ಲಾಭದಲ್ಲೇ ಇದೆ ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ?
Kothalavadi Movie Collection: ‘ಕೊತ್ತಲವಾಡಿ’ ಸಿನಿಮಾ ಗಳಿಕೆ ಬಗ್ಗೆ ಚಿತ್ರ ತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಪುಷ್ಪ ಅವರ ಸಿನಿಮಾಗೆ ಟಿವಿ ಹಾಗೂ ಒಟಿಟಿ ಹಕ್ಕು ಒಳ್ಳೆಯ ರೀತಿಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅವರು ಲಾಭದಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.

ಯಶ್ ತಾಯಿ ಪುಷ್ಪಾ ನಿರ್ಮಾಣದ ‘ಕೊತ್ತಲವಾಡಿ’ (Kothalavadi) ಸಿನಿಮಾ ಆಗಸ್ಟ್ 1ರಂದು ತೆರೆ ಕಂಡಿತು. ‘ಸು ಫ್ರಮ್ ಸೋ’ ಸಿನಿಮಾ ಎದುರು ಬಿಡುಗಡೆ ಆಯಿತು. ರಾಜ್ ಬಿ. ಶೆಟ್ಟಿ ಸಿನಿಮಾ ಈಗ ಮೂರನೇ ವಾರಕ್ಕೆ ಕಾಲಿಟ್ಟಿದೆ. ಅಲ್ಲದೆ, ಕೆಲವು ಪರಭಾಷಾ ಸಿನಿಮಾಗಳು ಅಷ್ಟಾಗಿ ಮೆಚ್ಚುಗೆ ಪಡೆದಿಲ್ಲ. ಇದು ‘ಕೊತ್ತಲವಾಡಿ’ ಚಿತ್ರಕ್ಕೆ ಸಹಕಾರಿ ಆಗುವ ನಿರೀಕ್ಷೆ ಇದೆ. ಈ ಸಿನಿಮಾ ಈ ವಾರ ಯಾವ ರೀತಿಯಲ್ಲಿ ಕಲೆಕ್ಷನ್ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಯಶ್ ತಾಯಿ ಸಿನಿಮಾ ಎಂಬ ಕಾರಣಕ್ಕೆ ‘ಕೊತ್ತಲವಾಡಿ’ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿತ್ತು.ಕೆಲವರು ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಸಿನಿಮಾದ ನಿರೂಪಣೆಯನ್ನು ಇನ್ನೂ ಉತ್ತಮವಾಗಿ ಮಾಡಬಹುದಿತ್ತು ಎಂದು ಕೆಲವರು ಹೇಳಿದ್ದಾರೆ.
In the movie #Kothalavadi, they’ve used #YashBOSS‘s bike, which he bought long ago for ₹19,000.
Hero @AmbarPruthvi said this is one of the biggest movies of his career.
Kothalavadi is releasing on August 1st, 2025🔥 pic.twitter.com/aarvXoVnvt
— 𝐑𝐮𝐠𝐠𝐚 (@LoyalYashFaan) July 19, 2025
‘ಕೊತ್ತಲವಾಡಿ’ ಸಿನಿಮಾ ಗಳಿಕೆ ಬಗ್ಗೆ ಚಿತ್ರ ತಂಡ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಪುಷ್ಪ ಅವರ ಸಿನಿಮಾಗೆ ಟಿವಿ ಹಾಗೂ ಒಟಿಟಿ ಹಕ್ಕು ಒಳ್ಳೆಯ ರೀತಿಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಅವರು ಲಾಭದಲ್ಲೇ ಇದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಯಶ್ ತಾಯಿ ಪುಷ್ಪಾ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಕೇವಲ ಲಕ್ಷಗಳಲ್ಲಿ
‘ಕೊತ್ತಲವಾಡಿ’ ಸಿನಿಮಾದಲ್ಲಿ ನಟ ಪೃಥ್ವಿ ಅಂಬರ್ ನಟಿಸಿದ್ದಾರೆ. ಸದಾ ರೊಮ್ಯಾಂಟಿಕ್ ಹೀರೋ ಆಗಿ ಗಮನ ಸೆಳೆಯುತ್ತಿದ್ದ ಅವರು ಈ ಬಾರಿ ಮಾಸ್ ಹೀರೋ ಆಗಿ ಮೆಚ್ಚುಗೆ ಪಡೆದಿದ್ದಾರೆ. ಈ ಚಿತ್ರ ಹಳ್ಳಿ ಬ್ಯಾಕ್ಡ್ರಾಪ್ನಲ್ಲಿ ಸಾಗುತ್ತದೆ. ಆ್ಯಕ್ಷನ್ ಅವತಾರದಲ್ಲಿ ಪೃಥ್ವಿ ಇಷ್ಟ ಆಗುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:29 am, Mon, 4 August 25








