
ಅಹಮದಾಬಾದ್ನಲ್ಲಿ ಭೀಕರ ವಿಮಾನ ದುರಂತ (Ahmedabad Plane Crash) ಸಂಭವಿಸಿದೆ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಇಂಡಿಯಾ ವಿಮಾನ ಪತನ (Air India Plane Crash) ಆಗಿದೆ. ಈ ವಿಮಾನದಲ್ಲಿ 242 ಜನರು ಪ್ರಯಾಣ ಮಾಡುತ್ತಿದ್ದರು. ವಿಮಾನ ಪತನ ಆದ ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ. ಈ ದುರಂತಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಬಾಲಿವುಡ್ (Bollywood) ಸೆಲೆಬ್ರಿಟಿಗಳು ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಟ್ಟು ಎಷ್ಟು ಜನರು ಮೃತರಾಗಿದ್ದಾರೆ ಎಂಬ ಮಾಹಿತಿ ಸದ್ಯದಲ್ಲೇ ಸಿಗಲಿದೆ. ಅಕ್ಷಯ್ ಕುಮಾರ್, ಸನ್ನಿ ಡಿಯೋಲ್ ಮುಂತಾದ ಸೆಲೆಬ್ರಿಟಿಗಳು ಅಹ್ಮದಾಬಾದ್ ವಿಮಾನ ದುರಂತಕ್ಕೆ ಕಂಬನಿ ಮಿಡಿದ್ದಾರೆ.
‘ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ಸುದ್ದಿಯಿಂದ ಆಘಾತಕ್ಕೊಳಗಾಗಿದ್ದೇನೆ. ಬದುಕುಳಿದವರಿಗಾಗಿ ನನ್ನ ಹೃದಯಪೂರ್ವಕ ಪ್ರಾರ್ಥನೆ. ಅವರಿಗೆ ಅಗತ್ಯವಾದ ಆರೈಕೆ ಸಿಗಲಿ. ಪ್ರಾಣ ಕಳೆದುಕೊಂಡವರ ಆತ್ಮಕ್ಕೆ ಶಾಂತಿ ಸಿಗಲಿ. ಈ ಊಹಿಸಲಾಗದ ಸಮಯದಲ್ಲಿ ಮೃತರ ಕುಟುಂಬಗಳಿಗೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ’ ಎಂದು ಸನ್ನಿ ಡಿಯೋಲ್ ಅವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿ ಪರಿಣೀತಿ ಚೋಪ್ರಾ ಅವರು ಟ್ವೀಟ್ ಮಾಡಿ, ‘ಇಂದು ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದ ಕುಟುಂಬದ ಸದಸ್ಯರ ನೋವನ್ನು ಊಹಿಸಲು ಸಾಧ್ಯವಿಲ್ಲ. ಈ ಸಮಯದಲ್ಲಿ ದೇವರು ಅವರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ. ‘ತುಂಬಾ ಆಘಾತ ಆಗಿದೆ. ಈ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ನಟಿ ಖುಷ್ಬೂ ಅವರು ಬರೆದುಕೊಂಡಿದ್ದಾರೆ.
Devastated by the news of the plane crash in Ahmedabad.
Praying with all my heart for survivors — may they be found and receive the care they need.
May those who lost their lives rest in peace, and may their families find strength in this unimaginable time. 🙏— Sunny Deol (@iamsunnydeol) June 12, 2025
‘ಬಹಳ ಶಾಕ್ ಆಗಿದೆ. ಮಾತುಗಳೇ ಬರುತ್ತಿಲ್ಲ’ ಎಂದು ಅಕ್ಷಯ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ‘ವಿಮಾನ ದುರಂತದ ವಿಷಯ ತಿಳಿದು ಹೃದಯ ಛಿದ್ರವಾಗಿದೆ. ಈ ಘಟನೆಯಿಂದ ತೊಂದರೆಗೆ ಒಳಗಾದವರಿಗೆ ನನ್ನ ಪಾರ್ಥನೆಗಳು. ರಕ್ಷಣಾ ತಂಡಕ್ಕೆ ಶಕ್ತಿ ಸಿಗಲಿ’ ಎಂದಿದ್ದಾರೆ ನಟ ರಣದೀಪ್ ಹೂಡಾ. ಇನ್ನೂ ಅನೇಕ ಸೆಲೆಬ್ರಿಟಿಗಳು ಈ ಶಾಕಿಂಗ್ ಘಟನೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಅಪಘಾತಕ್ಕೀಡಾದ ಬೋಯಿಂಗ್ 787-8 ಡ್ರೀಮ್ಲೈನರ್ ಅಸಾಮಾನ್ಯ ಸಾಮರ್ಥ್ಯವಿರುವ ವಿಮಾನ; ಆದರೂ ಹೀಗಾಗಿದ್ದು ಆಶ್ಚರ್ಯ !
ಅಹ್ಮದಾಬಾದ್ನ ಸರ್ದಾರ್ ವಲ್ಲಭಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ AI171 ವಿಮಾನ ಪತನವಾಗಿದ್ದು, ವಿದೇಶದ ಅನೇಕರು ಕೂಡ ಈ ದುರಂತದಲ್ಲಿ ಮೃತರಾಗಿದ್ದಾರೆ. 169 ಭಾರತೀಯರು ಹಾಗೂ 53 ಬ್ರಿಟಿಷ್ ಪ್ರಜೆಗಳು ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:07 pm, Thu, 12 June 25