Salman Khan: ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ನೋಡಿ ಸಿಟ್ಟು ಮಾಡಿಕೊಂಡ ದಗ್ಗುಬಾಟಿ ವೆಂಕಟೇಶ್​ ಅಭಿಮಾನಿಗಳು

|

Updated on: Apr 25, 2023 | 1:24 PM

Daggubati Venkatesh: ಟಾಲಿವುಡ್​ನಲ್ಲಿ ಸಖತ್​ ಖ್ಯಾತಿ​ ಇರುವಂತಹ ಕಲಾವಿದ ವೆಂಕಟೇಶ್​ ಅವರನ್ನು ಬಾಲಿವುಡ್​ ಚಿತ್ರದಲ್ಲಿ ಈ ರೀತಿಯಾಗಿ ತೋರಿಸಿರುವುದು ಸರಿಯಲ್ಲ ಎಂಬ ಚರ್ಚೆ ಅಭಿಮಾನಿಗಳ ವಲಯದಲ್ಲಿ ನಡೆಯುತ್ತಿದೆ.

Salman Khan: ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ನೋಡಿ ಸಿಟ್ಟು ಮಾಡಿಕೊಂಡ ದಗ್ಗುಬಾಟಿ ವೆಂಕಟೇಶ್​ ಅಭಿಮಾನಿಗಳು
ದಗ್ಗುಬಾಟಿ ವೆಂಕಟೇಶ್, ಸಲ್ಮಾನ್ ಖಾನ್
Follow us on

2023ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದ್ದ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ (Kisi Ka Bhai Kisi Ki Jaan) ಚಿತ್ರ ಏಪ್ರಿಲ್​ 21ರಂದು ತೆರೆಕಂಡಿತು. ಅಭಿಮಾನಿಗಳು ನಿರೀಕ್ಷಿಸಿದ ರೀತಿಯಲ್ಲಿ ಈ ಸಿನಿಮಾ ಮೂಡಿಬಂದಿಲ್ಲ. ಆದ್ದರಿಂದ ಪ್ರೇಕ್ಷಕರ ವಲಯದಿಂದ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಲ್ಮಾನ್​ ಖಾನ್​ (Salman Khan) ಅಭಿಮಾನಿಗಳು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಮೊದಲ ದಿನ ಸಾಧಾರಣ ಕಲೆಕ್ಷನ್​ ಮಾಡಿದ್ದ ಈ ಚಿತ್ರ ನಂತರದ ದಿನಗಳಲ್ಲಿ ಸುಧಾರಣೆ ಕಂಡಿದೆ. ಇದೆಲ್ಲದರ ನಡುವೆ ಟಾಲಿವುಡ್​ ನಟ ದಗ್ಗುಬಾಟಿ ವೆಂಕಟೇಶ್​ (Daggubati Venkatesh) ಅವರ ಅಭಿಮಾನಿಗಳಿಗೆ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾ ಇಷ್ಟ ಆಗಿಲ್ಲ. ವೆಂಕಟೇಶ್​ ಅವರ ಪಾತ್ರಕ್ಕೆ ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲ ಎಂಬುದೇ ಇದಕ್ಕೆ ಕಾರಣ. ಹಾಗಾಗಿ ಕೆಲವರು ಸಲ್ಮಾನ್​ ಖಾನ್​ ವಿರುದ್ಧ ಗರಂ ಆಗಿದ್ದಾರೆ.

ಸ್ಟಾರ್​ ಕಲಾವಿದರು ಬೇರೆ ಭಾಷೆಯ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದಾಗ ಸೂಕ್ತ ಸ್ಕ್ರೀನ್​ ಸ್ಪೇಸ್​ ಸಿಗಬೇಕು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಾರೆ. ಅಲ್ಲದೇ, ಆ ಪಾತ್ರಕ್ಕೆ ಮಹತ್ವ ಇರಬೇಕು ಎಂದು ಕೂಡ ಫ್ಯಾನ್ಸ್ ಬಯಸುತ್ತಾರೆ. ಆದರೆ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್​’ ಸಿನಿಮಾದಲ್ಲಿ ದಗ್ಗುಬಾಟಿ ವೆಂಕಟೇಶ್​ ಅವರ ಪಾತ್ರಕ್ಕೆ ಹೆಚ್ಚು ಸ್ಕೋಪ್​ ಸಿಕ್ಕಿಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Kisi Ka Bhai Kisi Ki Jaan: ‘ವಯಸ್ಸಾದವರ ಮೇಲೆ ಸಲ್ಮಾನ್​ ಖಾನ್​ ಕೈ ಎತ್ತಲ್ಲ’: ಜಗಪತಿ ಬಾಬು

