ಸಂಜತ್ ದತ್ಗೆ ಕಚ್ಚುತ್ತಿದ್ದ ಸೊಳ್ಳೆಗಳು ಕಣ್ಣೆದುರೇ ಸಾಯುತ್ತಿದ್ದವು
Sajay Dutt: ಸಂಜಯ್ ತೆರೆಯ ಮೇಲೆ ಹೀರೋ ಆದರೆ ನಿಜ ಜೀವನದಲ್ಲಿ ವಿಲನ್ ರೀತಿ ಬದುಕುತ್ತಿದ್ದ ಸಮಯ ಒಂದಿತ್ತು. ಮಾದಕ ವಸ್ತುವಿನ ವ್ಯಸನಕ್ಕೆ ಒಳಗಾಗಿದ್ದ ನಟ ಸಂಜಯ್ ದತ್ ವಿಪರೀತ ಡ್ರಗ್ಸ್ ಸೇವನೆ ಮಾಡುತ್ತಿದ್ದರು. ಡ್ರಗ್ಸ್ ಸೇವನೆಯಿಂದ ಅವರ ದೇಹ ಅದೆಷ್ಟು ವಿಷಕಾರಿ ಆಗಿತ್ತೆಂದರೆ ಅವರಿಗೆ ಕಚ್ಚಿದ ಸೊಳ್ಳೆ ಅಲ್ಲೇ ಸತ್ತು ಬೀಳುತ್ತಿತ್ತಂತೆ.

ನಟ ಸಂಜಯ್ ದತ್ ಒಂದು ಕಾಲದಲ್ಲಿ ತುಂಬಾನೇ ಕೆಟ್ಟ ಹಾದಿ ಹಿಡಿದಿದ್ದರು. ಅವರು ತೆಗೆದುಕೊಂಡ ಡ್ರಗ್ಸ್ ಅಷ್ಟಿಷ್ಟಲ್ಲ. ಆದರೆ, ಅದರಿಂದ ಹೊರ ಬರಲು ಅವರು ಸಾಕಷ್ಟು ಸಮಯ ತೆಗೆದುಕೊಂಡರು. ಮಾದಕ ವ್ಯಸನಿ ಎಂಬ ಪಟ್ಟ ಅವರಿಗೆ ಬಂತು. ಇದನ್ನು ಓಪನ್ ಆಗಿ ಒಪ್ಪಿಕೊಂಡಿದ್ದಾರೆ. ಅವರ ಡ್ರಗ್ಸ್ ಚಟದ ಬಗ್ಗೆ ಸಿನಿಮಾ ಕೂಡ ಬಂದಿದೆ. ಆದರೆ, ಕೆಲವು ವಿಚಾರಗಳನ್ನು ಸಿನಿಮಾದಲ್ಲಿ ಹೇಳಿಲ್ಲ ಎಂದು ಸಂಜಯ್ ದತ್ ಅವರು ಈ ಮೊದಲು ವಿವರಿಸಿದ್ದರು.
ಡ್ರಗ್ಸ್ ಸೇವನೆ ಮಾಡುವಾಗ ಸಂಜಯ್ ದತ್ ಎಷ್ಟು ನಶೆಯಲ್ಲಿ ಇರುತ್ತಿದ್ದರು, ಏನು ಮಾಡುತ್ತಿದ್ದರು ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ, ಕೆಲ ವಿಚಾರಗಳನ್ನು ಸಿನಿಮಾದಲ್ಲಿ ಹೇಳಿರಲಿಲ್ಲವಂತೆ. ಅದರಲ್ಲಿ ಸೊಳ್ಳೆಯ ವಿಚಾರ ಕೂಡ ಒಂದು. ಸಂಜಯ್ ದತ್ ಅವರಿಗೆ ಕಚ್ಚುತ್ತಿದ್ದ ಸೊಳ್ಳೆ ಡ್ರಗ್ಸ್ ನಶೆಯಲ್ಲಿ ಸತ್ತೇ ಹೋಗುತ್ತಿತ್ತಂತೆ.
‘ಡ್ರಗ್ಸ್ ಮಾಡ್ತಾ ಇದ್ದೆ. ಅದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ನಾನು ಡ್ರಗ್ಸ್ ತೆಗೆದುಕೊಳ್ಳುವಾಗ ನೋಡ್ತಾ ಇದ್ದಿದೆ. ಅವು ಕಚ್ಚುತ್ತಿದ್ದವು. ಅವು ರೆಕ್ಕೆ ಬಡಿಯುತ್ತಿದ್ದವು. ಆದರೆ ಹಾರುತ್ತಿರಲಿಲ್ಲ. ಅವುಗಳು ಸತ್ತು ಹೊಗುತ್ತಿದ್ದವು. ನನ್ನ ರಕ್ತದಲ್ಲಿ ಎಷ್ಟು ಡ್ರಗ್ಸ್ ಇರಬಹುದು ನೋಡಿ. ರಕ್ತ ಕುಡಿದು ಪಾಪ ಸೊಳ್ಳೆ ಸತ್ತು ಹೋಗುತ್ತಿತ್ತು’ ಎಂದಿದ್ದರು ಸಂಜಯ್ ದತ್.
ಇದನ್ನೂ ಓದಿ:ಹಾಲಿವುಡ್ ಸಿನಿಮಾದಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್; ಸಿಕ್ತು ಬಿಗ್ ನ್ಯೂಸ್
ಸಂಜಯ್ ದತ್ ಅವರಿಗೆ ಗೆಳೆಯರಿಂದ ಡ್ರಗ್ಸ್ ಚಟ ಹಿಡಿಯಿತು. ಇದರಿಂದ ಅವರು ಸಾಕಷ್ಟು ನಷ್ಟ ಅನುಭವಿಸಿದರು. ಅವರು ತೆಗೆದುಕೊಳ್ಳದೆ ಇರದ ಡ್ರಗ್ಸ್ ಇರಲಿಲ್ಲ. ಅವರು ನಂತರ ತಾಯಿ ಮೃತಪಟ್ಟ ಬಳಿಕ ಬೇರೆ ದೇಶಕ್ಕೆ ತೆರಳಿ ಡ್ರಗ್ಸ್ನಿಂದ ಮುಕ್ತಿ ಪಡೆದರು.
ಸಂಜಯ್ ದತ್ ಅವರು ಸದ್ಯ ದಕ್ಷಿಣ ಭಾರತದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದಾರೆ. ‘ಕೆಜಿಎಫ್ 2’ ಬಳಿಕ ಇಲ್ಲಿ ಅವರ ಖ್ಯಾತಿ ಹೆಚ್ಚಿದೆ. ವಿಶೇ ಎಂದರೆ ಈಗ ‘ಕೆಡಿ’ ಚಿತ್ರಕ್ಕೂ ಅವರೇ ವಿಲನ್. ಈ ಸಿನಿಮಾದಲ್ಲಿ ಧ್ರುವ ಸರ್ಜಾ ಅವರು ನಟಿಸುತ್ತಿದ್ದು, ಶಿಲ್ಪಾ ಶೆಟ್ಟಿ ಕೂಡ ಬಣ್ಣ ಹಚ್ಚಿದ್ದಾರೆ. ಅವರಿಗೆ ಈ ವಿಲನ್ ಪಾತ್ರಗಳು ಹೊಂದಿಕೆ ಆಗುತ್ತಿವೆ. ಅವರು ‘ಭಾಗಿ 4’ ಚಿತ್ರಕ್ಕೂ ವಿಲನ್ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Thu, 20 February 25