ಸಲ್ಮಾನ್ ಖಾನ್ ಜೊತೆ ‘ಬಜರಂಗಿ ಭಾಯಿಜಾನ್’ (Bajrangi Bhaijaan) ಸಿನಿಮಾದಲ್ಲಿ ನಟಿಸುವ ಮೂಲಕ ಹರ್ಷಾಲಿ ಮಲ್ಹೋತ್ರಾ (Harshaali Malhotra) ಅವರು ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. 2015ರಲ್ಲಿ ಆ ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ನಟಿಸಿದ್ದ ಹರ್ಷಾಲಿ ಮಲ್ಹೋತ್ರಾ ಅವರು ಈ ವರ್ಷ 10ನೇ ತರಗತಿ ಪಾಸ್ ಮಾಡಿದ್ದಾರೆ. ಇಂದು (ಮೇ 14) ಅವರು ಬಹಳ ಹೆಮ್ಮೆಯಿಂದ ತಮ್ಮ ರಿಸಲ್ಟ್ (Harshaali Malhotra 10th Result) ಬಗ್ಗೆ ಮಾಹಿತಿ ನೀಡಿದ್ದಾರೆ. ಇಷ್ಟು ದಿನ ತಮ್ಮನ್ನು ಟ್ರೋಲ್ ಮಾಡಿದ್ದ ಜನರಿಗೆ ಅವರು ಈಗ ತಕ್ಕ ಉತ್ತರ ನೀಡಿದ್ದಾರೆ.
ಹರ್ಷಾಲಿ ಮಲ್ಹೋತ್ರಾ ಅವರು ಇನ್ಸ್ಟಾಗ್ರಾಮ್ ಬಳಕೆಯಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಆಗಾಗ ಅವರು ರೀಲ್ಸ್ ಹಂಚಿಕೊಳ್ಳುತ್ತಾರೆ. ಹಾಗಾಗಿ ಅವರನ್ನು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ‘ಶಾಲೆಗೆ ಹೋಗುತ್ತೀಯೋ ಇಲ್ಲವೋ’ ಎಂಬ ಕಮೆಂಟ್ಗಳು ಬಂದಿದ್ದವು. ‘ಈ ವರ್ಷ ಹತ್ತನೇ ತರಗತಿ ಪಾಸ್ ಆಗುವುದು ಅನುಮಾನ’ ಎಂದು ಕೂಡ ಅನೇಕರು ಕಮೆಂಟ್ ಮಾಡಿದ್ದರು. ಆದರೆ ಈಗ ಅಂಥವರ ಬಾಯಿ ಮುಚ್ಚಿಸಿದ್ದಾರೆ ಹರ್ಷಾಲಿ ಮಲ್ಹೋತ್ರಾ.
ಹೌದು, ಹರ್ಷಾಲಿ ಮಲ್ಹೋತ್ರಾ ಅವರು ಸಿಬಿಎಸ್ಸಿ 10ನೇ ತರಗತಿಯಲ್ಲಿ ಶೇಕಡ 83 ಮಾರ್ಕ್ಸ್ ಪಡೆದುಕೊಂಡಿದ್ದಾರೆ. ಡ್ಯಾನ್ಸ್ ಕಲಿಯುತ್ತಾ, ರೀಲ್ಸ್ ಮಾಡುತ್ತಾ, ಫೋಟೋಶೂಟ್ಗೆ ಪೋಸ್ ನೀಡುತ್ತಾ ಜನರನ್ನು ಸೆಳೆಯುತ್ತಿದ್ದ ಅವರು ವಿದ್ಯಾಭ್ಯಾಸದ ಕಡೆಗೂ ಸರಿಯಾಗಿ ಗಮನ ಕೊಟ್ಟಿದ್ದಾರೆ. ಅದರ ಪರಿಣಾಮವಾಗಿ ಅವರಿಗೆ ಶೇಕಡ 83 ಅಂಕ ಸಿಕ್ಕಿದೆ.
ಇದನ್ನೂ ಓದಿ: ‘ಕುಳ್ಳ ಹೌದು, ಆದ್ರೆ ಮದುವೆ ಆಗಬಾರದಾ?’; ಕೆಟ್ಟ ಕಮೆಂಟ್ಗೆ ಅಬ್ದು ರೋಜಿಕ್ ಬೇಸರ
10ನೇ ತರಗತಿಯಲ್ಲಿ ತಾವು ಪಡೆದ ಮಾರ್ಕ್ಸ್ ಬಗ್ಗೆ ಜನರಿಗೆ ತಿಳಿಸುವಾಗ ಹರ್ಷಾಲಿ ಮಲ್ಹೋತ್ರಾ ಅವರು ಗತ್ತು ಪ್ರದರ್ಶಿಸಿದ್ದಾರೆ. ಇಷ್ಟು ದಿನಗಳ ಕಾಲ ತಮಗೆ ಬಂದ ಒಂದಷ್ಟು ನೆಗೆಟಿವ್ ಕಮೆಂಟ್ಗಳನ್ನು ಅವರು ವಿಡಿಯೋ ಮೂಲಕ ತೋರಿಸಿದ್ದಾರೆ. ಅವುಗಳನ್ನೆಲ್ಲ ಒಂದೇ ಕೈಯಲ್ಲಿ ತಳ್ಳಿಹಾಕಿದ್ದಾರೆ. ಬಳಿಕ ತಮ್ಮ ಸ್ಕೋರ್ ಎಷ್ಟು ಎಂಬುದನ್ನು ಅವರು ತಿಳಿಸಿದ್ದಾರೆ. ರೀಲ್ಸ್ ಮಾಡುತ್ತಲೇ ರಿಯಲ್ ಜಗತ್ತಿನಲ್ಲೂ ಸಾಧನೆ ಮಾಡಬಹುದು ಎಂದು ಹರ್ಷಾಲಿ ಮಲ್ಹೋತ್ರಾ ಹೇಳಿದ್ದಾರೆ. ತಮ್ಮ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ಉತ್ತಮ ಸ್ಕೋರ್ ಮಾಡಿರುವ ಅವರಿಗೆ ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.