ಈ ಸೆಲೆಬ್ರಿಟಿಗಳಿಗೆ ಇದೆ ವಿಚಿತ್ರ ಗೀಳು; ಕೇಳಿದ್ರೆ ಅಚ್ಚರಿ ಪಡೋದು ಗ್ಯಾರಂಟಿ..

ರಣವೀರ್ ಸಿಂಗ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಪರ್ಫ್ಯೂಮ್ ಬಗ್ಗೆ ಕ್ರೇಜ್ ಇದೆ. ಎಲ್ಲೇ ತೆರಳಿದರೂ ಅವರು ಇದನ್ನು ಬಳಕೆ ಮಾಡುತ್ತಾರೆ. ಪರ್ಫ್ಯೂಮ್ ಇಲ್ಲದೇ ರಣವೀರ್ ತೆರಳುವುದೇ ಇಲ್ಲ. ಈ ರೀತಿ ಗೀಳು ಹೊಂದಿದ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಈ ಸೆಲೆಬ್ರಿಟಿಗಳಿಗೆ ಇದೆ ವಿಚಿತ್ರ ಗೀಳು; ಕೇಳಿದ್ರೆ ಅಚ್ಚರಿ ಪಡೋದು ಗ್ಯಾರಂಟಿ..
ಈ ಸೆಲೆಬ್ರಿಟಿಗಳಿಗೆ ಇದೆ ವಿಚಿತ್ರ ಗೀಳು; ಕೇಳಿದ್ರೆ ಅಚ್ಚರಿ ಪಡೋದು ಗ್ಯಾರಂಟಿ..
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Feb 08, 2024 | 9:52 AM

ಸೆಲೆಬ್ರಿಟಿಗಳಾದರೂ ಅವರಿಗೆ ತಮ್ಮದೇ ಆದ ಹವ್ಯಾಸ ಇರುತ್ತದೆ. ಜನಸಾಮಾನ್ಯರಂತೆ ಅವರಿಗೂ ಹಲವು ಗೀಳುಗಳು ಇರುತ್ತವೆ. ಈ ಬಗ್ಗೆ ಕೆಲವು ಸೆಲೆಬ್ರಿಟಿಗಳು ಹೇಳಿಕೊಳ್ಳುತ್ತಾರೆ. ಕೆಲವರಿಗೆ ಸ್ವಚ್ಛತೆಯ ಗೀಳಿದ್ದರೆ ಇನ್ನೂ ಕೆಲವರಿಗೆ ಒಸಿಡಿ ಇರುತ್ತದೆ. ಕರೀನಾ ಕಪೂರ್ (Kareena Kapoor) ಇಂದ ಹಿಡಿದು ದೀಪಿಕಾ ಪಡುಕೋಣೆವರೆಗೆ ಅನೇಕರು ಈ ರೀತಿ ಒಸಿಡಿಯಿಂದ ಬಳಲಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕರೀನಾ ಕಪೂರ್

ಕರೀನಾ ಕಪೂರ್ ಅವರು ಎಲ್ಲೇ ಕಾಣಿಸಿಕೊಂಡರೂ ಸುಂದರವಾಗಿ ಕಾಣಿಸಿಕೊಳ್ಳೋಕೆ ಆದ್ಯತೆ ನೀಡುತ್ತಾರೆ. ಅವರು ಫಿಟ್ನೆಸ್ ಫ್ರೀಕ್. ಫಿಟ್ನೆಸ್​್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರಿಗೆ ಬೇರೆ ಬೇರೆ ಕಡೆ ಆಹಾರ ತಿನ್ನೋದು ಎಂದರೆ ಇಷ್ಟ. ಆದರೂ ಅವರು ಅದನ್ನು ನಿಯಂತ್ರಿಸುತ್ತಾರೆ.

ದೀಪಿಕಾ ಪಡುಕೋಣೆ

ನಟಿ ದೀಪಿಕಾ ಪಡುಕೋಣೆ ಅವರು ‘ಫೈಟರ್’ ಸಿನಿಮಾದಿಂದ ಗೆಲುವು ಕಂಡಿದ್ದಾರೆ. ಈಗ ಅವರು ‘ಕಲ್ಕಿ 2898 ಎಡಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ತಮ್ಮ ಸುತ್ತಲೂ ಇರುವ ಜಾಗ ಸ್ವಚ್ಛವಾಗಿ ಇರಬೇಕು ಎಂದು ಅವರು ಬಯಸುತ್ತಾರೆ. ಅವರ ಮನೆಯಲ್ಲೂ ಎಲ್ಲವೂ ಆರ್ಗನೈಸ್ ಆಗಿಯೇ ಇರಬೇಕು. ಇಲ್ಲವಾದಲ್ಲಿ ಅವರಿಗೆ ಸಿಟ್ಟು ಬರುತ್ತದೆ.

ರಣವೀರ್ ಸಿಂಗ್

ರಣವೀರ್ ಸಿಂಗ್ ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಪರ್ಫ್ಯೂಮ್ ಬಗ್ಗೆ ಕ್ರೇಜ್ ಇದೆ. ಅವರು ಎಲ್ಲೇ ತೆರಳಿದರೂ ಇದನ್ನು ಬಳಕೆ ಮಾಡುತ್ತಾರೆ. ಪರ್ಫ್ಯೂಮ್ ಇಲ್ಲದೇ ಅವರು ತೆರಳುವುದೇ ಇಲ್ಲ.

