‘ಬಾಲಿವುಡ್​ ಕಲಾವಿದರಲ್ಲಿ ನನಗೆ ಟ್ಯಾಲೆಂಟ್​ ಎಂಬುದು ಕಂಡೇ ಇಲ್ಲ’; ಅಚ್ಚರಿಯ ಹೇಳಿಕೆ ನೀಡಿದ ಕರಣ್ ಜೋಹರ್

ತಮ್ಮ ಒಡೆತನದ ಧರ್ಮ ಪ್ರೊಡಕ್ಷನ್​ನಲ್ಲಿ ಅವರು ದೊಡ್ಡ ದೊಡ್ಡ ಸೆಲೆಬ್ರಿಟಿ ಮಕ್ಕಳಿಗೆ ಅವಕಾಶ ನೀಡುತ್ತಾರೆ ಎಂಬ ದೂರು ಕೂಡ ಇದೆ. ಈ ಆರೋಪಗಳ ಬಗ್ಗೆ ಕರಣ್ ತಲೆಕೆಡಿಸಿಕೊಂಡಿಲ್ಲ. ಈ ಮಧ್ಯೆ ಅವರು ನೀಡಿದ ಹೇಳಿಕೆ ಸಾಕಷ್ಟು ಅಚ್ಚರಿ ಮೂಡಿಸಿದೆ.  

‘ಬಾಲಿವುಡ್​ ಕಲಾವಿದರಲ್ಲಿ ನನಗೆ ಟ್ಯಾಲೆಂಟ್​ ಎಂಬುದು ಕಂಡೇ ಇಲ್ಲ’; ಅಚ್ಚರಿಯ ಹೇಳಿಕೆ ನೀಡಿದ ಕರಣ್ ಜೋಹರ್
ಕರಣ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 10, 2022 | 7:34 AM

ಕರಣ್ ಜೋಹರ್ (Karan Johar) ಎಂದಾಕ್ಷಣ ನೆನಪಾಗೋದು ಸ್ಟಾರ್​ ಕಿಡ್​ಗಳ ಮಕ್ಕಳು. ಸೆಲೆಬ್ರಿಟಿಗಳ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸುವುದರಲ್ಲಿ ಕರಣ್ ಜೋಹರ್ ಸದಾ ಮುಂದಿರುತ್ತಾರೆ. ಅನನ್ಯಾ ಪಾಂಡೆ (Ananya Panday) ಸೇರಿದಂತೆ ಹಲವರಿಗೆ ಅವರು ಅವಕಾಶ ನೀಡಿದ್ದಾರೆ. ಇದರಿಂದ ಕರಣ್​ ಅವರನ್ನು ಹಲವರು ಟೀಕೆ ಮಾಡಿದ್ದಾರೆ. ಈ ಮಧ್ಯೆ ಕರಣ್ ಜೋಹರ್ ಅವರು ನೀಡಿದ ಹೇಳಿಕೆ ಅಚ್ಚರಿ ಮೂಡಿಸಿದೆ. ‘ಬಾಲಿವುಡ್​ ಕಲಾವಿದರಲ್ಲಿ ಟ್ಯಾಲೆಂಟ್ ಸಿಕ್ಕಿಲ್ಲ’ ಎಂದು ನೇರ ನುಡಿಯಲ್ಲಿ ಹೇಳಿದ್ದಾರೆ. ಅವರು ಇದನ್ನು ತಮಾಷೆಗೆ ಹೇಳಿದ್ದೋ ಅಥವಾ ಈ ತಮಾಷೆಯ ಹಿಂದೆ ಗಂಭೀರತೆ ಇದೆಯೋ ಎಂಬ ವಿಚಾರದ ಬಗ್ಗೆ ಫ್ಯಾನ್ಸ್​ಗೆ ಗೊಂದಲ ಮೂಡಿದೆ.

ಕರಣ್ ಜೋಹರ್ ಅವರು ‘ಕಾಫಿ ವಿತ್ ಕರಣ್’ ಶೋ ನಡೆಸಿಕೊಡುತ್ತಾರೆ. ಇದಕ್ಕೆ ಸ್ಟಾರ್ ನಟರು ಮತ್ತು ಅವರ ಮಕ್ಕಳನ್ನು ಕರೆತರುತ್ತಾರೆ ಎಂಬ ಆರೋಪವೂ ಇದೆ. ಇನ್ನು, ತಮ್ಮ ಒಡೆತನದ ಧರ್ಮ ಪ್ರೊಡಕ್ಷನ್​ನಲ್ಲಿ ಅವರು ದೊಡ್ಡ ದೊಡ್ಡ ಸೆಲೆಬ್ರಿಟಿ ಮಕ್ಕಳಿಗೆ ಅವಕಾಶ ನೀಡುತ್ತಾರೆ ಎಂಬ ದೂರು ಕೂಡ ಇದೆ. ಈ ಆರೋಪಗಳ ಬಗ್ಗೆ ಕರಣ್ ತಲೆಕೆಡಿಸಿಕೊಂಡಿಲ್ಲ. ಈ ಮಧ್ಯೆ ಅವರು ನೀಡಿದ ಹೇಳಿಕೆ ಸಾಕಷ್ಟು ಅಚ್ಚರಿ ಮೂಡಿಸಿದೆ.

