
ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಭರ್ಜರಿಯಾಗಿ ಸ್ಟೆಪ್ ಹಾಕಿದ ‘ಆಜ್ ಕಿ ರಾತ್..’ ಹಾಡು ಸಖತ್ ವೈರಲ್ ಆಗಿತ್ತು. ‘ಸ್ತ್ರೀ 2’ ಚಿತ್ರದ ಈ ಹಾಡು ಪಡ್ಡೆಗಳ ಕಣ್ಣು ಕುಕ್ಕಿತ್ತು. ಈ ಸಿನಿಮಾ ಗೆಲ್ಲುವಲ್ಲಿ ಈ ಚಿತ್ರದ ಪಾಲೂ ಕೂಡ ಇತ್ತು. ಈ ಹಾಡನ್ನು ಯವ ಜನತೆ ಇಷ್ಟಪಟ್ಟಿದ್ದು ಗೊತ್ತೇ ಇದೆ. ಆದರೆ, ಈ ಚಿತ್ರವನ್ನು ಸಣ್ಣ ಮಕ್ಕಳು ಕೂಡ ಇಷ್ಟಪಟ್ಟಿದ್ದಾರೆ ಎಂಬ ವಿಷಯ ಗೊತ್ತೇ? ಸ್ವತಃ ನಟಿ ತಮನ್ನಾ ಭಾಟಿಯಾ ಅವರು ಈ ವಿಚಾರ ರಿವೀಲ್ ಮಾಡಿದ್ದಾರೆ.
ಲಲ್ಲನ್ಟಾಪ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಮನ್ನಾ ಮಾತನಾಡಿದರು. ಪಾತ್ರಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ತಮನ್ನಾಗೆ ಕೇಳಲಾಯಿತು. ಆಗ ಅವರು ಪಾತ್ರ ಅಥವಾ ಹಾಡು ಕೇವಲ ಮನರಂಜನೆ ನೀಡೋದು ಮಾತ್ರವಲ್ಲ, ಜನರ ಮೇಲೆ ಪ್ರಭಾವ ಬೀರಬೇಕು ಎಂದು ಹೇಳಿದರು. ಈ ವೇಳೆ ‘ಆಜ್ ಕಿ ರಾತ್’ ಹಾಡಿನ ಒಂದು ವೈಶಿಷ್ಟ್ಯದ ಬಗ್ಗೆ ಹೇಳಿದರು.
‘ನನ್ನ ಮಕ್ಕಳು ಆಜ್ ಕಿ ರಾತ್ ಹಾಡು ಕೇಳಿದ ಬಳಿಕವೇ ಊಟ ಮಾಡುತ್ತಾರೆ ಎಂದು ನನಗೆ ಅನೇಕ ತಾಯಂದಿರು ಕರೆ ಮಾಡಿ ಹೇಳಿದ್ದಾರೆ’ ಎಂದು ತಮನ್ನಾ ವಿವರಿಸಿದರು. ಬಾಲ್ಯದಲ್ಲಿ ನೋಡುವಂತಹ ಹಾಡು ಇದಲ್ಲ ಎಂಬ ಚರ್ಚೆಯೂ ಹುಟ್ಟುಕೊಂಡಿತು. ಇದಕ್ಕೆ ತಮನ್ನಾ ಉತ್ತರಿಸಿದ್ದಾರೆ.
‘ಮಕ್ಕಳು ಊಟ ಮಾಡುತ್ತಿಲ್ಲ ಎಂಬುದಷ್ಟೇ ತಾಯಂದಿರ ಚಿಂತೆ ಆಗಿರುತ್ತದೆ. ಚಿಕ್ಕ ಮಕ್ಕಳಿಗೆ ಆ ಹಾಡಿನ ಅರ್ಥ ಗೊತ್ತಾಗಲು ಹೇಗೆ ಸಾಧ್ಯ? ಒಂದು ಮ್ಯೂಸಿಕ್ ಇದೆ. ಅದು ಇಷ್ಟ ಆಗುತ್ತದೆ. ನಾವು ಸಿನಿಮಾ ಮರೆಯುತ್ತೇವೆ. ಆದರೆ, ಹಾಡುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಇದು ಸತ್ಯ’ ಎಂದಿದ್ದಾರೆ ತಮನ್ನಾ.
ಇದನ್ನೂ ಓದಿ: ಬ್ರೇಕಪ್ ಅಪ್ ಬಳಿಕ ಗೊಂದಲದಲ್ಲಿದ್ದಾರಂತೆ ನಟಿ ತಮನ್ನಾ ಭಾಟಿಯಾ
‘ಆಜ್ ಕಿ ರಾತ್’ ಎಂಬುದು ‘ಸ್ತ್ರೀ 2’ ಚಿತ್ರದ ಬೋಲ್ಡ್ ಸಾಂಗ್. ಈ ಸಿನಿಮಾ ಹಾಡಿಗೆ ತಮನ್ನಾ ಅವರು ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡಿದ್ದರು. ಅಮರ್ ಕೌಶಿಕ್ ಅವರು ‘ಸ್ತ್ರೀ 2’ ಚಿತ್ರ ನಿರ್ದೇಶನ ಮಾಡಿದ್ದಾರೆ. ಶ್ರದ್ಧಾ ಕಪೂರ್, ರಾಜ್ಕುಮಾರ್ ರಾವ್, ಪಂಕಜ್ ತ್ರಿಪಾಟಿ, ಅಭಿಷೇಕ್ ಬ್ಯಾನರ್ಜಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ 900 ಕೊಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.