‘ಮತ್ತೆ ನಾನು ಅಷ್ಟು ತೆಳ್ಳಗಾಗಲ್ಲ’: ನಿರ್ಧಾರದ ಜೊತೆ ಕಾರಣ ತಿಳಿಸಿದ ಕರೀನಾ

ನಟಿ ಕರೀನಾ ಕಪೂರ್​ ಖಾನ್​ ಅಭಿನಯದ ‘ಕ್ರೂ’ ಚಿತ್ರ ಮಾ.29ರಂದು ರಿಲೀಸ್​ ಆಗುತ್ತಿದೆ. ಈ ಸಿನಿಮಾದಲ್ಲಿ ಗಗನ ಸಖಿಯ ಪಾತ್ರಕ್ಕೆ ಕರೀನಾ ಬಣ್ಣ ಹಚ್ಚಿದ್ದಾರೆ. ಇದರ ಟ್ರೇಲರ್​ ಕುತೂಹಲ ಸೃಷ್ಟಿಸಿದೆ. ‘ಕ್ರೂ’ ಚಿತ್ರದಲ್ಲಿ ಕರೀನಾ ಕಪೂರ್ ಖಾನ್​ ಜೊತೆ ಕೃತಿ ಸನೋನ್​, ಟಬು ನಟಿಸಿದ್ದಾರೆ. ಈ ಸಿನಿಮಾ ಪ್ರಚಾರದ ವೇಳೆ ಕರೀನಾ ಅವರು ಸೈಜ್​ ಜೀರೋ ಬಗ್ಗೆ ಮಾತಾಡಿದ್ದಾರೆ.

‘ಮತ್ತೆ ನಾನು ಅಷ್ಟು ತೆಳ್ಳಗಾಗಲ್ಲ’: ನಿರ್ಧಾರದ ಜೊತೆ ಕಾರಣ ತಿಳಿಸಿದ ಕರೀನಾ
ಕರೀನಾ ಕಪೂರ್​ ಖಾನ್​

Updated on: Mar 27, 2024 | 3:41 PM

ನಟಿ ಕರೀನಾ ಕಪೂರ್​ (Kareena Kapoor) ಅವರು ಹಲವು ವರ್ಷಗಳಿಂದ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಮದುವೆ ಆದ ಬಳಿಕ ಅವರ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. ಹಾಗಂತ ಅವರು ನಟನೆಯಿಂದ ಹಿಂದೆ ಸರಿದಿಲ್ಲ. ತಮಗೆ ಸೂಕ್ತ ಎನಿಸುವಂತಹ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಅವರು ನಟಿಸುತ್ತಿದ್ದಾರೆ. ಇನ್ಮುಂದೆ ತಾವು ಸೈಜ್​ ಜೀರೋ (Size Zero) ಮಾಡುವುದಿಲ್ಲ ಎಂದು ಕರೀನಾ ಕಪೂರ್​ ನಿರ್ಧರಿಸಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ಕರೀನಾ ಕಪೂರ್​ ಖಾನ್​ ನಟಿಸಿರುವ ‘ಕ್ರೂ’ ಸಿನಿಮಾ ಮಾರ್ಚ್​ 29ರಂದು ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಅವರು ಗಗನ ಸಖಿಯ ಪಾತ್ರ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಟ್ರೇಲರ್​ ಕುತೂಹಲ ಮೂಡಿಸಿದೆ. ‘ಕ್ರೂ’ ಸಿನಿಮಾದಲ್ಲಿ ಕರೀನಾ ಕಪೂರ್ ಖಾನ್​ ಜೊತೆ ಕೃತಿ ಸನೋನ್​ ಹಾಗೂ ಟಬು ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಈ ಚಿತ್ರದ ಪ್ರಮೋಷನ್​ ವೇಳೆ ಕರೀನಾ ಕಪೂರ್​ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನಿವೃತ್ತಿ ಪಡೆಯುವ ಮಾತಾಡಿದ ‘12th ಫೇಲ್​’ ಚಿತ್ರದ ನಟ; ಇದಕ್ಕೆ ಕಾರಣ ಕರೀನಾ ಕಪೂರ್​

