ಬಾಲಿವುಡ್​ನಲ್ಲಿ ಗೆಲ್ಲೋ ಕನಸು ಕಂಡಿದ್ದ ಹರ್ಷಗೆ ಭಾರೀ ನಿರಾಸೆ; ‘ಬಾಘಿ 4’ ಚಿತ್ರದಿಂದ ನಿರ್ಮಾಪಕರಿಗೆ ನಷ್ಟ

ಎ. ಹರ್ಷ ಅವರು ನಿರ್ದೇಶಿಸಿದ ಬಾಲಿವುಡ್ ಚಿತ್ರ "ಬಾಘಿ 4" ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಗಿಂತ ಕಡಿಮೆ ಗಳಿಕೆ ಮಾಡಿದೆ. 70 ಕೋಟಿಗೂ ಹೆಚ್ಚು ಬಜೆಟ್‌ನ ಈ ಚಿತ್ರ ಕೇವಲ 52.77 ಕೋಟಿ ರೂಪಾಯಿ ಗಳಿಸಿದೆ. ಹಿಂದಿನ "ಬಾಘಿ" ಸಿನಿಮಾಗಳ ಜನಪ್ರಿಯತೆಗೆ ಹೋಲಿಸಿದರೆ ಇದು ತೀವ್ರ ನಿರಾಶೆ ತಂದಿದೆ. ಚಿತ್ರದಿಂದ ನಿರ್ಮಾಪಕರಿಗೆ ಭಾರಿ ನಷ್ಟವಾಗುವ ಸಾಧ್ಯತೆ ಇದೆ.

ಬಾಲಿವುಡ್​ನಲ್ಲಿ ಗೆಲ್ಲೋ ಕನಸು ಕಂಡಿದ್ದ ಹರ್ಷಗೆ ಭಾರೀ ನಿರಾಸೆ; ‘ಬಾಘಿ 4’ ಚಿತ್ರದಿಂದ ನಿರ್ಮಾಪಕರಿಗೆ ನಷ್ಟ
ಟೈಗರ್-ಹರ್ಷ

Updated on: Sep 22, 2025 | 6:58 AM

ಕನ್ನಡದಲ್ಲಿ ಹಲವು ಹಿಟ್​ ಚಿತ್ರಗಳನ್ನು ನೀಡಿದ ಖ್ಯಾತಿ ಎ. ಹರ್ಷ ಅವರಿಗೆ ಇದೆ. ಅವರ ಹಾಗೂ ಶಿವರಾಜ್​ಕುಮಾರ್ ಜೊತೆಗಿನ ಕೆಮಿಸ್ಟ್ರಿ ಗಮನ ಸೆಳೆದಿದೆ. ಈಗ ಹರ್ಷ ಅವರು ಬಾಲಿವುಡ್​ನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಟೈಗರ್ ಶ್ರಾಫ್ ನಟನೆಯ ‘ಬಾಘಿ’ (Baaghi) ಸಿನಿಮಾ ನಿರ್ದೇಶನ ಮಾಡಿದ್ದಾರೆ. ಆದರೆ, ಮೊದಲ ಸಿನಿಮಾದಲ್ಲೇ ಅವರು ನಿರಾಸೆಗೊಳಿಸಿದ್ದಾರೆ. ಈ ಸಿನಿಮಾ ಸಾಧಾರಣದಲ್ಲೇ ಸಾಧಾರಣ ಕಲೆಕ್ಷನ್ ಮಾಡಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

‘ಬಾಘಿ’ ಸರಣಿಯಲ್ಲಿ ಈಗಾಗಲೇ ಮೂರು ಸಿನಿಮಾಗಳು ಬಂದಿವೆ. ಮೊದಲ ಸರಣಿ ಪಡೆದ ಜನಪ್ರಿಯತೆ ಎರಡನೇ ಸಿನಿಮಾಗೆ ಸಿಕ್ಕಿಲ್ಲ. ಮೂರನೇ ಸಿನಿಮಾ ವಿಮರ್ಶೆಯಲ್ಲಿ ಸೋತರೂ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತು. ಈಗ ನಾಲ್ಕನೇ ಪಾರ್ಟ್ ಸಾಕಷ್ಟು ಕಡಿಮೆ ಗಳಿಕೆ ಮಾಡಿದೆ. ಈ ಚಿತ್ರದಿಂದ ನಿರ್ಮಾಪಕರಿಗೆ ನಷ್ಟವೇ ಆಗಿದೆ ಎನ್ನಲಾಗುತ್ತಿದೆ.

