ದೀಪಿಕಾ ಪಡುಕೋಣೆಗೆ ಕಾಡುತ್ತಿದೆಯಂತೆ ಭಯ, ಏನದು?

Deepika Padukone: ಕಳೆದ ವರ್ಷ ತಾಯಿಯಾದ ನಟಿ ದೀಪಿಕಾ ಪಡುಕೋಣೆ ಈಗ ಮತ್ತೆ ಚಿತ್ರರಂಗಕ್ಕೆ ಬರಲು ತಯಾರಿ ಆರಂಭಿಸಿದ್ದಾರೆ. ದೇಹ ತೂಕ ಇಳಿಸಿಕೊಳ್ಳಲು ವರ್ಕೌಟ್ ಆರಂಭಿಸಿರುವ ನಟಿ ದೀಪಿಕಾ ಪಡುಕೋಣೆ, ಹಲವು ಗಂಟೆಗಳ ಕಾಲ ಜಿಮ್​ನಲ್ಲಿ ಸಮಯ ಕಳೆಯುತ್ತಿದ್ದಾರೆ. ಇಷ್ಟೆಲ್ಲ ಮಾಡುತ್ತಿದ್ದರೂ ನಟಿಗೆ ಭಯವೊಂದು ಕಾಡುತ್ತಲೇ ಇದೆಯಂತೆ. ಏನು ಆ ಭಯ?

ದೀಪಿಕಾ ಪಡುಕೋಣೆಗೆ ಕಾಡುತ್ತಿದೆಯಂತೆ ಭಯ, ಏನದು?
Deepika Padukone

Updated on: May 08, 2025 | 1:41 PM

ನಟಿ ದೀಪಿಕಾ ಪಡುಕೋಣೆ (Deepika Padukone) ತಾಯಿಯಾಗಿದ್ದಾರೆ. ಹಲವು ವರ್ಷಗಳಿಂದ ಬಾಲಿವುಡ್​ನ ನಂಬರ್ 1 ನಟಿಯ ಪಟ್ಟ ಉಳಿಸಿಕೊಂಡು ಬಂದಿದ್ದ ದೀಪಿಕಾ ಪಡುಕೋಣೆ, ತಾಯ್ತನಕ್ಕಾಗಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆದರೆ ಇದೀಗ ಬಾಲಿವುಡ್​ಗೆ ಮರಳಲು ದೀಪಿಕಾ ಪಡುಕೋಣೆ ಸಜ್ಜಾಗುತ್ತಿದ್ದಾರೆ. ತಾಯಿಯಾದ ಬಳಿಕ ಸಹಜವಾಗಿಯೇ ನಟಿಯ ದೇಹದ ತೂಕ ಹೆಚ್ಚಾಗಿತ್ತು. ಇದೀಗ ದೇಹತೂಕ ಇಳಿಸಿಕೊಂಡು, ಮೊದಲಿನಂತೆ ಸಪೂರದೇಹಿಯಾಗುವ ಪ್ರಯತ್ನದಲ್ಲಿದ್ದಾರೆ. ಇದೆಲ್ಲದರ ನಡುವೆ ದೀಪಿಕಾ ಪಡುಕೋಣೆಗೆ ಭಯವೊಂದು ಕಾಡುತ್ತಿದೆಯಂತೆ.

ಮ್ಯಾರಿ ಕ್ಲೇಯ್ರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ದೀಪಿಕಾ ಪಡುಕೋಣೆ ಈ ಬಗ್ಗೆ ಮಾತನಾಡಿದ್ದು, ತಾವು, ದೇಹದ ತೂಕ ಇಳಿಸಿಕೊಂಡು ಮೊದಲಿನಂತಾಗಲು ಮಾಡುತ್ತಿರುವ ಪ್ರಯತ್ನಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮೊದಲಿಗೆ ಸ್ವಿಮ್ಮಿಂಗ್ ಹಾಗೂ ವಾಕಿಂಗ್​ನಿಂದ ಆರಂಭ ಮಾಡಿದ ದೀಪಿಕಾ ಪಡುಕೋಣೆ ನಿಧಾನಕ್ಕೆ ಜಿಮ್​ ವ್ಯಾಯಾಮಗಳ ಕಡೆಗೆ ಬಂದಿದ್ದಾರಂತೆ. ಇದರಿಂದ ದೇಹದ ತೂಕ ಸರಿಯಾದ ರೀತಿಯಲ್ಲಿ ಕಡಿಮೆ ಆಗಲಿದೆ ಎಂಬುದು ನಟಿಯ ವಿಶ್ವಾಸ.

