ಸ್ಟಾರ್​​ಗ​​ಳಿಗೆ ಸಂಭಾವನೆ ನೀಡಿ ಸುಸ್ತಾಗಿದ್ದಾರೆ ನಿರ್ಮಾಪಕರು; ಬಾಲಿವುಡ್​​ ಹೀರೋಗಳಿಗೆ ಸಿಗೋ ಹಣವೆಷ್ಟು?

ನಿರ್ಮಾಪಕರು ಸ್ಟಾರ್​​ಗಳಿಗೆ ಸಂಭಾವನೆ ನೀಡಿ, ಲಾಭದಲ್ಲಿ ಪಾಲು ನೀಡಿ ಸುಸ್ತಾಗಿದ್ದಾರೆ. ಈ ಬಗ್ಗೆ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಅವರು ಮಾತನಾಡಿದ್ದಾರೆ.

ಸ್ಟಾರ್​​ಗ​​ಳಿಗೆ ಸಂಭಾವನೆ ನೀಡಿ ಸುಸ್ತಾಗಿದ್ದಾರೆ ನಿರ್ಮಾಪಕರು; ಬಾಲಿವುಡ್​​ ಹೀರೋಗಳಿಗೆ ಸಿಗೋ ಹಣವೆಷ್ಟು?
ಸ್ಟಾರ್​​ಗ​​ಳಿಗೆ ಸಂಭಾವನೆ ನೀಡಿ ಸುಸ್ತಾಗಿದ್ದಾರೆ ನಿರ್ಮಾಪಕರು
Edited By:

Updated on: Jan 09, 2023 | 2:34 PM

ಬಾಲಿವುಡ್​ನಲ್ಲಿ (Bollywood) ಹಲವು ದೊಡ್ಡ ಬಜೆಟ್​ ಚಿತ್ರಗಳು ರಿಲೀಸ್ ಆಗುತ್ತಿವೆ. ಆದರೆ, ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಯಶಸ್ಸು ಕಾಣುತ್ತಿಲ್ಲ. 2022ರಲ್ಲಿ ರಿಲೀಸ್ ಆದ ಅನೇಕ ಹಿಂದಿ ಚಿತ್ರಗಳು ನಿರ್ಮಾಪಕರಿಗೆ ಹೊರೆಯಾಗಿವೆ. ಆದರೆ, ಬಾಲಿವುಡ್​ ಮಂದಿ ಸಿನಿಮಾ ಮಾಡುವುದನ್ನು ನಿಲ್ಲಿಸಿಲ್ಲ. ಹಲವು ದೊಡ್ಡ ಬಜೆಟ್ ಚಿತ್ರಗಳು ರಿಲೀಸ್​ಗೆ ರೆಡಿ ಇವೆ. ಅಸಲಿ ವಿಚಾರ ಏನೆಂದರೆ ನಿರ್ಮಾಪಕರು ಸ್ಟಾರ್​​ಗಳಿಗೆ ಸಂಭಾವನೆ ನೀಡಿ, ಲಾಭದಲ್ಲಿ ಪಾಲು ನೀಡಿ ಸುಸ್ತಾಗಿದ್ದಾರೆ. ಈ ಬಗ್ಗೆ ಖ್ಯಾತ ನಿರ್ಮಾಪಕ ಕರಣ್ ಜೋಹರ್ (Karan Johar) ಅವರು ಮಾತನಾಡಿದ್ದಾರೆ.

‘ಸಿನಿಮಾ ತಾರೆಯರೇ ಚಿತ್ರರಂಗದಲ್ಲಿ ಮುಖ್ಯರಾಗಿದ್ದಾರೆ. ಹಾಗಾಗಬಾರದು. ಹೀರೋಗಳು ಹೆಚ್ಚಿನ ಹಣವನ್ನು ಪಡೆಯುತ್ತಿದ್ದಾರೆ. ಲಾಭದ ಹಣದಲ್ಲಿ ಶೇ.50 ಹಣವನ್ನು ನಟರು ತೆಗೆದುಕೊಳ್ಳುತ್ತಾರೆ. ನಿರ್ದೇಶಕರಿಗೆ ಶೇ.30 ನೀಡಲಾಗುತ್ತಿದೆ. ಕೊನೆಯಲ್ಲಿ ಉಳಿಯೋದು ನಿರ್ಮಾಪಕ. ಆತನಿಗೆ ಸಿಗೋದು ಅತೀ ಕಡಿಮೆ ಹಣ’ ಎಂದಿದ್ದಾರೆ ಕರಣ್ ಜೋಹರ್.

