ಐಶಾರಾಮಿ ಮನೆ ‘ಮನ್ನತ್’ ಬಿಟ್ಟು ಬಾಡಿಗೆ ಮನೆಗೆ ಹೋಗುತ್ತಿರುವುದೇಕೆ ಶಾರುಖ್
Shah Rukh Khan: ಮುಂಬೈನ ಅತ್ಯಂತ ದುಬಾರಿ ಮನೆ ಮುಖೇಶ್ ಅಂಬಾನಿಯವರ ಅಂಟಿಲಾ, ಆದರೆ ಮುಂಬೈನ ಅತ್ಯಂತ ಜನಪ್ರಿಯ ಮನೆ ಶಾರುಖ್ ಖಾನ್ ಅವರ ಮನ್ನತ್. ಶಾರುಖ್ ಖಾನ್ ಬಳಿ ಇರುವ ಅತ್ಯಂತ ದುಬಾರಿ ಮತ್ತು ಮೌಲ್ಯಯುತ ವಸ್ತುವೆಂದರೆ ಅದು ಮನ್ನತ್. ಆದರೆ ಈಗ ಶಾರುಖ್ ಖಾನ್ ಮನ್ನತ್ ಅನ್ನು ಬಿಡುತ್ತಿದ್ದಾರೆ. ಅದೇಕೆ? ಇಲ್ಲಿದೆ ಮಾಹಿತಿ.

ಮುಂಬೈನ ಅತ್ಯಂತ ಜನಪ್ರಿಯ ಮನೆಗಳಲ್ಲಿ ಶಾರುಖ್ ಖಾನ್ರ ಮನ್ನತ್ ಮನೆ ಪ್ರಮುಖ ಸ್ಥಾನದಲ್ಲಿದೆ. ಅಂಬಾನಿಯವರ ಆಂಟಿಲ್ಲಾ ಮುಂಬೈನ ಅತ್ಯಂತ ದುಬಾರಿ ಮನೆ ಆದರೆ ಅತ್ಯಂತ ಜನಪ್ರಿಯ ಮನೆ ಎಂದರೆ ಅದು ಶಾರುಖ್ ಖಾನ್ರ ಮನ್ನತ್, ಇದು ಜನಪ್ರಿಯ ಮಾತ್ರವಲ್ಲ ಮುಂಬೈನ ದುಬಾರಿ ಮನೆಗಳಲ್ಲಿ ಒಂದು ಸಹ. ಹಲವು ವರ್ಷಗಳಿಂದಲೂ ಶಾರುಖ್ ಖಾನ್ ಮನ್ನತ್ ಮನೆಯಲ್ಲಿ ಕುಟುಂಬದೊಡನೆ ವಾಸವಿದ್ದಾರೆ. ಶಾರುಖ್ ಖಾನ್ ಒಡೆತನದ ಅತ್ಯಂತ ದುಬಾರಿ ಮತ್ತು ಪ್ರಮುಖವಾದ ಆಸ್ತಿಯೆಂದರೆ ಮನ್ನತ್, ಈ ಬಗ್ಗೆ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಆದರೆ ಈಗ ಮನ್ನತ್ ಅನ್ನು ಬಿಡುತ್ತಿದ್ದಾರೆ ಶಾರುಖ್ ಖಾನ್.
ನಿನ್ನೆಯಷ್ಟೆ ವರದಿ ಆಗಿರುವಂತೆ ಶಾರುಖ್ ಖಾನ್ ಮುಂಬೈನ ಪಾಲಿ ಹಿಲ್ಸ್ ಏರಿಯಾನಲ್ಲಿ ಎರಡು ಡ್ಯೂಪ್ಲೆಕ್ಸ್ ಮನೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಈ ಎರಡು ಮನೆಗಳಿಗೆ ವರ್ಷಕ್ಕೆ 8.70 ಕೋಟಿ ಬಾಡಿಗೆಯನ್ನು ಶಾರುಖ್ ಖಾನ್ ಪಾವತಿ ಮಾಡಲಿದ್ದಾರೆ. ಮನ್ನತ್ ಅಂಥಹಾ ಅದ್ಭುತವಾದ ಮನೆಯಲ್ಲಿದ್ದರೂ ಸಹ ಶಾರುಖ್ ಖಾನ್ ಈ ಎರಡು ಮನೆಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದು ಏಕೆ ಎಂಬುದು ಪ್ರಶ್ನೆಯಾಗಿತ್ತು. ಆದರೆ ಈ ಬಗ್ಗೆ ಕೆಲ ಬಾಲಿವುಡ್ ಪತ್ರಿಕೆಗಳು ವರದಿ ಮಾಡಿವೆ.