‘ಬಾಘಿ 4’ ಸಿನಿಮಾ 16ನೇ ದಿನ ಕೇವಲ 12 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 52.77 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾದ ಬಜೆಟ್ 70 ಕೋಟಿ ರೂಪಾಯಿಗೂ ಹೆಚ್ಚಿದೆ. ಸಿನಿಮಾದ ಒಟಿಟಿ ಹಾಗೂ ಸ್ಯಾಟಲೈಟ್ ಮಾರಾಟದ ಹಣ ಸೇರಿಸಿದರೂ ನಿರ್ಮಾಪಕರಿಗೆ ಲಾಭ ಆಗೋದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ
ಬಾಲಿವುಡ್ ಮಾಫಿಯಾ ಬಗ್ಗೆ ಮಾತನಾಡಿದ ತನುಶ್ರೀ ದತ್ತಾ
ಪುನೀತ್ ಜೊತೆ ನಟಿಸಿದ ಅದಾ ಶರ್ಮಾ ನಿಜವಾದ ಹೆಸರೇನು ಗೊತ್ತಾ?
ಬದಲಾಗೋದೇ ಇಲ್ಲ ಅಕ್ಷಯ್ ಅದೃಷ್ಟ; ಹೊಸ ಚಿತ್ರ, ಮತ್ತದೇ ಹೀನಾಯ ಕಲೆಕ್ಷನ್
‘ಕಲ್ಕಿ’ ಚಿತ್ರದಿಂದ ಹೊರಬಂದು ಶಾರುಖ್ ಹೇಳಿಕೊಟ್ಟ ಪಾಠ ನೆನೆದ ದೀಪಿಕಾ

‘ಬಾಘಿ 3’ ಸಿನಿಮಾದ ಭಾರತದ ಕಲೆಕ್ಷನ್ 100 ಕೋಟಿ ರೂಪಾಯಿ ಸಮೀಪಿಸಿತ್ತು. ಅಲ್ಲದೆ, ಚಿತ್ರದ ಬಜೆಟ್ ಕೂಡ ಸ್ವಲ್ಪ ಕಡಿಮೆಯೇ ಇತ್ತು. ಹೀಗಾಗಿ, ಈ ಚಿತ್ರದಿಂದ ತಂಡಕ್ಕೆ ಲಾಭ ಆಗಿತ್ತು. ಆದರೆ, ಇಲ್ಲಿ ಆ ರೀತಿ ಆಗಿಲ್ಲ.

ಇದನ್ನೂ ಓದಿ: ಎ ಹರ್ಷ ಬಾಲಿವುಡ್​ನಲ್ಲಿ ಸೆಟಲ್ ಆಗೋದು ಫಿಕ್ಸ್? ‘ಬಾಘಿ 4’ ಕಲೆಕ್ಷನ್ ಹೇಗಿದೆ?

ಇನ್ನು ಹರ್ಷ ವಿಚಾರಕ್ಕೆ ಬಂದರೆ ಈ ಚಿತ್ರದ ಕಥೆ, ಸ್ಕ್ರಿಪ್ಟ್​ನ ನಿರ್ಮಾಣ ಸಂಸ್ಥೆ ಕಡೆಯಿಂದಲೇ ಒದಗಿಸಲಾಗಿದೆ. ಹೀಗಾಗಿ, ಅವರು ಕೇವಲ ನಿರ್ದೇಶನ ಮಾತ್ರ ಮಾಡಿ ಬಂದಿದ್ದಾರೆ. ಹೀಗಾಗಿ, ಅವರ ಭಾಗಿತ್ವ ಸಿನಿಮಾದಲ್ಲಿ ಹೆಚ್ಚಿನದ್ದೇನು ಇಲ್ಲ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.