ಬಾಲಿವುಡ್ ವೇದಿಕೆಯಲ್ಲಿ ತುಳು ಸಿನಿಮಾವನ್ನು ಕೊಂಡಾಡಿದ ಸುನಿಲ್ ಶೆಟ್ಟಿ
Sunil Shetty movie: ಸುನಿಲ್ ಶೆಟ್ಟಿ ಹಿಂದಿ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ, ಕೆಲವಾರು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡಕ್ಕಂತೂ ಸುನಿಲ್ ಶೆಟ್ಟಿ ಹೊಸಬರೇನೂ ಅಲ್ಲ. ಸುದೀಪ್ ಜೊತೆಗೆ ‘ಪೈಲ್ವಾನ್’ ಸಿನಿಮಾನಲ್ಲಿ ಈಗಾಗಲೇ ನಟಿಸಿದ್ದಾರೆ. ಇತ್ತೀಚೆಗಷ್ಟೆ ಅವರು ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಸಿನಿಮಾ ಒಂದನ್ನು ಮಾಡಿದ್ದು, ಬಾಲಿವುಡ್ಗೆ ಸಂಬಂಧಿಸಿದ ವೇದಿಕೆಯೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಸಿನಿಮಾವನ್ನು ಕೊಂಡಾಡಿದ್ದಾರೆ.

ಸುನಿಲ್ ಶೆಟ್ಟಿ (Sunil Shetty), ಬಾಲಿವುಡ್ನ ಸ್ಟಾರ್ ನಟರಲ್ಲಿ ಒಬ್ಬರು. ಮಂಗಳೂರು ಮೂಲದವರಾದ ಸುನಿಲ್ ಶೆಟ್ಟಿ ದಶಕಗಳಿಂದಲೂ ಬಾಲಿವುಡ್ನಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಅತ್ಯುತ್ತಮ ಸಿನಿಮಾಗಳಲ್ಲಿ ನಟಿಸಿರುವ ಸುನಿಲ್ ಶೆಟ್ಟಿ, ಬಾಲಿವುಡ್ನಲ್ಲಿ ಬಾಡಿ ಬಿಲ್ಡಿಂಗ್ ಸಂಸ್ಕೃತಿ ಶುರುವಾಗಲು ಕಾರಣರಾದವರಲ್ಲಿ ಒಬ್ಬರು ಸಹ. ಸುನಿಲ್ ಶೆಟ್ಟಿ ಹಿಂದಿ ಸಿನಿಮಾಗಳಲ್ಲಿ ಮಾತ್ರವೇ ಅಲ್ಲದೆ, ಕೆಲವಾರು ದಕ್ಷಿಣ ಭಾರತದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡಕ್ಕಂತೂ ಸುನಿಲ್ ಶೆಟ್ಟಿ ಹೊಸಬರೇನೂ ಅಲ್ಲ. ಸುದೀಪ್ ಜೊತೆಗೆ ‘ಪೈಲ್ವಾನ್’ ಸಿನಿಮಾನಲ್ಲಿ ಈಗಾಗಲೇ ನಟಿಸಿದ್ದಾರೆ. ಇತ್ತೀಚೆಗಷ್ಟೆ ಅವರು ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಸಿನಿಮಾ ಒಂದನ್ನು ಮಾಡಿದ್ದು, ಬಾಲಿವುಡ್ಗೆ ಸಂಬಂಧಿಸಿದ ವೇದಿಕೆಯೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಸಿನಿಮಾವನ್ನು ಕೊಂಡಾಡಿದ್ದಾರೆ.
ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ಕ್ರೀಡಾಪಟುಗಳ ಸಂದರ್ಶನ ಮಾಡುವ, ಹಿಂದಿಯ ಜನಪ್ರಿಯ ಸಂದರ್ಶನದ ಶೋ ಆಗಿರುವ ‘ಲಲ್ಲನ್ಟಾಪ್’ನಲ್ಲಿ ಸುನಿಲ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸುನಿಲ್ ಶೆಟ್ಟಿ, ತಾವು ನಟಿಸಿರುವ ತುಳು ಸಿನಿಮಾ ‘ಜೈ’ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವುದಲ್ಲದೆ, ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ.
