ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡಿದ ಆ ನಿರ್ದೇಶಕ ಸಲಿಂಗಿ
ಬಾಲಿವುಡ್ ಸ್ಟಾರ್‌ಗಳು ತಮ್ಮ ಲೈಂಗಿಕತೆ ಬಹಿರಂಗಪಡಿಸಲು ಹಿಂಜರಿಯುತ್ತಾರೆ. ಹಿರಿಯ ಪತ್ರಕರ್ತೆ ಸಿಮಿ ಚಂದೋಕ್, ಪ್ರಸಿದ್ಧ ನಿರ್ದೇಶಕರೊಬ್ಬರು ಸಲಿಂಗಿ ಎಂದು ಆರೋಪಿಸಿದ್ದಾರೆ. ಹೀರೋಗು ಲೈಂಗಿಕತೆ ಬಗ್ಗೆ ಹೇಳಿಕೊಳ್ಳದಿರಲು ಸಿನಿಮಾ ಕೂಡ ಕಾರಣ ಎಂದಿದ್ದಾರೆ. ರಣವೀರ್, ಆಯುಷ್ಮಾನ್ ಖುರಾನಾ ಉದಾಹರಣೆಗಳನ್ನು ನೀಡಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಸ್ಟಾರ್ ಹಿರೋಗಳು, ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ತಮ್ಮ ಲೈಂಗಿಕತೆ ಬಗ್ಗೆ ಮಾತನಾಡೋಕೆ ಹೆಚ್ಚು ಇಷ್ಟಪಡೋದಿಲ್ಲ. ಕರಣ್ ಜೋಹರ್ ಅವರು ಪರುಷಪ್ರಿಯ ಎಂಬ ಆರೋಪ ಇದೆ. ಆದರೆ, ಇದನ್ನು ಅವರು ಒಪ್ಪಿಕೊಳ್ಳೋದಿಲ್ಲ. ಹೀಗಿರುವಾಗಲೇ ಹಿರಿಯ ಪತ್ರಕರ್ತೆ ಸಿಮಿ ಚಂದೋಕ್ ಅವರು ಒಂದು ಬಾಂಬ್ ಸಿಡಿಸಿದ್ದಾರೆ. ಹಲವು ಸ್ಟಾರ್ಗಳ ಜೊತೆ ಕೆಲಸ ಮಾಡಿದ ನಿರ್ದೇಶಕ ಸಲಿಂಗಿ ಎಂದು ಆರೋಪ ಮಾಡಿದ್ದಾರೆ.
ಬಾಲಿವುಡ್ ಹೀರೋಗಳು ಈ ವಿಷಯವನ್ನು ಯಾಕೆ ಓಪನ್ ಆಗಿ ಒಪ್ಪಿಕೊಳ್ಳೋದಿಲ್ಲ ಎಂಬುದಕ್ಕೆ ಸಿಮಿ ಉತ್ತಮ ಉದಾಹರಣೆ ನೀಡಿದ್ದಾರೆ. ‘ಬಾಲಿವುಡ್ ನಟನೋರ್ವ ತಾನು ಗೇ ಎಂದು ಒಪ್ಪಿಕೊಂಡ ಎಂದಿಟ್ಟುಕೊಳ್ಳಿ. ಆ ಬಳಿಕ ಆತ ಸಿನಿಮಾದಲ್ಲಿ ಹೀರೋಯಿನ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುತ್ತಾನೆ. ಇದನ್ನು ಪ್ರೇಕ್ಷಕ ಒಪ್ಪಿಕೊಳ್ಳುತ್ತಾನಾ’ಎಂದು ಅವರು ಪ್ರಶ್ನೆ ಮಾಡಿದ್ದಾರೆ.
‘ಬಾಲಿವುಡ್ನ ಓರ್ವ ಖ್ಯಾತ ನಿರ್ದೇಶಕ ಸಲಿಂಗಿ. ಅವರ ಹೆಸರನ್ನು ನಾನು ಇಲ್ಲಿ ಹೇಳುವುದಿಲ್ಲ. ಅವರು ಸಲ್ಮಾನ್ ಖಾನ್, ರಣವೀರ್ ಸಿಂಗ್, ಹೃತಿಕ್ ರೋಷನ್, ಶಾಹಿದ್ ಕಪೂರ್ ಹಾಗೂ ಇತರರ ಜೊತೆ ಕೆಲಸ ಮಾಡಿದ್ದಾರೆ. ಅವರು ಗೇ ಎಂದು ಆ ನಟರೆಲ್ಲರಿಗೂ ಗೊತ್ತು. ಮಹಿಳೆಯರ ಜೊತೆ ಆತ ಹೆಚ್ಚು ಸಮಯ ಇರೋದಿಲ್ಲ’ ಎಂದಿದ್ದಾರೆ ಅವರು. ‘ಓರ್ವ ನಿರ್ದೇಶಕ ತನ್ನ ಲೈಂಗಿಕತೆಯ ಬಗ್ಗೆ ಬಹಿರಂಗವಾಗಿ ಹೇಳಿದರೆ, ಅನೇಕ ಪ್ರಮುಖ ನಟರು ಅವರೊಂದಿಗೆ ಕೆಲಸ ಮಾಡಲು ಹಿಂಜರಿಯುತ್ತಾರೆ. ಹೀರೋಗಳು ಕಾಸ್ಟಿಂಗ್ ಕೌಚ್‌ಗೆ ಹೆದರುತ್ತಾರೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ವೇದಿಕೆಯಲ್ಲಿ ತುಳು ಸಿನಿಮಾವನ್ನು ಕೊಂಡಾಡಿದ ಸುನಿಲ್ ಶೆಟ್ಟಿ
‘ಅನೇಕ ನಟರಿಗೆ ಆರಂಭಿಕ ದಿನಗಳಲ್ಲಿ ಕಾಂಪ್ರಮೈಸ್ ಆಗುವಂತೆ ಕೇಳಲಾಯಿತು. ಆಯುಷ್ಮಾನ್ ಖುರಾನಾ, ರಣವೀರ್ ಸಿಂಗ್ ಇದನ್ನು ಓಪನ್ ಆಗಿ ಹೇಳಿದ್ದಾರೆ. ಶಾರುಖ್ ಖಾನ್ ಹಾಗೂ ಕರಣ್ ಜೋಹರ್ ಸಂಬಂಧದ ಬಗ್ಗೆ ಚರ್ಚೆ ಆಗಿತ್ತು. ಶಾರುಖ್ ಖಾನ್ ಇದನ್ನು ತಳ್ಳಿ ಹಾಕಿದ್ದರು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ಈಗ ಆ ನಿರ್ದೇಶಕ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:04 pm, Wed, 7 January 26