ಕೆಲ ತಿಂಗಳ ಹಿಂದೆ, ಶಾರುಖ್ ಖಾನ್ರ ಪತ್ನಿ ಗೌರಿ ಖಾನ್, ಮುಂಬೈ ಮಹಾನಗರ ಪಾಲಿಕೆಗೆ ಪತ್ರ ಬರೆದು ಮನ್ನತ್ ಮೇಲೆ ಎರಡು ದೊಡ್ಡ ಬಿಲ್ಡಿಂಗ್ ಕಟ್ಟಲು ಅನುಮತಿ ಕೇಳಿದ್ದರು. ಆದರೆ ಬಿಎಂಸಿ ಗೌರಿ ಖಾನ್ ಅವರ ಮನವಿಯನ್ನು ತಿರಸ್ಕರಿಸಿತ್ತಂತೆ. ಅದಕ್ಕೆ ಈಗ ಮನ್ನತ್ ಮನೆಯ ಹಲವು ಭಾಗಗಳನ್ನು ಒಡೆದು ಹಾಕಿ, ಶಾರುಖ್ ಖಾನ್ ಕುಟುಂಬದ ಈಗಿನ ಅವಶ್ಯಕತೆಗೆ ತಕ್ಕಂತೆ ಮತ್ತೆ ಬಿಲ್ಡಿಂಗ್ ಅನ್ನು ಕಟ್ಟಲಾಗುತ್ತದೆಯಂತೆ. ಈ ನಿರ್ಮಾಣ ಕಾಮಗಾರಿ ಮುಂದಿನ ಕೆಲ ವರ್ಷಗಳ ವರೆಗೆ ನಡೆಯಲಿದ್ದು, ಇದೇ ಕಾರಣಕ್ಕೆ ಶಾರುಖ್ ಖಾನ್ ಹೊಸ ಮನೆಗೆ ಕುಟುಂಬ ಸಮೇತ ಸ್ಥಳಾಂತರ ಆಗುತ್ತಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ಅವೆಂಜರ್ಸ್ ಸರಣಿಯಲ್ಲಿ ಶಾರುಖ್ ಖಾನ್? ದೊಡ್ಡ ಹಿಂಟ್ ಕೊಟ್ಟ ಹಾಲಿವುಡ್ ನಟ
ಶಾರುಖ್ ಖಾನ್ ಸ್ವತಃ ಮುಂಬೈನಲ್ಲಿ ಕೆಲವು ಅಪಾರ್ಟ್ಮೆಂಟ್ಗಳನ್ನು ಹೊಂದಿದ್ದಾರೆ. ಅಲ್ಲದೆ ಕೆಲವು ಕಮರ್ಶಿಯಲ್ ಸ್ಪೇಸ್ ಸಹ ಅವರಿಗೆ ಇದೆ. ದುಬೈ, ಲಂಡನ್ ಇನ್ನೂ ಹಲವು ದೇಶಗಳಲ್ಲಿ ಶಾರುಖ್ ಖಾನ್ ಆಸ್ತಿಯನ್ನು ಹೊಂದಿದ್ದಾರೆ. ಆದರೆ ಮನ್ನತ್ ಮನೆಗೆ ಹತ್ತಿರವಾಗಿಯೇ ಇರಬೇಕು ಎಂಬ ಕಾರಣಕ್ಕೆ ಈಗ ಪಾಲಿ ಹಿಲ್ಸ್ನಲ್ಲಿ ಎರಡು ಮನೆಗಳನ್ನು ಸೀಮಿತ ಅವಧಿಗೆ ಬಾಡಿಗೆಗೆ ಪಡೆದಿದ್ದಾರೆ. ಶಾರುಖ್ ಖಾನ್ರ ಕುಟುಂಬ ಮತ್ತು ಅವರ ಸಿಬ್ಬಂದಿ ಮುಂದಿನ ಕೆಲ ವರ್ಷಗಳ ಕಾಲ ಪಾಲಿ ಹಿಲ್ಸ್ನ ಡ್ಯೂಪ್ಲೆಕ್ಸ್ ಮನೆಯಲ್ಲಿ ವಾಸ ಇರಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಮ್ ಮಾಡಿ