Brahmastra Collection: ಎರಡೇ ದಿನಕ್ಕೆ 160 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಬ್ರಹ್ಮಾಸ್ತ್ರ’
Alia Bhatt | Ranbir Kapoor: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿಯಾಗಿ ನಟಿಸಿದ ಮೊದಲ ಸಿನಿಮಾ ‘ಬ್ರಹ್ಮಾಸ್ತ್ರ’. ಇಬ್ಬರ ಮೊದಲ ಕಾಂಬಿನೇಷನ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹಲವು ತಿಂಗಳಿನಿಂದ ಕಳೆಗುಂದಿದ್ದ ಹಿಂದಿ ಚಿತ್ರರಂಗಕ್ಕೆ (Bollywood) ಈಗ ಹೊಸ ಚೈತನ್ಯ ಬಂದಂತೆ ಆಗಿದೆ. ಎರಡೇ ದಿನದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಲ್ಲಂತಹ ಸಿನಿಮಾಗಾಗಿ ಇಡೀ ಬಿ-ಟೌನ್ ಕಾದು ಕುಳಿತಿತ್ತು. ಅದನ್ನು ನಿಜ ಮಾಡುವ ರೀತಿಯಲ್ಲಿ ‘ಬ್ರಹ್ಮಾಸ್ತ್ರ’ (Brahmastra) ಸಿನಿಮಾ ಬಿಡುಗಡೆ ಆಗಿದೆ. ಸೆಪ್ಟೆಂಬರ್ 9ರಂದು ರಿಲೀಸ್ ಆದ ಈ ಚಿತ್ರ ವಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ವಿಮರ್ಶಕರು ಈ ಸಿನಿಮಾವನ್ನು ತೆಗಳಿದ್ದಾರೆ. ಆದರೆ ಬಾಕ್ಸ್ ಆಫೀಸ್ ಕಲೆಕ್ಷನ್ (Brahmastra Box Office Collection) ವಿಚಾರದಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾ ಹಿಂದೆ ಬಿದ್ದಿಲ್ಲ. ಎರಡು ದಿನಕ್ಕೆ ಈ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 160 ಕೋಟಿ ರೂಪಾಯಿ ಬಾಚಿಕೊಂಡಿದೆ. ಮೂರನೇ ದಿನದ ಕಲೆಕ್ಷನ್ ಸೇರಿದರೆ ಅನಾಯಾಸವಾಗಿ 200 ಕೋಟಿ ರೂಪಾಯಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ಬ್ರೇಕ್ ಸಿಕ್ಕಿದೆ.
ಅಯಾನ್ ಮುಖರ್ಜಿ ಅವರು ‘ಬ್ರಹ್ಮಾಸ್ತ್ರ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಒಟ್ಟು ಮೂರು ಪಾರ್ಟ್ಗಳಲ್ಲಿ ಈ ಚಿತ್ರ ಬರಲಿದೆ. ಅದರಲ್ಲಿ ಮೊದಲ ಪಾರ್ಟ್ ಈಗ ಬಿಡುಗಡೆ ಆಗಿದೆ. ಅದ್ದೂರಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣ ಆಗಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಮಾಯಿ ಆಗುತ್ತಿರುವುದಕ್ಕೆ ಚಿತ್ರತಂಡಕ್ಕೆ ಸಖತ್ ಖುಷಿ ಆಗಿದೆ.
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರಿಬ್ಬರು ಜೋಡಿಯಾಗಿ ನಟಿಸಿದ ಮೊದಲ ಸಿನಿಮಾ ‘ಬ್ರಹ್ಮಾಸ್ತ್ರ’. ಇಬ್ಬರ ಮೊದಲ ಕಾಂಬಿನೇಷನ್ಗೆ ಜನರು ಫಿದಾ ಆಗಿದ್ದಾರೆ. ವೀಕೆಂಡ್ನಲ್ಲಿ ಈ ಚಿತ್ರವನ್ನು ಪ್ರೇಕ್ಷಕರು ಮುಗಿಬಿದ್ದು ನೋಡಿದ್ದಾರೆ. ಅದರ ಪರಿಣಾಮವಾಗಿ ದೊಡ್ಡ ಮೊತ್ತದ ಕಲೆಕ್ಷನ್ ಆಗುತ್ತಿದೆ. ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ ಮುಂತಾದ ಸ್ಟಾರ್ ಕಲಾವಿದರು ಅಭಿನಯಿಸಿದ್ದಾರೆ. ಶಾರುಖ್ ಖಾನ್ ಅವರು ಒಂದು ಅತಿಥಿ ಪಾತ್ರ ಮಾಡಿರುವುದು ವಿಶೇಷ.
ರಣಬೀರ್ ಕಪೂರ್ ಅವರು ನಟಿಸಿದ ‘ಶಂಷೇರಾ’ ಸಿನಿಮಾ ಈ ವರ್ಷ ತೆರೆಕಂಡು ಹೀನಾಯವಾಗಿ ಸೋತಿತ್ತು. ಆ ಬೇಸರವನ್ನು ಮರೆಸುವ ರೀತಿಯಲ್ಲಿ ‘ಬ್ರಹ್ಮಾಸ್ತ್ರ’ ಸಿನಿಮಾದ ಕಲೆಕ್ಷನ್ ಆಗುತ್ತಿದೆ. ಇನ್ನು, ಆಲಿಯಾ ಭಟ್ ಅವರಿಗೆ ಈ ವರ್ಷ ‘ಗಂಗೂಬಾಯಿ ಕಾಠಿಯಾವಾಡಿ’, ‘ಆರ್ಆರ್ಆರ್’ ಸಿನಿಮಾದ ಬಳಿಕ ಸಿಗುತ್ತಿರುವ ಮೂರನೇ ಗೆಲುವು ಇದಾಗಿದೆ. ಕಳಪೆ ಗ್ರಾಫಿಕ್ಸ್ ಇದೆ ಎಂಬ ಕಾರಣಕ್ಕೆ ಒಂದು ವರ್ಗದ ಪ್ರೇಕ್ಷಕರು ‘ಬ್ರಹ್ಮಾಸ್ತ್ರ’ ಚಿತ್ರವನ್ನು ಜರಿದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.