‘ರಾಕಾ’ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ಇರ್ತಾರೆ ದೀಪಿಕಾ ಪಡಿಯಚ್ಚು

ಗರ್ಭಿಣಿಯಾಗಿರುವ ದೀಪಿಕಾ ಪಡುಕೋಣೆ ‘ರಾಕಾ’ ಹಾಗೂ ‘ಕಿಂಗ್’ ಚಿತ್ರಗಳ ಶೂಟಿಂಗ್ ಮುಗಿಸಲು ನಿರ್ಧರಿಸಿದ್ದಾರೆ. ಆ್ಯಕ್ಷನ್ ಪ್ರಧಾನವಾದ ‘ರಾಕಾ’ ಸಿನಿಮಾದ ಅಪಾಯಕಾರಿ ದೃಶ್ಯಗಳಿಗೆ ತಂಡ ಬಾಡಿ ಡಬಲ್ ಮೊರೆ ಹೋಗಿದೆ. ನಟಿಯ ಸುರಕ್ಷತೆ ಹಾಗೂ ಸಿನಿಮಾದ ವೇಗ ಕಾಯ್ದುಕೊಳ್ಳಲು ಈ ತಂತ್ರ ಅನುಸರಿಸಲಾಗಿದ್ದು, ಕ್ಲೋಸ್‌ಅಪ್‌ ದೃಶ್ಯಗಳಿಗೆ ಮಾತ್ರ ದೀಪಿಕಾ ಪಾಲ್ಗೊಳ್ಳಲಿದ್ದಾರೆ.

‘ರಾಕಾ’ ಸಿನಿಮಾದ ಬಹುತೇಕ ದೃಶ್ಯಗಳಲ್ಲಿ ಇರ್ತಾರೆ ದೀಪಿಕಾ ಪಡಿಯಚ್ಚು
ದಿಪೀಕಾ

Updated on: Apr 28, 2026 | 7:42 AM

ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರು ತಾಯಿ ಆಗುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ಅವರು ಹೆಣ್ಣು ಮಗುವಿಗೆ ಜನ್ಮನೀಡಿದರು. ಈಗ ಅವರು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈಗ ಅವರು ‘ರಾಕಾ’ ಸಿನಿಮಾ ಹಾಗೂ ‘ಕಿಂಗ್’ ಚಿತ್ರಗಳ ಶೂಟ್ ಪೂರ್ಣಗೊಳಿಸಬೇಕಿದೆ. ಈ ಸಿನಿಮಾದಲ್ಲಿ ಬರುವ ಆ್ಯಕ್ಷನ್ ದೃಶ್ಯಗಳಿಗೆ ಬಾಡಿ ಡಬಲ್ ಬಳಕೆ ಮಾಡಲು ತಂಡ ನಿರ್ಧರಿಸಿದೆ.

ಸಾಮಾನ್ಯವಾಗಿ ಪ್ರೆಗ್ನೆಂಟ್ ಆದಾಗ ಮನೆಯಲ್ಲೇ ವಿಶ್ರಾಂತಿ ಪಡೆಯಲು ಎಲ್ಲರೂ ನಿರ್ಧರಿಸುತ್ತಾರೆ. ಆದರೆ, ದೀಪಿಕಾ ಪಡುಕೋಣೆ ಆ ರೀತಿ ಅಲ್ಲ. ಅವರು ಒಪ್ಪಿಕೊಂಡ ಸಿನಿಮಾ ಕೆಲಸಗಳನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ‘ರಾಕಾ’ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳಿವೆ. ಈ ಆ್ಯಕ್ಷನ್ ದೃಶ್ಯಗಳನ್ನು ಅವರಿಂದ ಮಾಡಿಸಲು ತಂಡ ರೆಡಿ ಇಲ್ಲ. ಹೀಗಾಗಿ, ಬಾಡಿ ಡಬಲ್ ಮೊರೆ ಹೋಗಿದೆ.

ಬಾಡಿ ಡಬಲ್ ಚಿತ್ರರಂಗದಲ್ಲಿ ಮೊದಲಿನಿಂದಲೂ ಬಳಕೆಯಲ್ಲಿರುವ ತಂತ್ರ. ರಿಸ್ಕಿ ಆ್ಯಕ್ಷನ್ ದೃಶ್ಯಗಳ ಸಮಯದಲ್ಲಿ ಇದನ್ನು ಬಳಸಲಾಗುತ್ತದೆ. ದೇಹದ ಆಕಾರದಲ್ಲಿ ಹೀರೋ/ಹೀರೋಯಿನ್ ಹೋಲುವ ವ್ಯಕ್ತಿಯನ್ನು ಕರೆತರಲಾಗುತ್ತದೆ. ಇಲ್ಲಿ ಎಲ್ಲಿಯೂ ಮುಖವನ್ನು ತೋರಿಸುವುದಿಲ್ಲ. ರಿಸ್ಕಿ ಸ್ಟಂಟ್​​ಗಳನ್ನು ಕಲಾವಿದರ ಬದಲು ಇವರು ಮಾಡುತ್ತಾರೆ. ಇದರಿಂದ ಸ್ಟಂಟ್ ಮಾಡುವ ವೇಳೆ ಏನಾದರೂ ತೊಂದರೆ ಆದರೆ, ಹೀರೋ/ಹೀರೋಯಿನ್ ಸುರಕ್ಷಿತವಾಗಿರುತ್ತಾರೆ. ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಇದರಲ್ಲಿ ಅನೇಕ ದೃಶ್ಯಗಳನ್ನು ಬಾಡಿ ಡಬಲ್ ಮೂಲಕವೇ ಮಾಡಲಾಗಿತ್ತು ಎಂದು ವರದಿ ಆಗಿತ್ತು.

ಇದನ್ನೂ ಓದಿ: ಗರ್ಭಿಣಿ ಆದ ನಂತರವೂ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಿದ ದೀಪಿಕಾ ಪಡುಕೋಣೆ

ಈಗ ಅಟ್ಲಿ ಕೂಡ ಇದೇ ತಂತ್ರದ ಮೊರೆ ಹೋಗಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆ ಅವರು ಕ್ಲೋಸಪ್ ಶಾಟ್​​ಗಳನ್ನು ಕೊಟ್ಟಿದ್ದಾರೆ. ಸ್ಟಂಟ್ ಮಾಡುವ ದೃಶ್ಯಗಳಲ್ಲಿ ದೀಪಿಕಾ ಪಡುಕೋಣೆ ಮುಖ ತೋರಿಸುವ ದೃಶ್ಯ ಬಂದರೆ, ವಿಎಫ್​​ಎಕ್ಸ್ ಮೂಲಕ ಎಡಿಟ್ ಮಾಡಲು ನಿರ್ಧರಿಸಲಾಗಿದೆ. ಅಲ್ಲು ಅರ್ಜುನ್ ಅವರು ‘ರಾಕಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಟ್ಲಿ ನಿರ್ದೇಶನ ಇರುವ ಈ ಚಿತ್ರಕ್ಕೆ ತಮಿಳಿನ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Published On - 7:36 am, Tue, 28 April 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us