‘ಸ್ಪಿರಿಟ್’ ಚಿತ್ರಕ್ಕೆ ಪ್ರಭಾಸ್ಗೆ ಜೊತೆಯಾಗಲಿದ್ದಾರೆ ದೀಪಿಕಾ ಪಡುಕೋಣೆ?
ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗ್ ನಿರ್ದೇಶನದ 'ಸ್ಪಿರಿಟ್' ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 'ಕಲ್ಕಿ 2898 ಎಡಿ' ಚಿತ್ರದ ನಂತರ ಇವರಿಬ್ಬರು ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ದೀಪಿಕಾ ಅವರು ಈಗಾಗಲೇ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದರೂ, 'ಸ್ಪಿರಿಟ್' ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.

ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಮತ್ತು ನಟ ಪ್ರಭಾಸ್ (Prabhas) ‘ಸ್ಪಿರಿಟ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಶೂಟ್ ಶೀಘ್ರವೇ ಶುರುವಾಗಲಿದೆ ಎನ್ನಲಾಗಿದೆ. ಹೀಗಿರುವಾಗಲೇ ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಿದ್ದ ದೀಪಿಕಾ ಪಡುಕೋಣೆ ಅವರು ‘ಸ್ಪಿರಿಟ್’ ಚಿತ್ರಕ್ಕೆ ನಾಯಕಿ ಆಗಲಿದ್ದಾರೆ ಎಂದು ವರದಿ ಆಗಿದೆ.
‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಆಯಿತು. ಪ್ರಭಾಸ್ ಹಾಗೂ ದೀಪಿಕಾ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟ ಆಯಿತು. ಈಗ ಈ ಜೋಡಿಯನ್ನು ಮತ್ತೆ ಜನರ ಎದುರು ತರಲು ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಅವರ ಜೊತೆ ಸದ್ಯ ಮಾತುಕತೆ ನಡೆದಿದೆ ಎನ್ನಲಾಗಿದೆ.
ಈ ಮೊದಲೇ ದೀಪಿಕಾ ಪಡುಕೋಣೆ ಜೊತೆ ನಿರ್ದೇಶಕರು ಮಾತುಕತೆ ನಡೆಸಿದ್ದರು. ಆದರೆ, ದೀಪಿಕಾ ಪಡುಕೋಣೆ ಅವರು ಪ್ರೆಗ್ನೆಂಟ್ ಆಗಿದ್ದರು. ಈ ಕಾರಣಕ್ಕೆ ತಾವು ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಹೇಳಿದ್ದರು. ಆದರೆ, ಕಾರಣಾಂತರಗಳಿಂದ ‘ಸ್ಪಿರಿಟ್’ ಸಿನಿಮಾದ ಶೂಟ್ ವಿಳಂಬ ಆಯಿತು. ಈ ಕಾರಣಕ್ಕೆ ದೀಪಿಕಾ ಅವರನ್ನು ಮತ್ತೆ ಭೇಟಿ ಮಾಡಿದ್ದಾರೆ. ದೀಪಿಕಾ ಖುಷಿಯಿಂದ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಮಧ್ಯೆ ಹೆಚ್ಚಿನ ದೃಶ್ಯಗಳು ಇಲ್ಲ. ಹೀಗಾಗಿ, ಅಭಿಮಾನಿಗಳು ಹೆಚ್ಚಿನದ್ದನ್ನು ನಿರೀಕ್ಷಿಸಿದ್ದರು. ಈಗ ಈ ಸಿನಿಮಾ ಮೂಲಕ ಅದನ್ನು ಮಾಡೋ ಆಲೋಚನೆ ನಿರ್ದೇಶಕರಿಗೆ ಇದೆ. ಈ ವಿಚಾರ ಕೇಳಿ ಫ್ಯಾನ್ಸ್ ಭರ್ಜರಿ ಖುಷಿಪಟ್ಟಿದ್ದಾರೆ.
ಇದನ್ನೂ ಓದಿ: ಭರ್ಜರಿ ಕಮ್ಬ್ಯಾಕ್ಗೆ ಸಿದ್ದವಾದ ದೀಪಿಕಾ ಪಡುಕೋಣೆ, ಸಿನಿಮಾ ಯಾವುದು?
ಸದ್ಯ ದೀಪಿಕಾಗೆ ಸಾಲು ಸಾಲು ಚಿತ್ರಗಳು ಇವೆ. ಅವರು ‘ಕಲ್ಕಿ 2’ ಸಿನಿಮಾದಲ್ಲಿ ನಟಿಸಬೇಕಿದೆ. ಇದಲ್ಲದೆ, ಶಾರುಖ್ ಖಾನ್ ನಟನೆಯ ‘ಕಿಂಗ್’ ಚಿತ್ರಕ್ಕೂ ದೀಪಿಕಾ ಎಂಟ್ರಿಕೊಟ್ಟಿದ್ದಾರೆ. ಇದರ ಜೊತೆಗೆ ‘ಸ್ಪಿರಿಟ್’ ಸಿನಿಮಾ ಕೂಡ ಅವರ ಕೈ ಸೇರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.