
ಬಾಲಿವುಡ್ ತಾರೆಯರಿಗೂ ಜಾಹೀರಾತು ಲೋಕಕ್ಕೂ ಬಿಡಿಸಲಾಗದ ನಂಟು. ಆದರೆ, ತೆರೆಯ ಮೇಲೆ ಮಿಂಚುವ, ಅಭಿಮಾನಿಗಳನ್ನು ಕಂಡಾಗ ನಗು ಚೆಲ್ಲುವ ಸೆಲೆಬ್ರಿಟಿಗಳು ಸೆಟ್‌ನಲ್ಲಿ ಹೇಗಿರುತ್ತಾರೆ? ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ‘ಗುಡ್ ಆಡ್ಸ್ ಮ್ಯಾಟರ್ಸ್’ ಆಯೋಜಿಸಿದ್ದ ನಿರ್ಮಾಪಕರ ಸಂವಾದ ಕಾರ್ಯಕ್ರಮವೊಂದು ಈಗ ಚರ್ಚೆಗೆ ಕಾರಣ ಆಗಿದೆ. ಜಾಹೀರಾತು ನಿರ್ಮಾಪಕರೊಬ್ಬರು ನೀಡಿದ ಒಂದು ಹೇಳಿಕೆ ವೈರಲ್ ಆಗಿದೆ.
1.ಬಾಲಿವುಡ್ನಲ್ಲಿದ್ದಾರೆ ಪೇನ್ಫುಲ್ ಕಪಲ್
2.ಇವರ ಜೊತೆ ಸಿನಿಮಾ ಮಾಡೋದೇ ಚಾಲೆಂಜ್
3. ಎಲ್ಲವನ್ನೂ ವಿವರಿಸಿದ ನಿರ್ಮಾಪಕರು
‘ಬ್ಯಾಂಗ್ ಬ್ಯಾಂಗ್ ಮೀಡಿಯಾಕಾರ್ಪ್’ನ ಸ್ಥಾಪಕ ರೂಪಕ್ ಸಲೂಜಾ ಅವರು ಈ ಸಂವಾದದಲ್ಲಿ ಭಾಗವಹಿಸಿದ್ದರು. ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡುವಾಗ ಎದುರಾಗುವ ಸವಾಲುಗಳ ಬಗ್ಗೆ ಮಾತನಾಡುತ್ತಿದ್ದ ಅವರು, ‘ಕೆಲವು ತಾರೆಯರ ಜೊತೆ ಕೆಲಸ ಮಾಡುವುದು ನಿಜಕ್ಕೂ ನೋವಿನ ಸಂಗತಿ. ಅದರಲ್ಲೂ ಇತ್ತೀಚೆಗೆ ಒಂದು ಪವರ್ ಕಪಲ್ ಚಿತ್ರೀಕರಣದ ವೇಳೆ ತುಂಬಾ ಕಿರಿಕಿರಿ ನೀಡುತ್ತಿದ್ದಾರೆ’ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ರೂಪಕ್ ಅವರು ಆ ದಂಪತಿಯ ಹೆಸರನ್ನು ಹೇಳಿದ್ದರೂ, ವಿಡಿಯೋದಲ್ಲಿ ಅದನ್ನು ‘ಬೀಪ್’ ಮಾಡುವ ಮೂಲಕ ರಹಸ್ಯವಾಗಿಡಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಂಟರ್ನೆಟ್ ಮಂದಿ ತಮ್ಮದೇ ಆದ ತನಿಖೆ ಆರಂಭಿಸಿದ್ದಾರೆ. ರೂಪಕ್ ಅವರ ಮಾತು ಯಾರ ಬಗ್ಗೆ ಇರಬಹುದು ಎಂಬ ಚರ್ಚೆ ಶುರುವಾಗಿದ್ದು, ಹೆಚ್ಚಿನವರು ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಹೆಸರನ್ನೇ ಪ್ರಸ್ತಾಪಿಸುತ್ತಿದ್ದಾರೆ. ಜಾಹೀರಾತು ಲೋಕದಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ಹಾಗೂ ಅತಿ ಹೆಚ್ಚು ಬ್ರ್ಯಾಂಡ್ ಹೊಂದಿರುವ ಜೋಡಿ ಇವರಾದ್ದರಿಂದ, ನಿರ್ಮಾಪಕರು ಇವರ ಬಗ್ಗೆಯೇ ಹೇಳಿರಬಹುದೇ ಎಂಬ ಅನುಮಾನ ವ್ಯಕ್ತವಾಗಿದೆ.
ನೆಟ್ಟಿಗರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವಿಡಿಯೋದಲ್ಲಿನ ಲಿಪ್ ಸಿಂಕ್ ಆಧರಿಸಿ ಹಲವರು ಇದು ದೀಪಿಕಾ-ರಣವೀರ್ ಜೋಡಿಯೇ ಎಂದು ವಾದಿಸುತ್ತಿದ್ದಾರೆ. ಆದರೆ, ಇದು ಕೇವಲ ಊಹಾಪೋಹವಷ್ಟೇ ಆಗಿದ್ದು, ಅಧಿಕೃತವಾಗಿ ಯಾರ ಹೆಸರೂ ಹೊರಬಂದಿಲ್ಲ.
ಇದನ್ನೂ ಓದಿ: ‘ಕಿಂಗ್’ ಸಿನಿಮಾ ಚಿತ್ರೀಕರಣದ ವಿಡಿಯೋ ಲೀಕ್: ಬೀಚ್‌ನಲ್ಲಿ ಶಾರುಖ್, ದೀಪಿಕಾ ರೊಮ್ಯಾನ್ಸ್
ಇದೇ ಸಂವಾದದಲ್ಲಿ ರೂಪಕ್ ಸಲೂಜಾ ಅವರು ನಟ ರಣಬೀರ್ ಕಪೂರ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಜಾಹೀರಾತು ಚಿತ್ರೀಕರಣದ ವೇಳೆ ರಣಬೀರ್ ಅತ್ಯಂತ ವೃತ್ತಿಪರ ಹಾಗೂ ಎಲ್ಲರ ಜೊತೆ ಬಹಳ ಗೌರವದಿಂದ ವರ್ತಿಸುವ ವ್ಯಕ್ತಿ’ ಎಂದು ಹೊಗಳಿದ್ದಾರೆ. ಒಂದು ಕಡೆ ರಣಬೀರ್ ಬಗ್ಗೆ ಪ್ರಶಂಸೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ಆ ‘ಕಿರಿಕಿರಿ’ ನೀಡುವ ಜೋಡಿ ಯಾರು ಎಂಬ ಕುತೂಹಲ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಮೊದಲು ಭೇಟಿ ಆಗಿದ್ದು ಜಾಹೀರಾತು ಶೂಟ್ನಲ್ಲೇ. ಇವರ ಬಗ್ಗೆ ಯಾವುದೇ ದೂರು ಬಂದಿಲ್ಲ. ಹೀಗಾಗಿ, ಇವರಲ್ಲ ಎಂದು ಅನೇಕರು ವಾದಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:22 am, Wed, 6 May 26