ಪ್ರಿಯಾ ಮಲಿಕ್​ಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ ನಟಿ ಭೂಮಿ ಪಡ್ನೇಕರ್

| Updated By: ರಾಜೇಶ್ ದುಗ್ಗುಮನೆ

Updated on: Jul 25, 2021 | 5:16 PM

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಡೆಯುತ್ತಿದೆ. ವಾಸ್ತವವಾಗಿ, ಪ್ರಿಯಾ ಮಲಿಕ್  ಚಿನ್ನದ ಪದಕ ಗೆದ್ದಿದ್ದು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ. ಆದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೇ ಅವರು ಈ ಸಾಧನೆ ಮಾಡಿದ್ದಾರೆ ಎಂದು ಭೂಮಿ ಭಾವಿಸಿದ್ದರು.

ಪ್ರಿಯಾ ಮಲಿಕ್​ಗೆ ಅಭಿನಂದನೆ ಸಲ್ಲಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡ ನಟಿ ಭೂಮಿ ಪಡ್ನೇಕರ್
ಭೂಮಿ ಪಡ್ನೇಕರ್
Follow us on

ಭಾರತದ ಕುಸ್ತಿ ಪಟು ಪ್ರಿಯಾ ಮಲಿಕ್ (Priya Malik) ಅವರು ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ (World Cadet Wrestling Championship) ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 73 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ಪ್ರಿಯಾ ಮಲಿಕ್ ಬೆಲರೂಸ್‌ನ ಸೆನಿಯಾ ಪಟಾಪೊವಿಚ್‌ ಅವರನ್ನು 5-0 ಅಂತರದಲ್ಲಿ ಮಣಿಸಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ಇವರಿಗೆ ಅಭಿನಂದನೆಗಳ ಮಳೆ ಹರಿದು ಬರುತ್ತಿದೆ. ಅಭಿನಂದನೆ ಹೇಳುವ ವೇಳೆ ನಟಿ ಭೂಮಿ ಪಡ್ನೇಕರ್ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನಡೆಯುತ್ತಿದೆ. ವಾಸ್ತವವಾಗಿ, ಪ್ರಿಯಾ ಮಲಿಕ್  ಚಿನ್ನದ ಪದಕ ಗೆದ್ದಿದ್ದು ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ. ಆದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೇ ಅವರು ಈ ಸಾಧನೆ ಮಾಡಿದ್ದಾರೆ ಎಂದು ಭೂಮಿ ಭಾವಿಸಿದ್ದರು. ಇನ್​ಸ್ಟಾಗ್ರಾಮ್​ನಲ್ಲಿ ಅಭಿನಂದನೆ ಸ್ಟೋರಿ ಪೋಸ್ಟ್ ಮಾಡುವ ವೇಳೆ ಒಲಂಪಿಕ್ಸ್​ ಹ್ಯಾಶ್​ಟ್ಯಾಗ್​ ಬಳಸಿದ್ದಾರೆ ಭೂಮಿ. ನಂತರ ತಪ್ಪಿನ ಅರಿವಾಗಿ ಅದನ್ನು ಡಿಲೀಟ್​ ಮಾಡಿದ್ದಾರೆ.

ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಿಯಾ ಮಲಿಕ್‌ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದು, ಸ್ವರ್ಣ ಪದಕಗಳ ಬೇಟೆಯಾಡುತ್ತಾ ಬಂದಿದ್ದಾರೆ. 2019ರ ಖೇಲೋ ಇಂಡಿಯಾ ಕ್ರೀಡಾ ಕೂಟದಲ್ಲೂ ಪ್ರಿಯಾ ಚಿನ್ನ ಗೆದ್ದಿದ್ದರು.

ಬಳಿಕ ದಿಲ್ಲಿಯಲ್ಲಿ ನಡೆ 17ನೇ ಶಾಲಾ ಕ್ರೀಡಾಕೂಟದಲ್ಲೂ ಸ್ವರ್ಣಕ್ಕೆ ಕೊರಳೊಡ್ಡಿದ್ದರು. 2020ರಲ್ಲಿ ನಡೆ ಹಲವು ಕೂಟಗಳಲ್ಲೂ ಪ್ರಿಯಾ ಚಿನ್ನ ಗೆದ್ದಿದ್ದಾರೆ. ಇದೀಗ ವಿಶ್ವ ಕೆಡೆಟ್‌ ಕುಸ್ತಿ ಚಾಂಪಿಯನ್‌ಷಿಪ್‌ ಕೂಟದಲ್ಲಿ ಸ್ವರ್ಣ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎನಿಸಿಕೊಂಡಿದ್ದಾರೆ.

ವಿಶ್ವ ಕೆಡೆಟ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಅವರು ಮಹಿಳೆಯರ 73 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ 5-0 ಅಂತರದಿಂದ ಬೆಲಾರಸ್ ಕುಸ್ತಿಪಟು ಕ್ಸೆನಿಯಾ ಪಟಪೋವಿಚ್ ಸೋಲಿಸುವ ಮೂಲ ಚಿನ್ನದ ಪದಕವನ್ನು ತನ್ನಾಗಿಸಿಕೊಂಡರು.

ಇದನ್ನೂ ಓದಿ: World Cadet Wrestling Championship: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಭಾರತದ ಪ್ರಿಯಾ ಮಲಿಕ್

ಒಲಂಪಿಕ್ಸ್​ನಲ್ಲಿ ಪದಕ ಗೆದ್ದ ಪ್ರಿಯಾ ಮಲಿಕ್​ ಅವರಿಗೆ ಅಭಿನಂದನೆಗಳು; ಇಶಾಂತ್ ಶರ್ಮಾ- ಹನುಮಾ ವಿಹಾರಿ ಎಡವಟ್ಟು