2008ರಲ್ಲಿ ಕರೀನಾ ಕಪೂರ್​ ನಟನೆಯ ‘ಟಶನ್​’ ಸಿನಿಮಾ ತೆರೆಕಂಡಿತ್ತು. ಆ ಸಿನಿಮಾಗಾಗಿ ಕರೀನಾ ಅವರು ಸಖತ್​ ತಯಾರಿ ಮಾಡಿಕೊಂಡಿದ್ದರು. ದೇಹದ ತೂಕ ಕಡಿಮೆ ಮಾಡಿಕೊಂಡು ಜೀರೋ ಸೈಜ್​ಗೆ ಬಂದಿದ್ದರು. ಅದರ ಬಗ್ಗೆ ಅಭಿಮಾನಿಗಳ ವಲಯದಲ್ಲಿ, ಮಾಧ್ಯಮಗಳಲ್ಲಿ ಸಖತ್ ಚರ್ಚೆ ಆಗಿತ್ತು. ಬಾಡಿ ಟ್ರಾನ್ಸ್​ಫಾರ್ಮೇಷನ್​ ಮಾಡಿಕೊಳ್ಳಲು ಕರೀನಾ ಕಪೂರ್​ ಅವರು ಒಂದೂವರೆ ವರ್ಷ ಕಷ್ಟಪಟ್ಟಿದ್ದರು.

ಇದನ್ನೂ ಓದಿ: ‘ದೊಡ್ಡ ಸಿನಿಮಾದೊಂದಿಗೆ ದಕ್ಷಿಣಕ್ಕೆ ಕಾಲಿಡಲಿದ್ದೇನೆ’; ಕರೀನಾ ಮಾತಿನಿಂದ ಹುಟ್ಟಿದೆ ಅನುಮಾನ

‘ನಾನು ಮಹತ್ಷಾಕಾಂಕ್ಷೆ ಇರುವವಳು ನಿಜ. ಆದರೆ ಮನಸ್ಸಿಗೆ ಹಾನಿ ಆಗುವ ಮಟ್ಟಕ್ಕೆ ಹೋಗಲಾರೆ. ಸೈಜ್​ ಜೀರೋ ಮಾಡುವುದು ತುಂಬ ಸವಾಲಿನ ಕೆಲಸ. ಜೀವನದಲ್ಲಿ ಒಮ್ಮೆ ಮಾಡಬೇಕಿತ್ತು. ಹಾಗಾಗಿ ಟಶನ್​ ಸಿನಿಮಾಗಾಗಿ ಮಾಡಿದೆ. ಅಲ್ಲಿಯತನಕ ನಾನು ಅಂಥ ಸಿನಿಮಾ ಮಾಡಿರಲಿಲ್ಲ. ಆ ನಂತರವೂ ಮಾಡಿಲ್ಲ. ಎಲ್ಲವನ್ನೂ ಒಪ್ಪಿಕೊಳ್ಳುವ ಕಾಲಘಟ್ಟದಲ್ಲಿ ಈಗ ನಾವಿದ್ದೇವೆ. ಆ್ಯಕ್ಷನ್​ ಸಿನಿಮಾಗೆ ಒಂದು ಬಗೆಯ ದೇಹ ಸೂಕ್ತವಲ್ಲ ಎಂಬುದೇನೂ ಇಲ್ಲ. ಆ್ಯಕ್ಷನ್​ ಸಿನಿಮಾ ಮಾಡಲು ನಾನು ಸಿದ್ಧಳಿದ್ದೇನೆ. ಆದರೆ ಸೈಜ್​ ಜೀರೋ ಮಾಡಿಕೊಳ್ಳಲ್ಲ’ ಎಂದು ಕರೀನಾ ಕಪೂರ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us