ಏರ್​ಪೋರ್ಟ್​​ನಲ್ಲಿ ಸಲ್ಮಾನ್​ ಖಾನ್ ಅವರನ್ನು ತಡೆದಿದ್ದ ಸಿಐ​ಎಸ್ಎಫ್​ ಅಧಿಕಾರಿಗೆ ಈಗ ಸಂಕಷ್ಟ; ಕಾರಣ ಏನು?

| Updated By: Skanda

Updated on: Aug 24, 2021 | 8:59 AM

Salman Khan: ಸಲ್ಮಾನ್​ ಖಾನ್​ ಅವರ ವೈರಲ್​ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸಿಐ​ಎಸ್ಎಫ್​ ಅಧಿಕಾರಿ ಸೋಮನಾಥ್​ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಅದರಿಂದ ಅವರಿಗೆ ತೊಂದರೆ ಆಗಿದೆ.

ಏರ್​ಪೋರ್ಟ್​​ನಲ್ಲಿ ಸಲ್ಮಾನ್​ ಖಾನ್ ಅವರನ್ನು ತಡೆದಿದ್ದ ಸಿಐ​ಎಸ್ಎಫ್​ ಅಧಿಕಾರಿಗೆ ಈಗ ಸಂಕಷ್ಟ; ಕಾರಣ ಏನು?
ಏರ್​ಪೋರ್ಟ್​​ನಲ್ಲಿ ಸಲ್ಮಾನ್​ ಖಾನ್ ಅವರನ್ನು ತಡೆದಿದ್ದ ಸಿಐ​ಎಸ್ಎಫ್​ ಅಧಿಕಾರಿಗೆ ಈಗ ಸಂಕಷ್ಟ
Follow us on

ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ವಿಚಾರ ಬೇಕಿದ್ದರೂ ಕೆಲವೇ ನಿಮಿಷಗಳಲ್ಲಿ ವೈರಲ್​ ಆಗಿಬಿಡುತ್ತದೆ. ಇತ್ತೀಚೆಗೆ ಸಲ್ಮಾನ್​ ಖಾನ್​ (Salman Khan) ಅವರಿಗೆ ಸಂಬಂಧಿಸಿದ ಒಂದು ವಿಡಿಯೋ ವೈರಲ್​ ಆಗಿತ್ತು. ಮುಂಬೈ ವಿಮಾನ ನಿಲ್ದಾಣವನ್ನು (Mumbai Airport) ಪ್ರವೇಶಿಸುವಾಗ ಅಲ್ಲಿನ ಸಿಐಎಸ್​ಎಫ್​ (CISF) ಅಧಿಕಾರಿಯೊಬ್ಬರು ಸಲ್ಲು ಅವರನ್ನು ತಡೆದು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿದ್ದರು. ಆ ವಿಡಿಯೋ ವೈರಲ್ (Viral Video)​ ಆದ ಬಳಿಕ ಸೋಮನಾಥ್​ ಮೊಹಂತಿ ಎಂಬ ಆ ಅಧಿಕಾರಿ ಸೋಶಿಯಲ್​ ಮೀಡಿಯಾದಲ್ಲಿ ಹೀರೋ ಆಗಿದ್ದರು. ಆದರೆ ಅವರಿಗೆ ಈಗ ಸಂಕಷ್ಟ ಎದುರಾಗಿದೆ.

ಅಷ್ಟಕ್ಕೂ ಸೋಮನಾಥ್​ ಮೊಹಂತಿ ಅವರು ಮಾಡಿದ ತಪ್ಪೇನು? ಈ ವಿಡಿಯೋ ವೈರಲ್​ ಆದ ಬಳಿಕ ಕೆಲವು ಮಾಧ್ಯಮ ಸಂಸ್ಥೆಗಳಿಂದ ಅವರಿಗೆ ಫೋನ್​ ಕರೆಗಳು ಬರಲು ಆರಂಭಿಸಿದವು. ಘಟನೆಗೆ ಸಂಬಂಧಿಸಿದಂತೆ ಅವರಿಂದ ಪ್ರತಿಕ್ರಿಯೆ ಪಡೆಯುವುದು ಮಾಧ್ಯಮ ಪ್ರತಿನಿಧಿಗಳ ಉದ್ದೇಶ ಆಗಿತ್ತು. ಆದರೆ ಅದೇ ಈಗ ಸೋಮನಾಥ್​ ಮೊಹಂತಿ ಪಾಲಿಗೆ ಸಂಕಷ್ಟ ತಂದೊಡ್ಡಿದೆ.

