ತ್ರಿಷಾ ಮಾಡಿಕೊಂಡ ವಿವಾದಗಳು ಒಂದೆರಡಲ್ಲ.. ಇಲ್ಲಿದೆ ವಿವರ
ತ್ರಿಷಾ ಅವರ ಜನ್ಮದಿನದಂದು, ಅವರ ವೃತ್ತಿಪರತೆ ಮತ್ತು ವಿವಾದಗಳನ್ನು ಚರ್ಚಿಸೋಣ. ಜಲ್ಲಿಕಟ್ಟು ಪ್ರತಿಭಟನೆ, ಅವರ ವಿವಾಹದ ವಿವಾದ, ಮತ್ತು ನಟ ಮನ್ಸೂರ್ ಅಲಿ ಖಾನ್ ಅವರ ವಿವಾದಾತ್ಮಕ ಹೇಳಿಕೆಗಳು ಸೇರಿದಂತೆ ವಿವಿಧ ವಿವಾದಗಳನ್ನು ಈ ಲೇಖನ ಒಳಗೊಂಡಿದೆ. ಅವರ ಪ್ರಬುದ್ಧತೆ ಮತ್ತು ವೃತ್ತಿಪರತೆಯನ್ನು ಅವರ ವಿವಾದಗಳ ಹಿನ್ನೆಲೆಯಲ್ಲಿ ಚರ್ಚಿಸಲಾಗುವುದು.

ನಟಿ ತ್ರಿಷಾ (Trisha) ಅವರಿಗೆ ಇಂದು (ಮೇ 4) ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯಗಳು ಬರುತ್ತಿವೆ. ಅವರು ಪ್ರಾಫೆಷನಲ್ ಆಗಿ ನಡೆದುಕೊಳ್ಳಲು ಇಷ್ಟಪಡುತ್ತಾರೆ. ಆದಾಗ್ಯೂ ಕೆಲವು ವಿವಾದಗಳು ಅವರಿಗೆ ಅಂಟಿಕೊಂಡವು ಎಂದೇ ಹೇಳಬಹುದು. ಹಾಗಾದರೆ ಅವರು ಮಾಡಿಕೊಂಡ ವಿವಾದಗಳು ಏನು? ಆ ಬಗ್ಗೆ ಇಂದು ನೋಡೋಣ. ಕೆಲವು ವಿವಾದಗಳು ತ್ರಿಷಾ ಅವರೇ ಮಾಡಿಕೊಂಡರೆ, ಕೆಲವು ವಿವಾದಗಳು ಬೇರೆಯವರಿಂದ ಆಗಿದ್ದು, ಇದಕ್ಕೆ ಅವರು ಬಲಿಯಾಗಬೇಕಾಯಿತು.
ಪ್ರಾಣಿಗಳ ಹಕ್ಕನ್ನು ಉಳಿಸೋ ಪೆಟಾಗೆ ತ್ರಿಷಾ ಅವರು ಬೆಂಬಲ ನೀಡುತ್ತಾರೆ. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸಂಬಂಧಿ ಪ್ರತಿಭಟನೆ ನಡೆಯುವಾಗ ಅವರು ನಡೆದುಕೊಂಡಿದ್ದು ವಿವಾದಕ್ಕೆ ಕಾರಣ ಆಗಿತ್ತು. ಹೌದು, ಜಲ್ಲಿಕಟ್ಟು ಪ್ರತಿಭಟನೆ ನಡೆಯುವಾಗಲೂ ತ್ರಿಷಾ ಅವರು ಪೆಟಾನ ಬೆಂಬಲಿಸಿದ್ದರು. ತಮಿಳುನಾಡಿನಲ್ಲಿ ಜಲ್ಲಿಕಟ್ಟು ಬಳಕೆ ತುಂಬಾನೇ ಇದೆ. ತಮಿಳು ನಟಿ ಆಗಿ ತ್ರಿಷಾ ಅವರು ಈ ರೀತಿ ಮಾಡಬಾರದಿತ್ತು ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು.