ಪ್ರೀತಿ ಜಿಂಟಾ

ನಟಿ ಪ್ರೀತಿ ಜಿಂಟಾ ನಟನೆಯಿಂದ ದೂರವೇ ಇದ್ದಾರೆ. ಆದಾಗ್ಯೂ ಅವರಿಗೆ ಇರೋ ಬೇಡಿಕೆ ಕಡಿಮೆ ಆಗಿಲ್ಲ. ಅವರಿಗೆ ಸ್ವಚ್ಛತೆ ಬಗ್ಗೆ ಸಾಕಷ್ಟು ಚಿಂತೆ ಆಗುತ್ತದೆ. ಅವರು ಸ್ವಚ್ಛವಿಲ್ಲದ ಬಾತ್​ರೂಂ ಕಡೆ ಸುಳಿಯುವುದೂ ಇಲ್ಲ. ಅವರು ಹೊಸ ಪ್ರದೇಶಗಳಲ್ಲಿ ಬಾತ್​ರೂಂ ಬಳಸುವ ಮೊದಲು ಆಲೋಚಿಸುತ್ತಾರೆ.

ಪ್ರಿಯಾಂಕಾ ಚೋಪ್ರಾ.

ಪ್ರಿಯಾಂಕಾ ಚೋಪ್ರಾಗೆ ಬಟ್ಟೆಯ ಬಗ್ಗೆ ಕ್ರೇಜ್ ಇದೆ. ಅವರು ಎಲ್ಲೇ ತೆರಳಿದರೂ ಬಟ್ಟೆ ಹಾಗೂ ಶ್ಯೂ ಖರೀದಿ ಮಾಡುತ್ತಾರೆ. ಅವರ ಬಳಿ 80 ಜೊತೆ ಶ್ಯೂ ಇದೆ ಎನ್ನಲಾಗಿದೆ. ಸದ್ಯ ಅವರು ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಮಗಳು ಮಾಲ್ತಿ ಫೋಟೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ.

ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಅವರಿಗೆ ಸೋಪ್ ಹಾಗೂ ಪರ್ಫ್ಯೂಮ್ ಬಗ್ಗೆ ವಿಶೇಷ ಆಸಕ್ತಿ ಇದೆ. ಹ್ಯಾಂಡ್ ಮೇಡ್ ಸೋಪ್​ಗಳನ್ನು ಬಳಸಲು ಅವರು ಆದ್ಯತೆ ನೀಡುತ್ತಾರೆ. ಅವರ ಬಳಿ ಸಾಕಷ್ಟು ವಿಧದ ಸೋಪ್​ಗಳಿವೆ.

ಸೋನಮ್ ಕಪೂರ್

ಸೋನಮ್ ಕಪೂರ್ ಅವರು ಹ್ಯಾಂಡ್​ಬ್ಯಾಗ್ ಬಗ್ಗೆ ವಿಶೇಷ ಕ್ರೇಜ್ ಹೊಂದಿದ್ದಾರೆ. ಹಲವು ದೇಶಗಳ ಹ್ಯಾಂಡ್​ಬ್ಯಾಗ್ ಅವರ ಬಳಿ ಇದೆ. ಅವರು ವಿದೇಶಗಳಿಗೆ ಭೇಟಿ ನೀಡಿದಾಗ ಮೊದಲು ಕಣ್ಣಿಡೋದು ಬ್ಯಾಗ್​ಗಳ ಮೇಲೆ.

ಶಾರುಖ್ ಖಾನ್

ಶಾರುಖ್ ಖಾನ್ ಅವರಿಗೆ ಜೀನ್ಸ್​ ಬಗ್ಗೆ ವಿಶೇಷ ಪ್ರೀತಿ. ಅವರ ಬಳಿ 1500ಕ್ಕೂ ಅಧಿಕ ಜೀನ್ಸ್ ಇದೆ. ಇದಕ್ಕಾಗಿ ಅವರು ವಿಶೇಷ ಕಬೋರ್ಡ್ ಮಾಡಿದ್ದಾರೆ. ಇದರ ಜೊತೆಗೆ ಪರ್ಫ್ಯೂಮ್ ಬಗ್ಗೆಯೂ ಅವರಿಗೆ ಆಸಕ್ತಿ ಇದೆ.

ಇದನ್ನೂ ಓದಿ: ಮಗಳ ಸಿನಿಮಾಗೆ ಅಪ್ಪನದ್ದೇ ಬಂಡವಾಳ; ಶ್ರುತಿ ಹಾಸನ್​ಗೆ ಸಿಕ್ತು ದೊಡ್ಡ ಆಫರ್

ಸನ್ನಿ ಲಿಯೋನ್

ಸನ್ನಿ ಲಿಯೋನ್ ಅವರಿಗೆ ಸ್ವಚ್ಛತೆ ಬಗ್ಗೆ ವಿಶೇಷ ಗಮನ ಇದೆ. ಅವರು ಸದಾ ಕ್ಲೀನ್ ಇರೋಕೆ ಆದ್ಯತೆ ನೀಡುತ್ತಾರೆ. ಅವರು ನಿದ್ರೆ ಮಾಡುವುದಕ್ಕೂ ಮೊದಲು ತಮ್ಮ ಕಾಲುಗಳನ್ನು 15-20 ನಿಮಿಷ ತೊಳೆದುಕೊಳ್ಳುತ್ತಾರೆ.

ವಿದ್ಯಾ ಬಾಲನ್

ವಿದ್ಯಾ ಬಾಲಕನ್ ಅವರು ಸೀರೆಗಳ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಅವರು ಸಾರಿಯಲ್ಲೇ ಕಾಣಿಸಿಕೊಳ್ಳುವುದು ಹೆಚ್ಚು. ಅವರ ಬಳಿ ವಿವಿಧ ರೀತಿಯ 800 ಸೀರೆಗಳ ಕಲೆಕ್ಷನ್ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:50 am, Thu, 8 February 24