ನಟಿ ಶ್ರದ್ಧಾ ಕಪೂರ್ ಕೊಟ್ಟ ಉಡುಗೊರೆಯನ್ನು ಮಾರಿಬಿಟ್ಟ ತಂದೆ ಶಕ್ತಿ ಕಪೂರ್
Shradha Kapoor: ಬಾಲಿವುಡ್ನ ಜನಪ್ರಿಯ ನಟಿ ಶ್ರದ್ಧಾ ಕಪೂರ್, ಖ್ಯಾತ ಹಾಸ್ಯನಟ, ವಿಲನ್ ಶಕ್ತಿ ಕಪೂರ್ ಪುತ್ರಿ. ಇದೀಗ ಶಕ್ತಿ ಕಪೂರ್, ತಮ್ಮ ಮಗಳು ತಮಗೆ ಉಡುಗೊರೆಯಾಗಿ ನೀಡಿದ್ದ ದುಬಾರಿ ಬೆಲೆಯ ಪ್ಲ್ಯಾಟ್ ಅನ್ನು ಮಾರಾಟ ಮಾಡಿದ್ದಾರೆ. ಮಾರಾಟವಾದ ಬೆಲೆ ಎಷ್ಟು? ಮನೆ ಎಲ್ಲಿತ್ತು? ಶ್ರದ್ಧಾ ಕಪೂರ್ ಅದನ್ನು ಯಾವ ಬೆಲೆಗೆ ಖರೀದಿ ಮಾಡಿದ್ದರು? ಇನ್ನಿತರೆ ಮಾಹಿತಿಗಳು ಇಲ್ಲಿವೆ.

ಶ್ರದ್ಧಾ ಕಪೂರ್ ಬಾಲಿವುಡ್ನ ಬಲು ಬೇಡಿಕೆಯ ನಟಿಯರಲ್ಲಿ ಒಬ್ಬರು. ಆಲಿಯಾ, ದೀಪಿಕಾಗೆ ಹೋಲಿಸಿಕೊಂಡರೆ ಪಿಆರ್ ಹವಾ ಕಡಿಮೆ ಇರುವ ಆದರೆ ಸಕ್ಸಸ್ ರೇಟ್ ಅವರಿಗಿಂತಲೂ ಹೆಚ್ಚಿಗೆ ಇರುವ ಶ್ರದ್ಧಾ ಕಪೂರ್, ಬಾಲಿವುಡ್ನಲ್ಲಿ ತಮ್ಮ ಪಾಡಿಗೆ ತಾವಿದ್ದು, ಯವುದೇ ಅನವಶ್ಯಕ ಗಾಸಿಪ್ಗಳಿಗೆ ಬೀಳದೆ ಸಿನಿಮಾಗಳಲ್ಲಿ ನಟಿಸುತ್ತಾ ಸಾಗುತ್ತಿದ್ದಾರೆ. ಶ್ರದ್ಧಾ ಕಪೂರ್, ಬಾಲಿವುಡ್ನ ಖ್ಯಾತ ಹಾಸ್ಯನಟ, ವಿಲನ್ ಶಕ್ತಿ ಕಪೂರ್ ಪುತ್ರಿ.
ಶಕ್ತಿ ಕಪೂರ್, ನಿಜ ಜೀವನದಲ್ಲಿ ಬಹಳ ಪ್ರಾಕ್ಟಿಕಲ್ ವ್ಯಕ್ತಿ. ಹಣ, ಆಸ್ತಿಯ ವಿಷಯದಲ್ಲಿಯೂ ಸಹ. ಈ ಬಗ್ಗೆ ಸಂದರ್ಶನಗಳಲ್ಲಿ ಅವರೇ ಹೇಳಿಕೊಂಡಿದ್ದಾರೆ. ಈ ಹಿಂದೆ ತಮ್ಮ ಪುತ್ರಿ ಶ್ರದ್ಧಾ ಕಪೂರ್ ತಮ್ಮ ಹುಟ್ಟುಹಬ್ಬಕ್ಕೆಂದು ನೀಡಿದ್ದ ದುಬಾರಿ ಉಡುಗೊರೆಯನ್ನು ಮಾರಾಟ ಮಾಡಿದ್ದಾರೆ ನಟ ಶಕ್ತಿ ಕಪೂರ್. ಕಳೆದ ವರ್ಷವಷ್ಟೆ ಶಕ್ತಿ ಕಪೂರ್ ಹುಟ್ಟುಹಬ್ಬಕ್ಕೆಂದು ಮಗಳು ಶ್ರದ್ಧಾ ಕಪೂರ್, ಮುಂಬೈನ ಜುಹು ಏರಿಯಾನಲ್ಲಿ ಸಿಲ್ವರ್ ಬೀಚ್ ಹೆಚೆಲ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಐಶಾರಾಮಿ ಫ್ಲ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು.