‘ಹೊಸ ಹೀರೋಗಳಿಗೆ ದೊಡ್ಡ ಸ್ಟಾರ್​ಡಂ ಇಲ್ಲ. ಶಾರುಖ್​ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್​ಗೆ ಸಿಕ್ಕ ಸ್ಟಾರ್​ಗಿರಿ ಈಗಿನ ನಟರಿಗೆ ಸಿಗುತ್ತಿಲ್ಲ. ಖ್ಯಾತಿ ಹೊಂದುವುದು ಹಾಗೂ ಸ್ಟಾರ್​ಡಂಗೆ ವ್ಯತ್ಯಾಸವಿದೆ. ಯೂಟ್ಯೂಬರ್ ಕೂಡ ಫೇಮಸ್ ಆಗಬಹುದು. ಆದರೆ, ಅವನಿಗೆ ಸ್ಟಾರ್​ಗಿರಿ ಸಿಗಲ್ಲ’ ಎಂದಿದ್ದಾರೆ ಕರಣ್.

ಇದನ್ನೂ ಓದಿ
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

ಸ್ಟಾರ್​ಗಳಿಗೆ ಲಾಭದಲ್ಲಿ ಹೆಚ್ಚಿನ ಹಣ ಸಿಗುತ್ತದೆ ಎಂದಿದ್ದಾರೆ ಕರಣ್. ‘ಲಾಭದಲ್ಲಿ ಸ್ಟಾರ್ ನಟರಿಗೆ ಶೇ.60 ಹಣ ಹೋಗುತ್ತದೆ. ಸ್ಟಾರ್ ಅಲ್ಲದಿದ್ದರೆ ಲಾಭದಲ್ಲಿ ಶೇ.20 ಹಣ ಸಿಗುತ್ತದೆ. ಹಂಚಿಕೆದಾರರ ಬಳಿಯಾದರೂ ಚೌಕಾಸಿ ಮಾಡಬಹುದು. ಆದರೆ, ಹೀರೋಗಳ ಬಳಿ ಇದು ಸಾಧ್ಯವೇ ಇಲ್ಲ’ ಅನ್ನೋದು ಕರಣ್ ಜೋಹರ್ ಮಾತು.

ಇದನ್ನೂ ಓದಿ: ‘ಬಾಲಿವುಡ್​ ಕಲಾವಿದರಲ್ಲಿ ನನಗೆ ಟ್ಯಾಲೆಂಟ್​ ಎಂಬುದು ಕಂಡೇ ಇಲ್ಲ’; ಅಚ್ಚರಿಯ ಹೇಳಿಕೆ ನೀಡಿದ ಕರಣ್ ಜೋಹರ್

ಶಾರುಖ್ ಖಾನ್, ಸಲ್ಮಾನ್ ಖಾನ್ ಮೊದಲಾದ ಸ್ಟಾರ್ ಹೀರೋಗಳು ಪ್ರತಿ ಸಿನಿಮಾಗೆ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅವರ ಚಿತ್ರ ಸೋತ ಹೊರತಾಗಿಯೂ ಅವರು ತಮಗೆ ಸಿಗುವ ಸಂಭಾವನೆ ಕಡಿಮೆ ಮಾಡಿಕೊಂಡಿಲ್ಲ. ಈ ಬಗ್ಗೆ ಅನೇಕ ನಿರ್ಮಾಪಕರಿಗೆ ಬೇಸರ ಇದೆ. ಹೆಚ್ಚಿನ ಸಂಭಾವನೆ ಕೇಳಿದ್ದಕ್ಕೆ ಅಕ್ಷಯ್ ಕುಮಾರ್ ಅವರು ಸಾಕಷ್ಟು ಆಫರ್​ ಕಳೆದುಕೊಂಡಿದ್ದಾರೆ ಎನ್ನುವ ಸುದ್ದಿ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