ಜಿಮ್ ವ್ಯಾಮಾಯದ ಜೊತೆಗೆ ಯೋಗಾಸನವನ್ನು ತಪ್ಪದೆ ಮಾಡುತ್ತಿದ್ದಾರಂತೆ ನಟಿ. ದೇಹ ತೂಕ ಇಳಿಸುವ ಯತ್ನದಲ್ಲಿ ಆರೋಗ್ಯವನ್ನು ಕೆಡಿಸಿಕೊಳ್ಳಬಾರದು, ನನ್ನ ಆರೋಗ್ಯ ಮಗುವಿನ ಬೆಳವಣಿಗೆ ಮೇಲೆ ಪರೋಕ್ಷ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದಿರುವ ದೀಪಿಕಾ ಎಚ್ಚರಿಕೆಯಿಂದ ಡಯಟ್ ಹಾಗೂ ವ್ಯಾಯಾಮ ಮಾಡುತ್ತಿದ್ದಾರಂತೆ.

ಇದನ್ನೂ ಓದಿ:‘ಸ್ಪಿರಿಟ್’ ಚಿತ್ರಕ್ಕೆ ಪ್ರಭಾಸ್​ಗೆ ಜೊತೆಯಾಗಲಿದ್ದಾರೆ ದೀಪಿಕಾ ಪಡುಕೋಣೆ?

ಏನೇ ಮಾಡಿದರೂ ದೀಪಿಕಾ ಪಡುಕೋಣೆಗೆ ದೊಡ್ಡ ಭಯವೊಂದು ಕಾಡುತ್ತಲೇ ಇದೆಯಂತೆ. ಏನೇ ವ್ಯಾಯಾಮ ಮಾಡಿದರೂ ಸಹ ನಾನು ಮೊದಲಿನಂತೆ ಆಗಲು ಸಾಧ್ಯವಾ ಎಂಬ ಅನುಮಾನ ದೀಪಿಕಾಗೆ ಇದೆಯಂತೆ. ಆದರೆ ಪ್ರಯತ್ನ ಬಿಟ್ಟಿಲ್ಲ. ಇದರ ಜೊತೆಗೆ ಈ ಮೊದಲು ಚಿತ್ರರಂಗ ನನ್ನನ್ನು ಸ್ವೀಕರಿಸಿದ್ದ ರೀತಿಯಲ್ಲಿಯೇ ಮತ್ತೆ ಸ್ವೀಕರಿಸುತ್ತದೆಯಾ? ತಾಯಿಯಾದ ಬಳಿಕವೂ ಮೊದಲಿನಂತೆ ನನ್ನನ್ನು ನೋಡಲಿದೆಯಾ? ಎಂಬ ಅನುಮಾನವೂ ಇದೆ, ಮೊದಲಿನಂತೆ ಅವಕಾಶ ಸಿಗದೇ ಹೋಗಬಹುದೇನೋ ಎಂಬ ಭಯವೂ ಸಹ ದೀಪಿಕಾ ಪಡುಕೋಣೆಗೆ ಇದೆಯಂತೆ.

ಮಗು ಆದ ಬಳಿಕ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ ಎಂದಿರುವ ದೀಪಿಕಾ ಪಡುಕೋಣೆ, ತನ್ನ ದಿನನಿತ್ಯದ ಹಲವು ಕಾರ್ಯಗಳನ್ನು ಮಗುವಿಗಾಗಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ. ಇನ್ನು ಮುಂದೆಯೂ ಸಹ ಪ್ರತಿ ಹೆಜ್ಜೆಯಲ್ಲಿಯೂ ಸಹ ಬದಲಾವಣೆ ಮಾಡಿಕೊಳ್ಳಲೇ ಬೇಕಾಗಿದೆ ಅದಕ್ಕೆಲ್ಲ ನಾನು ಒಗ್ಗಿಕೊಳ್ಳುತ್ತಿದ್ದೇನೆ. ಅವೆಲ್ಲವನ್ನೂ ಇಷ್ಟದಿಂದಲೇ ಮಾಡುತ್ತಿದ್ದೇನೆ ಎಂದಿದ್ದಾರೆ ನಟಿ. ಅಂದಹಾಗೆ ದೀಪಿಕಾ ಪಡುಕೋಣೆ ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಹಾಗೂ ಪ್ರಭಾಸ್ ಜೊತೆಗೆ ‘ಸ್ಪಿರಿಟ್’ ಹಾಗೂ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:40 pm, Thu, 8 May 25