ಸಿನಿಮಾ ಆಗಲಿದೆ ಸುಕೇಶ್-ಜಾಕ್ವೆಲಿನ್ ಪ್ರೇಮ-ವಂಚನೆ ಕಹಾನಿ
ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekhar) ಕೋಟ್ಯಂತರ ಹಣ ವಸೂಲಿ ಪ್ರಕರಣ ಒಳಸುಳಿಗಳು ಬಗೆದಷ್ಟು ಬಿಚ್ಚಿಕೊಳ್ಳುತ್ತಲೇ ಇವೆ. ಕೇವಲ ತನ್ನ ಸಂವಹನ ಸಾಮರ್ಥ್ಯವನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು ಸುಕೇಶ್ ಹೇಗೆ ಕೋಟ್ಯಂತರ ಹಣ ವಂಚನೆ ಮಾಡಿದ್ದ ಎಂಬುದು ಸ್ವತಃ ತನಿಖಾಧಿಕಾರಿಗಳನ್ನು ಚಕಿತಗೊಳಿಸಿದೆ. ಜೈಲಿನಲ್ಲಿದ್ದುಕೊಂಡೆ ಬಾಲಿವುಡ್ ನಟಿಯರನ್ನು ಬುಟ್ಟಿಗೆ ಹಾಕಿಕೊಂಡ ಇವನ ಬುದ್ಧಿವಂತಿಕೆ ಕಂಡು ಅವಾಕ್ಕಾಗಿದ್ದಾರೆ. ಈ ಖತರ್ನಾಕ್ ಕಳ್ಳನ ಜೀವನ ಇದೀಗ ಸಿನಿಮಾ ಆಗಲಿದ್ದು, ಸುಕೇಶ್ನ ವಂಚನೆ ಪ್ರಕರಣಗಳ ಜೊತೆಗೆ ಅವನ ಹಾಗೂ ನಟಿ […]
ತಿಹಾರ್ ಜೈಲಿನಲ್ಲಿ ಬಂಧಿಯಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekhar) ಕೋಟ್ಯಂತರ ಹಣ ವಸೂಲಿ ಪ್ರಕರಣ ಒಳಸುಳಿಗಳು ಬಗೆದಷ್ಟು ಬಿಚ್ಚಿಕೊಳ್ಳುತ್ತಲೇ ಇವೆ. ಕೇವಲ ತನ್ನ ಸಂವಹನ ಸಾಮರ್ಥ್ಯವನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡು ಸುಕೇಶ್ ಹೇಗೆ ಕೋಟ್ಯಂತರ ಹಣ ವಂಚನೆ ಮಾಡಿದ್ದ ಎಂಬುದು ಸ್ವತಃ ತನಿಖಾಧಿಕಾರಿಗಳನ್ನು ಚಕಿತಗೊಳಿಸಿದೆ. ಜೈಲಿನಲ್ಲಿದ್ದುಕೊಂಡೆ ಬಾಲಿವುಡ್ ನಟಿಯರನ್ನು ಬುಟ್ಟಿಗೆ ಹಾಕಿಕೊಂಡ ಇವನ ಬುದ್ಧಿವಂತಿಕೆ ಕಂಡು ಅವಾಕ್ಕಾಗಿದ್ದಾರೆ.
ಈ ಖತರ್ನಾಕ್ ಕಳ್ಳನ ಜೀವನ ಇದೀಗ ಸಿನಿಮಾ ಆಗಲಿದ್ದು, ಸುಕೇಶ್ನ ವಂಚನೆ ಪ್ರಕರಣಗಳ ಜೊತೆಗೆ ಅವನ ಹಾಗೂ ನಟಿ ಜಾಕ್ವೆಲಿನ್ ಫರ್ನಾಂಡೀಸ್ನ (Jacqueline Fernandez) ಪ್ರೇಮ ಪ್ರಕರಣವನ್ನು ಮುಖ್ಯವಾಗಿರಿಸಿಕೊಂಡು ಸಿನಿಮಾವನ್ನು ಕಟ್ಟಲು ಬಾಲಿವುಡ್ ನಿರ್ದೇಶಕರೊಬ್ಬರು ಮುಂದಾಗಿದ್ದಾರೆ.