ಅಮೇಜಾನ್ ಮಿನಿ ಟಿವಿಯಲ್ಲಿ ಬರುವ ‘ಕೇಸ್ ತೋ ಬಂತಾ ಹೈ’ ಶೋನಲ್ಲಿ ಕರಣ್ ಅತಿಥಿಯಾಗಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ನಟ ರಿತೇಶ್ ದೇಶ್​ಮುಖ್ ಅವರು ಕೇಳಿದ ಪ್ರಶ್ನೆಗೆ ಕರಣ್ ನೇರವಾಗಿ ಉತ್ತರಿಸಿದ್ದಾರೆ. ಕರಣ್ ಜೋಹರ್ ಅವರ ಉತ್ತರ ಕಂಡು ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.

ಇದನ್ನೂ ಓದಿ
Image
Pushpa 2: ರಶ್ಮಿಕಾ ಮಂದಣ್ಣ ಪಾತ್ರ ಸಾಯುತ್ತೆ ಅನ್ನೋದು ನಿಜವೇ? ‘ಪುಷ್ಪ 2’ ನಿರ್ಮಾಪಕರು​ ನೀಡಿದ ಪ್ರತಿಕ್ರಿಯೆ ಇಲ್ಲಿದೆ..
Image
Rashmika Mandanna: ರಶ್ಮಿಕಾ ಮಂದಣ್ಣ ಗುಟ್ಟಾಗಿ ‘777 ಚಾರ್ಲಿ’ ನೋಡಿದ್ರಾ? ಜನರ ಅನುಮಾನಕ್ಕೆ ಕಾರಣ ಆಗಿದೆ ಈ ವಿಡಿಯೋ
Image
ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್​ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
Image
ರಶ್ಮಿಕಾ ಮಂದಣ್ಣ ಹೊಸ ವಿಡಿಯೋ ವೈರಲ್​; ಎನರ್ಜಿ ಕಂಡು ವಾವ್​ ಎಂದ ಅಭಿಮಾನಿಗಳು

‘ನೀವು ಯಾವುದಾದರೂ ಕಲಾವಿದರನ್ನು ಆಯ್ಕೆ ಮಾಡಿದಾಗ ಲುಕ್​ಗೆ ಮಾತ್ರ ಆದ್ಯತೆ ನೀಡುತ್ತೀರಾ’ ಎಂದು ಕರಣ್​​ಗೆ ರಿತೇಶ್​ ಪ್ರಶ್ನೆ ಮಾಡಿದರು. ‘ನಾನು ಎಂಟರ್​ಟೇನ್​ಮೆಂಟ್ ವಿಚಾರವನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೇನೆ. ಕೆಲವೊಮ್ಮೆ ಟ್ಯಾಲೆಂಟ್​ಗಾಗೂ ಹುಡುಕಾಟ ನಡೆಸುತ್ತೇನೆ. ಆದರೆ, ಅದು ಈವರೆಗೆ ಸಿಕ್ಕಿಲ್ಲ’ ಎಂದಿದ್ದಾರೆ. ಈ ಮೂಲಕ ಬಾಲಿವುಡ್​ ಕಲಾವಿದರಲ್ಲಿ ಟ್ಯಾಲೆಂಟ್ ಕಂಡಿಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.

‘ಕೇಸ್ ತೋ ಬಂತಾ ಹೈ’ ಅನ್ನೋದು ಕಾಮಿಡಿ ಶೋ. ಕೋರ್ಟ್​ ಮಾದರಿಯಲ್ಲೇ ಈ ಶೋ ನಡೆಯುತ್ತದೆ. ರಿತೇಶ್ ಅವರು ಡಿಫೆನ್ಸ್ ಲಾಯರ್ ರೀತಿಯಲ್ಲಿ ಕಾಣಿಸಿಕೊಂಡರೆ, ವರುಣ್ ಶರ್ಮಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಸ್ಥಾನದಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಪಡೆದ ಕುಶಾ ಕಪಿಲ್ ಜಡ್ಜ್​ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ‘ರಶ್ಮಿಕಾ ಮಂದಣ್ಣ ಡಾರ್ಲಿಂಗ್’; ಕರಣ್ ಜೋಹರ್ ಶೋನಲ್ಲಿ ಮಾತನಾಡಿದ ವಿಜಯ್ ದೇವರಕೊಂಡ

ಕರಣ್ ಜೋಹರ್ ನಿರ್ಮಾಣದ ‘ಬ್ರಹ್ಮಾಸ್ತ್ರ’ ಸಿನಿಮಾ ಶುಕ್ರವಾರ (ಸೆಪ್ಟೆಂಬರ್ 9) ಬಿಡುಗಡೆ ಆಗಿದೆ. ರಣಬೀರ್ ಕಪೂರ್, ಆಲಿಯಾ ಭಟ್ ಮೊದಲಾದವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಅಯಾನ್ ಮುಖರ್ಜಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ.

Published On - 7:34 am, Sat, 10 September 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