‘ನಾನು ತುಳುನಾಡಿನವನು, ಮಂಗಳೂರು ನನ್ನ ಮೂಲ ಊರು. ನಾನು ಇತ್ತೀಚೆಗಷ್ಟೆ ಒಂದು ತುಳು ಸಿನಿಮಾನಲ್ಲಿ ನಟಿಸಿದೆ. ತುಳು ಸಿನಿಮಾಗಳಿಗೆ ಬಹಳ ಎಂದರೆ ಬಹಳ ಕಡಿಮೆ ವೀಕ್ಷಕರಿದ್ದಾರೆ. ಆ ಚಿತ್ರರಂಗಕ್ಕೆ ಬೆಂಬಲ ನೀಡಲೆಂದು ನಾನು ತುಳು ಸಿನಿಮಾನಲ್ಲಿ ನಟಿಸಿದೆ. ಸಿನಿಮಾದ ಹೆಸರು ‘ಜೈ’ ಎಂದು. ಸಿನಿಮಾ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ನನ್ನ ನಟನೆಗೆ ಬಹಳ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಬಹುಷಃ ನನ್ನ ಮೊದಲ ಸಿನಿಮಾ ‘ಬಲವಾನ್’ನಲ್ಲಿ ನನಗೆ ಸಿಕ್ಕಂಥ ಪ್ರಶಂಸೆ ಈಗ ‘ಜೈ’ ಸಿನಿಮಾಕ್ಕಾಗಿ ಸಿಗುತ್ತಿದೆ’ ಎಂದಿದ್ದಾರೆ ಸುನಿಲ್ ಶೆಟ್ಟಿ.
ಇದನ್ನೂ ಓದಿ:ಸುನಿಲ್ ಶೆಟ್ಟಿ ಮಗನ ಬಗ್ಗೆ ಇಲ್ಲ ಸಲ್ಲದ ಸುದ್ದಿ; ಸಿಟ್ಟಾದ ನಟ
‘ಈಗ ಭಾಷೆಯ ಗಡಿ ಇಲ್ಲ. ಅದು ಹೊರಟು ಹೋಗಿದೆ, ಈಗ ಇರುವುದು ಏನಿದ್ದರೂ ಕಂಟೆಂಟ್ನ ಗಡಿ. ನಿಮ್ಮಲ್ಲಿ ಒಳ್ಳೆಯ ಕಂಟೆಂಟ್ ಇದ್ದರೆ ಭಾಷೆ ಅದಕ್ಕೆ ಅಡ್ಡಿ ಆಗುವುದಿಲ್ಲ, ಯಾವುದೇ ಭಾಷೆ ಆದರೂ ಕಂಟೆಂಟ್ ಚೆನ್ನಾಗಿದ್ದರೆ ಖಂಡಿತ ಅದನ್ನು ಜನ ಒಪ್ಪುತ್ತಾರೆ. ಎಲ್ಲ ರೀತಿಯ ಜನರಿಗೂ ಅದು ಇಷ್ಟವಾಗುತ್ತದೆ’ ಎಂದಿದ್ದಾರೆ ಸುನಿಲ್ ಶೆಟ್ಟಿ.
ಅಂದಹಾಗೆ ಸುನಿಲ್ ಶೆಟ್ಟಿ ನಟಿಸಿರುವುದು, ಮಾಜಿ ಬಿಗ್ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಸಹ ಮಾಡಿರುವ ‘ಜೈ’ ಸಿನಿಮಾನಲ್ಲಿ. ಈ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದೆ. ರೂಪೇಶ್ ಶೆಟ್ಟಿ ಒಂದರ ಹಿಂದೊಂದು ತುಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಿರ್ದೇಶನ, ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸಿನಿಮಾವನ್ನು ದುಬೈ, ಕತಾರ್, ಗೋವಾ, ಮುಂಬೈ, ತುಳುನಾಡು, ಕರಾವಳಿ ಭಾಗದಲ್ಲಿ ಬಿಡುಗಡೆ ಮಾಡಿದ್ದರು. ‘ಜೈ’ ಸಿನಿಮಾ ಭರ್ಜರಿ ಗಳಿಕೆಯನ್ನು ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