881 ಚದರ ಅಡಿ ವಿಶಾಲವಾದ ಫ್ಲ್ಯಾಟ್ ಅನ್ನು ಶ್ರದ್ಧಾ ಕಪೂರ್ ತಂದೆಯ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದರು. ಆದರೆ ಇತ್ತೀಚೆಗೆ ಈ ಫ್ಲ್ಯಾಟ್ ಅನ್ನು ಬರೋಬ್ಬರಿ 6.11 ಕೋಟಿಗೆ ಮಾರಾಟ ಮಾಡಿದ್ದಾರೆ ಶಕ್ತಿ ಕಪೂರ್. ಈ ಫ್ಲ್ಯಾಟ್ ಅನ್ನು ಬೆಂಗಳೂರಿನ ಉದ್ಯಮಿಗಳಾದ ಸತೀಶ್ ವೆಂಕಟೇಶ್ ಮತ್ತು ಅರ್ಚನಾ ತನೇಜ ಅವರಿಂದ ಖರೀದಿ ಮಾಡಿದ್ದರು ಶ್ರದ್ಧಾ ಕಪೂರ್. ಈ ಫ್ಲ್ಯಾಟ್ ಶಕ್ತಿ ಕಪೂರ್ ಹಾಗೂ ಶ್ರದ್ಧಾ ಕಪೂರ್ ಅವರ ಜಂಟಿ ಹೆಸರಿನಲ್ಲಿತ್ತು.
ಇದನ್ನೂ ಓದಿ:38ನೇ ವಯಸ್ಸಿಗೆ 130 ಕೋಟಿ ರೂ. ಆಸ್ತಿ ಮಾಡಿದ ಶ್ರದ್ಧಾ ಕಪೂರ್
ಇತ್ತೀಚೆಗಷ್ಟೆ ಶ್ರದ್ಧಾ ಕಪೂರ್, ಮುಂಬೈನ ಪರಿಮಳ ಮಹಾಲಕ್ಷ್ಮಿ ಸೌಥ್ ಟವರ್ನಲ್ಲಿ ಸಾವಿರ ಚದರ ಅಡಿಗೂ ತುಸು ಹೆಚ್ಚು ವಿಶಾಲವಾದ ಫ್ಲ್ಯಾಟ್ ಒಂದನ್ನು ಖರೀದಿ ಮಾಡಿದ್ದಾರೆ. ಈ ಫ್ಲ್ಯಾಟ್ಗೆ ಎರಡು ಬಾಲ್ಕನಿಗಳಿದ್ದು, ಒಳ್ಳೆಯ ಸಮುದ್ರದ ವೀವ್ ಸಹ ಇದೆಯಂತೆ. ಈ ಫ್ಲ್ಯಾಟ್ಗೆ 6.24 ಕೋಟಿ ರೂಪಾಯಿ ಹಣವನ್ನು ನಟಿ ನೀಡಿದ್ದಾರೆ. ಶ್ರದ್ಧಾ ಕಪೂರ್ ಈಗ ಖರೀದಿ ಮಾಡಿರುವ ಫ್ಲ್ಯಾಟ್ ಸಹ ಜುಹುವಿನಲ್ಲಿಯೇ ಇದೆ.
2024 ರಲ್ಲಿ ಬಿಡುಗಡೆ ಆದ ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ ಸಿನಿಮಾ ದೊಡ್ಡ ಹಿಟ್ ಆಯ್ತು. ಈ ಸಿನಿಮಾ ಶಾರುಖ್ ಖಾನ್ ನಟನೆಯ ‘ಜವಾನ್’ ಕಲೆಕ್ಷನ್ ಅನ್ನು ಸಹ ಹಿಂದಿಕ್ಕಿತು. ಇದೀಗ ಶ್ರದ್ಧಾ ಕಪೂರ್, ರಾಹುಲ್ ಮೋದಿ ಹೆಸರಿನ ಉದ್ಯಮಿಯೊಟ್ಟಿಗೆ ಪ್ರೀತಿಯಲ್ಲಿದ್ದಾರೆ. ವಿದೇಶಗಳಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