ವರುಣ್ ಅವರನ್ನು 2015ರಲ್ಲಿ ತ್ರಿಷಾ ಅವರು ವಿವಾಹ ಆದರು. ಆದರೆ, ಕೆಲವೇ ತಿಂಗಳಲ್ಲಿ ಇದು ಕೊನೆ ಆಗಿ ಹೋಯಿತು. ಇದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಇವರು ಬೇರೆ ಆಗುವದಕ್ಕೆ ಅನೇಕ ಕಾರಣಗಳನ್ನು ನೀಡಲಾಯಿತು. ಆದರೆ, ತ್ರಿಷಾ ಅವರು ಈ ವಿಚಾರದಲ್ಲಿ ಯಾವುದನ್ನೂ ಮಾತನಾಡಲೇ ಇಲ್ಲ.
ತ್ರಿಷಾ ಅವರು ಈ ಸಂದರ್ಭದಲ್ಲಿ ನಡೆದುಕೊಂಡ ರೀತಿ ಅನೇಕರಿಂದ ಮೆಚ್ಚುಗೆ ಪಡೆಯಿತು. ಏಕೆಂದರೆ ತ್ರಿಷಾ ಅವರು ಆ ಸಂದರ್ಭದಲ್ಲಿ ತುಂಬಾನೇ ಪ್ರಬುದ್ಧರಾಗಿ ನಡೆದುಕೊಂಡರು. ಈ ಕಾರಣದಿಂದಲೇ ಅವರು ತಮ್ಮ ಕೆಲಸದ ಮೇಲೆ ಕೇಂದ್ರೀಕರಿಸಿದರು, ಮತ್ತು ವಿವಾದದ ಬಗ್ಗೆ ಹೆಚ್ಚು ಕಿವಿಗೊಡಲೇ ಇಲ್ಲ.
ಇದನ್ನೂ ಓದಿ: ತ್ರಿಷಾ-ವಿಜಯ್ ಫೋಟೊ ಲೀಕ್: ಅಣ್ಣಾಮಲೈ ಸ್ಪೋಟಕ ಹೇಳಿಕೆ
ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟ ಮನ್ಸೂರ್ ಅಲಿ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಲಿಯೋ ಸಿನಿಮಾದಲ್ಲಿ ಮನ್ಸೂರ್ ಹಾಗೂ ತ್ರಿಷಾ ಇಬ್ಬರೂ ನಟಿಸಿದ್ದರು. ಆದರೆ, ಇವರ ಮಧ್ಯೆ ಯಾವುದೇ ಕಾಂಬಿನೇಷನ್ ಇರಲಿಲ್ಲ. ‘ತ್ರಿಷಾ ಜೊತೆ ನಟಿಸೋ ಅವಕಾಶ ಸಿಕ್ಕಾಗ ಖುಷಿ ಆಯಿತು. ನನ್ನ ಹಾಗೂ ತ್ರಿಷಾ ನಡುವೆ ಒಳ್ಳೆಯ ಬೆಡ್ರೂಂ ಸೀನ್ಗಳಿರುತ್ತವೆ ಎಂದು ನಿರೀಕ್ಷಿಸಿದ್ದೆ. ಆದರೆ ಅದೆಲ್ಲ ಸುಳ್ಳಾಯಿತು. ತ್ರಿಷಾಳನ್ನು ಬೆಡ್ರೂಂಗೆ ಎತ್ತಿಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಅಂದುಕೊಂಡಿದ್ದೆ. ನಾನು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಗ ಅಂಥಹಾ ಹಲವು ಸೀನ್ಗಳಲ್ಲಿ ನಟಿಸಿದ್ದೇನೆ. ಸಿನಿಮಾದಲ್ಲಿ ಹಲವು ನಟಿಯರನ್ನು ರೇಪ್ ಮಾಡಿದ್ದೀನಿ.ಆದರೆ, ನನಗೆ ತ್ರಿಷಾರ ಮುಖವನ್ನೂ ತೋರಿಸಿಲ್ಲ’ ಎಂದು ವಿವಾದ ಹುಟ್ಟುಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







