ಮಗು ಜನಿಸುವುದಕ್ಕೂ ಮೊದಲು 100 ಕೋಟಿ ರೂಪಾಯಿ ಮನೆಗೆ ದೀಪಿಕಾ ಶಿಫ್ಟ್
ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ ಮಗು ಆಗುವ ಮುಂಚೆಯೇ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ 100 ಕೋಟಿ ಮನೆಯ ಹೊಸ ಮನೆಗೆ ಶಿಫ್ಟ್ ಆಗಲಿದ್ದಾರೆ. ಭಾರಿ ದುಬಾರಿ ಮನೆಯಲ್ಲಿ ಹಲವು ಸೌಲಭ್ಯಗಳು ಲಭ್ಯವಿವೆ.
ದೀಪಿಕಾ ಪಡುಕೋಣೆಗೆ ಇನ್ನು ಕೆಲವೇ ವಾರಗಳಲ್ಲಿ ಮಗು ಜನಿಸಲಿದೆ. ಸೆಪ್ಟೆಂಬರ್ನಲ್ಲಿ ಮಗು ಜನಿಸಲಿದೆ ಎಂದು ಅವರು ಈ ಮೊದಲೇ ಘೋಷಣೆ ಮಾಡಿದ್ದಾರೆ. ಇದಕ್ಕೂ ಮೊದಲು ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ಪ್ರಮುಖ ನಿರ್ಧಾರ ಒಂದನ್ನು ಮಾಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಇರುವ ಮನೆಯಿಂದ ಅವರು ಶಾರುಖ್ ಖಾನ್ ಮನೆ ಬಳಿ ಇರುವ 100 ಕೋಟಿ ರೂಪಾಯಿ ಫ್ಲ್ಯಾಟ್ಗೆ ಶಿಫ್ಟ್ ಆಗಲಿದ್ದಾರಂತೆ.
ಮನಿ ಕಂಟ್ರೋಲ್ ಈ ಬಗ್ಗೆ ವರದಿ ಮಾಡಿದೆ. ಬಾಂದ್ರಾ ಸಮೀಪ ರಣವೀರ್ ಸಿಂಗ್ ಹಾಗೂ ದೀಪಿಕಾ ಅವರು ಸಮುದ್ರ ತೀರಕ್ಕೆ ಮುಖ ಮಾಡಿದೆ. ಇಲ್ಲಿ ಇವರು ನಾಲ್ಕು ಫ್ಲ್ಯಾಟ್ಗಳನ್ನು ಖರೀದಿ ಮಾಡಿದ್ದಾರೆ. ಇದರ ಅಳತೆ 11,266 ಚದರ ಅಡಿ ಇದೆ. ಇದರ ಜೊತೆಗೆ ಟೆರೇಸ್ ಕೂಡ ಇದೆ. ಬಾಂದ್ರಾದಲ್ಲಿ ಬಹುತೇಕ ಸೆಲೆಬ್ರಿಟಿಗಳು ವಾಸವಾಗಿದ್ದಾರೆ.
ದೀಪಿಕಾ ಪಡುಕೋಣೆ ಅವರಿಗೆ ಚಿತ್ರರಂಗದಲ್ಲಿ ಬೇಡಿಕೆ ಇದೆ. ಕೊವಿಡ್ ಪೂರ್ಣಗೊಂಡ ಬಳಿಕ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಿದರು. ‘ಪಠಾಣ್’, ‘ಜವಾನ್’, ‘ಫೈಟರ್’ ರೀತಿಯ ಹಿಟ್ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಅವರಿಗೆ ಬೇಡಿಕೆ ಇರುವಾಗಲೇ ತಾಯಿ ಆಗುವ ನಿರ್ಧಾರ ತೆಗೆದುಕೊಂಡರು. ಅವರು ಈ ವರ್ಷದ ಆರಂಭದಲ್ಲಿ ತಾಯಿ ಆಗುವ ಘೋಷಣೆ ಮಾಡಿದರು. ಮುಂದಿನ ತಿಂಗಳು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾರೆ.
ಇದನ್ನೂ ಓದಿ:ದೀಪಿಕಾ ಪಡುಕೋಣೆಗೆ ಗಂಡು ಮಗು ಜನಿಸಿದೆ ಅಂತ ಸುಳ್ಳು ಸುದ್ದಿ ಹಬ್ಬಲು ಕಾರಣವಾಯ್ತು ಈ ಫೋಟೋ
ಪ್ರೆಗ್ನೆಂಟ್ ಆದ ಬಳಿಕ ಎಲ್ಲರೂ ಬೇಬಿಬಂಪ್ ಫೋಟೋಶೂಟ್ ಮಾಡಿಸುತ್ತಾರೆ. ಆದರೆ, ದೀಪಿಕಾ ಪಡುಕೋಣೆ ಇದಕ್ಕೆ ಭಿನ್ನವಾಗಿದ್ದಾರೆ. ಅವರ ಕಡೆಯಿಂದ ಈವರೆಗೆ ಯಾವುದೇ ಈ ರೀತಿಯ ಶೂಟ್ ಆಗಿಲ್ಲ. ಅವರು ಶೀಘ್ರವೇ ಫೋಟೋ ಶೇರ್ ಮಾಡಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ, ದೀಪಿಕಾ ಪಡುಕೋಣೆ ನಟನೆಯ ‘ಫೈಟರ್’ ಹಾಗೂ ‘ಕಲ್ಕಿ 2898 ಎಡಿ’ ಸಿನಿಮಾ ಈ ವರ್ಷ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈಗ ಅವರು ನಟಿಸುತ್ತಿರುವ ‘ಸಿಂಗಂ ಅಗೇನ್’ ಸಿನಿಮಾ ರಿಲೀಸ್ ಆಗಬೇಕಿದೆ. ಈ ಸಿನಿಮಾದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