
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಸದ್ಯ ಸಿನಿರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಗರ್ಭಿಣಿ (Pregnant) ಆಗಿದ್ದರೂ ಕೂಡ ಅವರು ತಮ್ಮ ವೃತ್ತಿಪರ ಕೆಲಸಗಳಿಗೆ ಯಾವುದೇ ಬ್ರೇಕ್ ಹಾಕದೇ ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಶಾರುಖ್ ಖಾನ್ ಅಭಿನಯದ ‘ಕಿಂಗ್’ ಸಿನಿಮಾದ ಚಿತ್ರೀಕರಣವನ್ನು ಮುಗಿಸಿ ಭಾರತಕ್ಕೆ ಮರಳಿರುವ ದೀಪಿಕಾ, ಈಗ ನೇರವಾಗಿ ಬೆಂಗಳೂರಿನಲ್ಲಿ ಜಾಹೀರಾತು ಶೂಟಿಂಗ್ ಸೆಟ್‌ಗೆ ಹಾಜರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಜಾಹೀರಾತಿನ ಶೂಟಿಂಗ್‌ನ ತೆರೆಹಿಂದಿನ ವಿಡಿಯೋವೊಂದು ಆನ್‌ಲೈನ್‌ನಲ್ಲಿ ಲೀಕ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಕ್ಲಾಸಿಕ್ ಬ್ಲೂ ಕಲರ್ ಪ್ಯಾಂಟ್‌ಸೂಟ್ ಧರಿಸಿ ಅತ್ಯಂತ ಸ್ಟೈಲಿಶ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಗರ್ಭಿಣಿಯಾಗಿದ್ದರೂ ಸಹ ಅವರು ಕ್ಯಾಮೆರಾ ಮುಂದೆ ಅತ್ಯಂತ ಸರಳವಾಗಿ ಮತ್ತು ಆಕರ್ಷಕವಾಗಿ ನೃತ್ಯದ ಹೆಜ್ಜೆಗಳನ್ನು ಹಾಕುತ್ತಿರುವುದು ಅಭಿಮಾನಿಗಳ ಮನಗೆದ್ದಿದೆ. ದಕ್ಷಿಣ ಆಫ್ರಿಕಾದಲ್ಲಿ ‘ಕಿಂಗ್’ ಚಿತ್ರಕ್ಕೆ ಶೂಟಿಂಗ್ ಮುಗಿಸಿದ ತಕ್ಷಣವೇ ಬೆಂಗಳೂರಿನಲ್ಲಿ ಈ ಜಾಹೀರಾತಿನ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ, ದಕ್ಷಿಣ ಆಫ್ರಿಕಾದ ಶೂಟಿಂಗ್ ಸೆಟ್‌ಗಳಿಂದ ಲೀಕ್ ಆದ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅಲ್ಲಿ ದೀಪಿಕಾ ಮತ್ತು ಶಾರುಖ್ ಖಾನ್ ಅದ್ದೂರಿಯಾಗಿ ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್’, ‘ಹ್ಯಾಪಿ ನ್ಯೂ ಇಯರ್’, ‘ಪಠಾಣ್’ ಮತ್ತು ‘ಜವಾನ್’ ಚಿತ್ರಗಳ ನಂತರ ಶಾರುಖ್ ಜೊತೆ ದೀಪಿಕಾ ನಟಿಸುತ್ತಿರುವ 6ನೇ ಸಿನಿಮಾ ಇದಾಗಿದೆ.
Deepika Padukone was seen shooting for hilton in banglore 🧿 pic.twitter.com/VI5G0XfV62
— Deepika Files (@FilesDeepika) May 19, 2026
ಕೇಪ್ ಟೌನ್‌ನಲ್ಲಿ ನಡೆದ ಈ ಶೂಟಿಂಗ್ ವೇಳೆ ಪತಿ ರಣವೀರ್ ಸಿಂಗ್ ಮತ್ತು ಮಗಳು ದುವಾ ಕೂಡ ದೀಪಿಕಾ ಜೊತೆಗಿದ್ದರು. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಮಗಳನ್ನು ರಣವೀರ್ ಸಿಂಗ್ ನೋಡಿಕೊಳ್ಳುತ್ತಿರುವ ಮತ್ತು ದೀಪಿಕಾ ಜೊತೆ ಸಮಯ ಕಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ಗರ್ಭಿಣಿ ಆದ ನಂತರವೂ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಿದ ದೀಪಿಕಾ ಪಡುಕೋಣೆ
‘ಕಿಂಗ್’ ಸಿನಿಮಾ ಮಾತ್ರವಲ್ಲದೆ, ದೀಪಿಕಾ ಪಡುಕೋಣೆ ಅವರ ಕೈಯಲ್ಲಿ ಮತ್ತೊಂದು ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ಇದೆ. ಖ್ಯಾತ ನಿರ್ದೇಶಕ ಅಟ್ಲಿ ನಿರ್ದೇಶನದ ‘ರಾಕಾ’ ಚಿತ್ರದಲ್ಲಿ ಅವರು ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ಮುಖ್ಯ ಭೂಮಿಕೆಯಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ. ಈ ಎಲ್ಲ ಸಿನಿಮಾಗಳ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.