ಸಲ್ಮಾನ್​ ಖಾನ್​ ಅವರ ವೈರಲ್​ ವಿಡಿಯೋಗೆ ಸಂಬಂಧಿಸಿದಂತೆ ಮಾಧ್ಯಮವೊಂದಕ್ಕೆ ಸೋಮನಾಥ್​ ಮೊಹಂತಿ ಅವರು ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾಗಿದೆ. ಸಿಐಎಸ್​ಎಫ್​ ಪ್ರೋಟೋಕಾಲ್​ ಪ್ರಕಾರ ಅವರು ಮಾಧ್ಯಮಗಳ ಜೊತೆ ಈ ರೀತಿ ಮಾತುಕತೆ ನಡೆಸುವಂತಿರಲಿಲ್ಲ. ನಿಯಮ ಮೀರಿದ್ದರಿಂದ ಅವರ ಮೊಬೈಲ್​ ಫೋನ್​ ಅನ್ನು ಹಿರಿಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಸಲ್ಮಾನ್​ ಖಾನ್​ ಅವರು ‘ಟೈಗರ್​ 3’ ಸಿನಿಮಾದ ಶೂಟಿಂಗ್​ಗಾಗಿ ವಿದೇಶಕ್ಕೆ ತೆರಳುತ್ತಿದ್ದರು. ಈ ವೇಳೆ ಅವರು ಮುಂಬೈ ವಿಮಾನ ನಿಲ್ದಾಣವನ್ನು ಪ್ರವೇಶಿಸಿದಾಗ ಅಭಿಮಾನಿಗಳು ಅಲ್ಲಿ ಕಿಕ್ಕಿರಿದು ಜಮಾಯಿಸಿದ್ದರು. ಅವಸರದಲ್ಲಿ ಏರ್​ಪೋರ್ಟ್​ ಪ್ರವೇಶಿಸುತ್ತಿರುವ ಸಲ್ಲು ಅವರನ್ನು ಸೋಮನಾಥ್​ ಮೊಹಂತಿ ಅವರು ತಡೆದು ನಿಲ್ಲಿಸಿದ್ದರು. ಹೈಪ್ರೊಫೈಲ್​ ಸೆಲೆಬ್ರಿಟಿ ಎಂಬುದನ್ನೂ ಲೆಕ್ಕಿಸದೇ ಅವರ ಗುರುತಿನ ಚೀಟಿ ಮುಂತಾದ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ನಂತರ ಒಳಗೆ ಹೋಗಲು ಅನುಮತಿ ನೀಡಿದರು.

ಈ ವಿಡಿಯೋ ಸೋಶಿಯಲ್​ ಮೀಡಿಯದಲ್ಲಿ ವೈರಲ್​ ಆದ ಬಳಿಕ ಅವರನ್ನು ರಿಯಲ್​ ಹೀರೋ ಎಂದು ಜನರು ಹಾಡಿ ಕೊಂಡಾಡುತ್ತಿದ್ದಾರೆ. ಸೋಮನಾಥ್​ ಮೊಹಂತಿ ಅವರ ಕರ್ತವ್ಯ ನಿಷ್ಠೆಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದರ ನಡುವೆ ಸೋಮನಾಥ್​ ಮೊಹಂತಿ ಅವರು ಪ್ರೋಟೋಕಾಲ್​ ಉಲ್ಲಂಘಿಸಿದ್ದರಿಂದ ಹಿರಿಯ ಅಧಿಕಾರಿಗಳಿಗೆ ತಮ್ಮ ಮೊಬೈಲ್​ ಒಪ್ಪಿಸಬೇಕಾದ ಸಂದರ್ಭ ಎದುರಾಗಿದೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ:

‘ದುಡ್ಡು ಕೊಟ್ಟರೆ ಮಾತ್ರ ಬಾಗಿಲು ತೆಗಿತೀನಿ’; ಸಲ್ಮಾನ್​ ಖಾನ್​ ತಮ್ಮನನ್ನೇ ಹೊರಗೆ ನಿಲ್ಲಿಸಿ, ವಾಪಸ್​​ ಕಳಿಸಿದ ಭೂಪ

ಅಫ್ಘಾನಿಸ್ತಾನದ ಜೊತೆ ನಟ ಸಲ್ಮಾನ್ ಖಾನ್​ಗೆ ಇದೆ ಒಂದು ಸಂಬಂಧ; ಏನದು?

Published On - 11:57 pm, Mon, 23 August 21