ಬಹುತೇಕ ದೃಶ್ಯಗಳಲ್ಲಿ ದಗ್ಗುಬಾಟಿ ವೆಂಕಟೇಶ್​ ಅವರ ಬದಲಿಗೆ ಸಲ್ಮಾನ್​ ಖಾನ್ ಅವರೇ ಅಬ್ಬರಿಸಿದ್ದಾರೆ. ಕ್ಲೈಮ್ಯಾಕ್ಸ್​ನಲ್ಲಿ ಸಲ್ಮಾನ್​ ಖಾನ್​ ಒಬ್ಬರೇ ಎಲ್ಲ ವಿಲನ್​ಗಳನ್ನು ಸೆದೆಬಡಿಯುತ್ತಾರೆ. ಟಾಲಿವುಡ್​ನಲ್ಲಿ ಸ್ಟಾರ್​ಡಮ್​ ಇರುವಂತಹ ಕಲಾವಿದ ವೆಂಕಟೇಶ್​ ಅವರನ್ನು ಬಾಲಿವುಡ್​ ಸಿನಿಮಾದಲ್ಲಿ ಈ ರೀತಿಯಾಗಿ ತೋರಿಸಿರುವುದು ಸರಿಯಲ್ಲ ಎಂಬ ಚರ್ಚೆ ಅಭಿಮಾನಿಗಳ ವಲಯದಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: Salman Khan: ಒಂದು ದಿನದ ಮಟ್ಟಿಗೆ ತಮ್ಮ ಪ್ರೀತಿಯ ವಸ್ತುವನ್ನು ಆಮಿರ್​ ಖಾನ್​ಗೆ ನೀಡಿದ ಸಲ್ಮಾನ್​ ಖಾನ್​

ಈದ್ ಸಂದರ್ಭದಲ್ಲಿ ಸಲ್ಮಾನ್ ಖಾನ್ ಚಿತ್ರಗಳು ರಿಲೀಸ್ ಆಗುವುದು ವಾಡಿಕೆ. ಅದೇ ರೀತಿ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ರಂಜಾನ್ ಸಂದರ್ಭದಲ್ಲಿ (ಏಪ್ರಿಲ್ 21) ರಿಲೀಸ್ ಆಯಿತು. ಮೊದಲ ದಿನ ಈ ಚಿತ್ರ 15 ಕೋಟಿ ರೂಪಾಯಿ ಗಳಿಕೆ ಮಾಡಿತು. ಸಾಮಾನ್ಯವಾಗಿ ಸಲ್ಮಾನ್ ಖಾನ್ ಚಿತ್ರದ ಮೊದಲ ದಿನದ ಗಳಿಕೆ 25 ಕೋಟಿ ರೂಪಾಯಿ ಮೇಲಿರುತ್ತಿತ್ತು. ಹೀಗಾಗಿ, ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ಗಳಿಕೆಯನ್ನು ಸಾಧಾರಣ ಗಳಿಕೆ ಎಂದು ಬಾಕ್ಸ್ ಆಫೀಸ್ ಪಂಡಿತರು ಕರೆದರು.

ಶನಿವಾರ (ಏಪ್ರಿಲ್ 23) ಈ ಚಿತ್ರ 25.75 ಕೋಟಿ ರೂಪಾಯಿ ಗಳಿಸಿದೆ. ಭಾನುವಾರ ಚಿತ್ರದ ಗಳಿಕೆ ಮತ್ತಷ್ಟು ಹೆಚ್ಚಿದೆ. ಈ ಸಿನಿಮಾ ಭಾನುವಾರ 26.61 ಕೋಟಿ ರೂಪಾಯಿ ಹಾಗೂ ಸೋಮವಾರ 10.17 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 78.34 ಕೋಟಿ ರೂಪಾಯಿ ದಾಟಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:24 pm, Tue, 25 April 23