ ಆಗುತ್ತಿದೆ. ‘ವಾರ್ 2’ ಚಿತ್ರದಲ್ಲಿ ಹೃತಿಕ್ ಹಾಗೂ ಜೂನಿಯರ್ ಎನ್ಟಿಆರ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಜೂನಿಯರ್ ಎನ್ಟಿಆರ್ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿ ಆಗಿದೆ.
ಇದನ್ನೂ ಓದಿ: ‘ವಾರ್ 2’ ಚಿತ್ರಕ್ಕಾಗಿ ಬಾಲಿವುಡ್ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಜೂನಿಯರ್ ಎನ್ಟಿಆರ್
ಸೆಪ್ಟೆಂಬರ್ ವೇಳೆಗೆ ‘ವಾರ್ 2’ ಸಿನಿಮಾ ಸೆಟ್ಟೇರಲಿದೆ. 2024ರ ಕೊನೆ ಅಥವಾ 2025 ಆರಂಭದಲ್ಲಿ ಸಿನಿಮಾ ರಿಲೀಸ್ ಆಗಲಿದೆ. ‘ಟೈಗರ್ 3’ ಚಿತ್ರಕ್ಕೆ ಹಾಗೂ ‘ಪಠಾಣ್ಗೆ’ ಕನೆಕ್ಷನ್ ನೀಡುವ ಕೆಲಸ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