‘ಅನಿಮಲ್’, ‘ಪುಷ್ಪ 2’ ದಾಖಲೆಯನ್ನೂ ಮುರಿದು ಹಾಕಿದ ‘ಛಾವಾ’
Chhaava Movie Box Office collection: ‘ಛಾವಾ’ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕಾಚಾರ. ದಿನದಿಂದ ದಿನಕ್ಕೆ ಕಲೆಕ್ಷನ್ ಅನ್ನು ಹೆಚ್ಚಿಸಿಕೊಂಡೇ ಸಾಗುತ್ತಿರುವ ‘ಛಾವಾ’ ಸಿನಿಮಾ ಆರನೇ ದಿನಕ್ಕೆ 32 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಗಳಿಕೆಯಲ್ಲಿ ದಾಖಲೆಗಳು ಬರೆದ ‘ಪುಷ್ಪ 2’, ‘ಅನಿಮಲ್’ ಸಿನಿಮಾದ ದಾಖಲೆಗಳನ್ನು ‘ಛಾವಾ’ ಮುರಿದು ಹಾಕಿದೆ.

ವಿಕ್ಕಿ ಕೌಶಲ್, ರಶ್ಮಿಕಾ ಮಂದನ್ಣ, ಅಕ್ಷಯ್ ಖನ್ನಾ ನಟನೆಯ ‘ಛಾವಾ’ ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಬಿಡುಗಡೆ ಆದ ಮೊದಲೆರಡು ದಿನ ಸಾಧಾರಣ ಎನ್ನಬಹುದಾದ ಕಲೆಕ್ಷನ್ ಮಾಡಿದ್ದ ಈ ಸಿನಿಮಾ ದಿನೇ ದಿನೇ ಕಲೆಕ್ಷನ್ ಅನ್ನು ಹೆಚ್ಚು ಮಾಡಿಕೊಳ್ಳುತ್ತಲೇ ಸಾಗುತ್ತಿದೆ. ಸಿನಿಮಾ ಬಿಡುಗಡೆ ಆಗಿ ಆರು ದಿನಗಳಾಗಿದ್ದು, ದಿನದಿಂದ ದಿನಕ್ಕೆ ಕಲೆಕ್ಷನ್ನಲ್ಲಿ ಏರಿಕೆ ಆಗುತ್ತದೆ. ಗಳಿಕೆಯಲ್ಲಿ ದಾಖಲೆ ಬರೆದ ಸಿನಿಮಾಗಳಾದ ‘ಪುಷ್ಪ 2’ ಮತ್ತು ‘ಅನಿಮಲ್’ ಸಿನಿಮಾಗಳ ದಾಖಲೆಗಳನ್ನೇ ಮುರಿದು ಬಿಸಾಡಿದೆ ಈ ಸಿನಿಮಾ.
‘ಛಾವಾ’ ಸಿನಿಮಾ ಬಿಡುಗಡೆ ಆಗಿ ಇಂದಿಗೆ ಏಳು ದಿನಗಳಾಗಿದ್ದು ಆರನೇ ದಿನ ಈ ಸಿನಿಮಾ 32 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದೆ. ಆ ಮೂಲಕ ಸಿನಿಮಾದ ಒಟ್ಟು ಗಳಿಕೆ 198 ಕೋಟಿ ರೂಪಾಯಿ ದಾಟಿದೆ. ಐದನೇ ದಿನ ಈ ಸಿನಿಮಾ 25 ಕೋಟಿ ಗಳಿಸಿದ್ದು, ಆರನೇ ದಿನಕ್ಕೆ 32 ಕೋಟಿ ಗಳಿಸಿದ್ದು, ಗಳಿಕೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. ರನೇ ದಿನ 32 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಇತ್ತೀಚೆಗಿನ ಬ್ಲಾಕ್ ಬಸ್ಟರ್ ಸಿನಿಮಾಗಳಾದ ‘ಪುಷ್ಪ 2’ ಮತ್ತು ‘ಅನಿಮಲ್’ ಸಿನಿಮಾಗಳ ಗಳಿಕೆಯ ದಾಖಲೆಯನ್ನು ಮುರಿದು ಬಿಸಾಡಿದೆ.
ಇದನ್ನೂ ಓದಿ:ಹೇಗಿದೆ ರಶ್ಮಿಕಾ-ವಿಕ್ಕಿ ಕೌಶಲ್ರ ‘ಛಾವಾ’, ನೆಟ್ಟಿಗರು ಹೇಳಿದ್ದು ಹೀಗೆ
ಸಿನಿಮಾ ಬಿಡುಗಡೆ ಆದ ಆರನೇ ದಿನ ಅತಿ ಹೆಚ್ಚು ಹಣ ಗಳಿಕೆ ಮಾಡಿದ ದಾಖಲೆ ಈಗ ‘ಛಾವಾ’ ಸಿನಿಮಾ ಹೆಸರಿಗೆ ಸೇರಿದೆ. ‘ಅನಿಮಲ್’ ಸಿನಿಮಾ ಬಿಡುಗಡೆ ಆದ ಆರನೇ ದಿನ 25 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತ್ತು. ಅದೇ ‘ಪುಷ್ಪ 2’ ಸಿನಿಮಾ ಬಿಡುಗಡೆ ಆದ ಆರನೇ ದಿನಕ್ಕೆ 30 ಕೋಟಿ ರೂಪಾಯಿ ಹಣ ಗಳಿಕೆ ಮಾಡಿತ್ತು. ಆದರೆ ‘ಛಾವಾ’ ಸಿನಿಮಾ ಬಿಡುಗಡೆ ಆದ ಆರನೇ ದಿನಕ್ಕೆ 32 ಕೋಟಿ ಗಳಿಸುವ ಮೂಲಕ ‘ಅನಿಮಲ್’ ಮತ್ತು ‘ಪುಷ್ಪ 2’ ಸಿನಿಮಾದ ದಾಖಲೆಗಳನ್ನು ಮುರಿದು ಹಾಕಿದೆ.
‘ಛಾವಾ’ ಸಿನಿಮಾವು ಸಾಂಬಾಜಿ ಮಹಾರಾಜ್ ಕತೆಯನ್ನು ಒಳಗೊಂಡಿದೆ. ಶಿವಾಜಿ ಸಾವಂತ್ ಬರೆದಿರುವ ಇದೇ ಹೆಸರಿನ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಶಿವಾಜಿ ಪುತ್ರ ಸಾಂಬಾಜಿ ಮಹಾರಾಜ್, ಮೊಘಲರ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಸಿನಿಮಾದಲ್ಲಿ ಸಾಂಬಾಜಿಯ ಪತ್ನಿ ಯೇಸುಬಾಯ್ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅಕ್ಷಯ್ ಖನ್ನಾ ಔರಂಗಾಜೇಬ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದಾರೆ. ಸಿನಿಮಾವನ್ನು ಮ್ಯಾಡಾಕ್ ಫಿಲಮ್ಸ್ ನಿರ್ಮಾಣ ಮಾಡಿದ್ದು ಲಕ್ಷ್ಮಣ ಉಟೇಖರ್ ಸಿನಿಮಾ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