ತಿಹಾರ್ ಜೈಲಿನ ಜೈಲರ್ ದೀಪಕ್ ಶರ್ಮಾ ಹೇಳಿರುವಂತೆ, ಸುಕೇಶ್ ಚಂದ್ರಶೇಖರ್ ಕತೆಗೆ ಬಹಳಷ್ಟು ಬೇಡಿಕೆ ಇದೆ. ಹಲವು ಈ ಬಗ್ಗೆ ನನ್ನೊಟ್ಟಿಗೆ ಮಾತನಾಡಿ ತಮ್ಮ ಆಸಕ್ತಿ ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಆನಂದ್ ಕುಮಾರ್ ಸುಕೇಶ್ನ ಕತೆಯನ್ನು ಸಿನಿಮಾ ಮಾಡಲು ಯೋಜನೆ ರೂಪಿಸಿದ್ದಾರೆ ಎಂದಿದ್ದಾರೆ. ದೀಪಕ್ ಶರ್ಮಾ ಅವರು ನಿರ್ದೇಶಕ ಆನಂದ್ ಜೊತೆಗಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಸುದ್ದಿಗಳಿಗೆ ಇನ್ನಷ್ಟು ಪುಷ್ಠಿ ನೀಡಿದೆ.
ಆನಂದ್ ಕಳೆದೊಂದು ವರ್ಷದಿಂದಲೂ ಸುಕೇಶ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎನ್ನಲಾಗಿದೆ. ಸುಕೇಶ್ ವಿರುದ್ಧದ ಚಾರ್ಜ್ಶೀಟ್ಗಳು, ಹೇಳಿಕೆಗಳು ಇತರೆಗಳನ್ನು ಸಂಗ್ರಹಿಸಿ ಅವುಗಳ ಮಾಹಿತಿ ಆಧರಿಸಿ ಕತೆಯನ್ನು ಸಿದ್ಧಪಡಿಸುತ್ತಿದ್ದಾರೆ. ಸುಕೇಶ್ರ ಕೆಲವು ಆಪ್ತರನ್ನು ಸಹ ಆನಂದ್ ಈಗಾಗಲೇ ಸಂಪರ್ಕಿಸಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾವು ಸುಕೇಶ್ನ ಜೀವನದ ವಿಷಯಗಳ ಬಗ್ಗೆ ಇರಲಿದ್ದು, ಜಾಕ್ವೆಲಿನ್ ಫರ್ನಾಂಡೀಸ್ ಭಾಗವೂ ಸಿನಿಮಾದ ಪ್ರಧಾನ ಅಂಶವಾಗಿರಲಿದೆ.
ಸುಕೇಶ್ ಚಂದ್ರಶೇಖರ್ ಒಬ್ಬ ಮಹಾನ್ ವಂಚಕ. ಬೆಂಗಳೂರು ಮೂಲದ ಈತ ತನ್ನ 17ನೇ ವಯಸ್ಸಿನಿಂದಲೇ ವಂಚನೆ ಆರಂಭಿಸಿದ್ದ. ತಮಿಳುನಾಡಿನ ಜನಪ್ರಿಯ ರಾಜಕಾರಣಿ, ಹಾಲಿ ಶಾಸಕ ಟಿವಿವಿ ದಿನಕರನ್ಗೆ ಜಯಲಲಿತಾರ ಪಕ್ಷದ ರಾಜಕೀಯ ಚಿಹ್ನೆಯನ್ನು ಕೊಡಿಸುತ್ತೇನೆಂದು ಹೇಳಿ ಕೋಟ್ಯಂತರ ಹಣ ವಂಚನೆ ಮಾಡಿದ್ದ. ಅದೇ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನಲ್ಲಿದ್ದ. ಅಲ್ಲಿಯೂ ತನ್ನ ವಂಚನೆ ಮುಂದುವರೆಸಿ ಫೋರ್ಟಿಸ್ ಆಸ್ಪತ್ರೆ ಮುಖ್ಯಸ್ಥ ಶಿವೇಂಧರ್ ಪತ್ನಿಯಿಂದ 200 ಕೋಟಿ ವಸೂಲಿ ಮಾಡಿದ್ದ. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಆತನಿಗೆ ಬಾಲಿವುಡ್ ನಟಿಯರೊಟ್ಟಿಗೆ ಇದ್ದ ಸಂಬಂಧ, ಅವನ ಐಶಾರಾಮಿ ಜೀವನದ ಮಾಹಿತಿಗಳು ಹೊರಬಿದ್ದವು.