ತೆಲುಗಿನಲ್ಲೂ ಧೂಳೆಬ್ಬಿಸಲಿದೆ ‘ಛಾವ’ ಸಿನಿಮಾ; ರಶ್ಮಿಕಾ ಅಭಿಮಾನಿಗಳಿಗೆ ಖುಷಿ

|

Updated on: Mar 03, 2025 | 5:11 PM

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ರಶ್ಮಿಕಾ ನಟಿಸಿದ ಬಾಲಿವುಡ್ ಸಿನಿಮಾ ‘ಛಾವ’ ಈಗ ತೆಲುಗು ಭಾಷೆಗೆ ಡಬ್ ಆಗಿ ತೆರೆಕಾಣುತ್ತಿದೆ. ತೆಲುಗು ವರ್ಷನ್ ಟ್ರೇಲರ್​ ಅನಾವರಣ ಆಗಿದೆ. ಕೆಲವೇ ಗಂಟೆಗಳಲ್ಲಿ 17 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

ತೆಲುಗಿನಲ್ಲೂ ಧೂಳೆಬ್ಬಿಸಲಿದೆ ‘ಛಾವ’ ಸಿನಿಮಾ; ರಶ್ಮಿಕಾ ಅಭಿಮಾನಿಗಳಿಗೆ ಖುಷಿ
Chhaava
Follow us on

‘ಛಾವ’ ಸಿನಿಮಾ ಬಿಡುಗಡೆ ಆಗಿ 18 ದಿನಗಳು ಕಳೆದಿವೆ. ಇಂದಿಗೂ ಕೂಡ ಈ ಸಿನಿಮಾ ಅತ್ಯುತ್ತಮವಾಗಿ ಕಲೆಕ್ಷನ್ ಮಾಡುತ್ತಿದೆ. ಹಿಂದಿ ವರ್ಷನ್​ನಿಂದ ಭಾರತದ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 471 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ 500 ಕೋಟಿ ರೂಪಾಯಿ ದಾಟಲಿದೆ. ಈ ನಡುವೆ ಬೇರೆ ಭಾಷೆಗಳ ಪ್ರೇಕ್ಷಕರನ್ನೂ ಈ ಸಿನಿಮಾ ಸೆಳೆಯುತ್ತಿದೆ. ಹೌದು, ಈಗ ‘ಛಾವ’ (Chhaava) ಸಿನಿಮಾ ತೆಲುಗಿಗೆ ಡಬ್ ಆಗಿದೆ. ತೆಲುಗು ವರ್ಷನ್ ಟ್ರೇಲರ್​ ಬಿಡುಗಡೆ ಆಗಿದ್ದು, ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅವರು ‘ಛಾವ’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ವಿಕ್ಕಿ ಕೌಶಲ್ ಅವರಿಗೆ ಬಾಲಿವುಡ್​ನಲ್ಲಿ ಇರುವಂತೆ ರಶ್ಮಿಕಾ ಮಂದಣ್ಣ ಅವರಿಗೆ ತೆಲುಗಿನಲ್ಲಿ ಫ್ಯಾನ್ ಫಾಲೋಯಿಂಗ್ ಇದೆ. ಅಲ್ಲದೇ ತೆಲುಗು ಪ್ರೇಕ್ಷಕರು ಈ ಸಿನಿಮಾವನ್ನು ಡಬ್ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಹಾಗಾಗಿ ‘ಛಾವ’ ಸಿನಿಮಾವನ್ನು ಅದ್ದೂರಿಯಾಗಿ ತೆಲುಗಿನಲ್ಲಿ ಬಿಡುಗಡೆ ಮಾಡಲು ಸಕಲ ತಯಾರಿ ನಡೆದಿದೆ.

‘ಛಾವ’ ತೆಲುಗು ವರ್ಷನ್ ಟ್ರೇಲರ್​:

ಇದನ್ನೂ ಓದಿ
‘ಛಾವ’ ಪ್ರದರ್ಶನದ ವೇಳೆ ಚಿತ್ರಮಂದಿರದ ಒಳಗೆ ಬೆಂಕಿ; ಕಾರಣ ತಿಳಿಸಿದ ಪೊಲೀಸರು
‘ಛಾವ’ ಎಫೆಕ್ಟ್: ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನದ ವಿಷಯ ಸೇರಿಸಲು ಒತ್ತಾಯ
ಛಾವ ಸಿನಿಮಾ ದೃಶ್ಯ ಹಾಗೂ ಕುಂಭಮೇಳ ಕಾಲ್ತುಳಿತದ ಬಗ್ಗೆ ಸ್ವರಾ ಭಾಸ್ಕರ್ ಟೀಕೆ
‘ಛಾವ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಪರದೆ ಹರಿದು ಹಾಕಿದ ಕುಡುಕ

ಮಾರ್ಚ್​ 7ರಂದು ‘ಛಾವ’ ತೆಲುಗು ವರ್ಷನ್ ಬಿಡುಗಡೆ ಆಗಲಿದೆ. ಇಂದು (ಮಾರ್ಚ್​ 3) ತೆಲುಗು ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಕೆಲವೇ ಗಂಟೆಗಳಲ್ಲಿ ಈ ಟ್ರೇಲರ್​ಗೆ ಮಿಲಿಯನ್​ಗಟ್ಟಲೆ ವೀಕ್ಷಣೆ ಆಗಿದೆ. ತೆಲುಗು ಪ್ರೇಕ್ಷಕರು ಈ ಸಿನಿಮಾ ಮೇಲೆ ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದಕ್ಕೆ ಈ ಸಂಖ್ಯೆಯೇ ಸಾಕ್ಷಿ ನೀಡುವಂತಿದೆ. ತೆಲುಗು ವರ್ಷನ್ ರಿಲೀಸ್ ಆಗುತ್ತಿರುವುದಕ್ಕೆ ರಶ್ಮಿಕಾ ಮಂದಣ್ಣ ಅವರು ಹೆಚ್ಚು ಖುಷಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಪ್ರಚಾರ ಮಾಡುತ್ತಿದ್ದಾರೆ.

ಛತ್ರಪತಿ ಸಂಭಾಜಿ ಮಹಾರಾಜ್ ಜೀವನವನ್ನು ಆಧರಿಸಿ ‘ಛಾವ’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾಗೆ ಅಪಾರ ಜನಮೆಚ್ಚುಗೆ ಸಿಕ್ಕಿದೆ. ಸಂಭಾಜಿ ಪಾತ್ರ ಮಾಡಿರುವ ವಿಕ್ಕಿ ಕೌಶಲ್ ಅವರು ಸೂಪರ್ ಸ್ಟಾರ್​ ಆಗಿದ್ದಾರೆ. ಈ ಚಿತ್ರದಿಂದ ಅವರ ವೃತ್ತಿಜೀವನದ ಅತಿ ದೊಡ್ಡ ಸಕ್ಸಸ್ ಸಿಕ್ಕಿದೆ. ಅಲ್ಲು ಅರವಿಂದ್ ಅವರು ‘ಗೀತಾ ಆರ್ಟ್ಸ್​’ ಮೂಲಕ ಈ ಸಿನಿಮಾವನ್ನು ತೆಲುಗಿನಲ್ಲಿ ವಿತರಣೆ ಮಾಡುತ್ತಿದ್ದಾರೆ. ತೆಲುಗು ವರ್ಷನ್ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.