ದೀಪಿಕಾ ಪಡುಕೋಣೆ ಮುಂದಿನ ಚಿತ್ರಗಳ ನಿರ್ಮಾಪಕರಿಗೆ ಶುರುವಾಗಿದೆ ಭಯ

Deepika Padukone: ಇತ್ತೀಚೆಗೆ ದೀಪಿಕಾ ಪಡುಕೋಣೆ ಅವರು 'ಸ್ಪಿರಿಟ್' ಚಿತ್ರದಿಂದ ಹೊರಬಂದಿದ್ದು, ಅವರ ಮೇಲೆ ಕಥಾಸೋರಿಕೆ ಮತ್ತು ಅತಿಯಾದ ಬೇಡಿಕೆಗಳ ಆರೋಪ ಕೇಳಿಬಂದಿದೆ. ಇದರಿಂದಾಗಿ ನಿರ್ಮಾಪಕರಲ್ಲಿ ಆತಂಕ ಮೂಡಿದೆ. ಅವರ ವೃತ್ತಿಪರತೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಅವರ 20 ಕೋಟಿ ರೂಪಾಯಿ ಸಂಭಾವನೆ ಮತ್ತು ಲಾಭದಲ್ಲಿ ಪಾಲು ಕೇಳಿದ್ದಾರೆ ಎಂಬ ವದಂತಿಗಳೂ ಇವೆ.

ದೀಪಿಕಾ ಪಡುಕೋಣೆ ಮುಂದಿನ ಚಿತ್ರಗಳ ನಿರ್ಮಾಪಕರಿಗೆ ಶುರುವಾಗಿದೆ ಭಯ
Deepika Padukone
Updated By: ಮಂಜುನಾಥ ಸಿ.

Updated on: May 29, 2025 | 4:03 PM

ಇತ್ತೀಚೆಗೆ ದೀಪಿಕಾ ಪಡುಕೋಣೆ (Deepika Padukone) ಅವರು ಸಾಕಷ್ಟು ಸುದ್ದಿಯಲ್ಲಿರೋದು ಗೊತ್ತೇ ಇದೆ. ಅವರು ‘ಸ್ಪಿರಿಟ್’ ಚಿತ್ರದಿಂದ ಹೊರ ಬಂದರು ಮತ್ತು ಕಥೆಯನ್ನು ಸೋರಿಕೆ ಮಾಡಿದರು ಎನ್ನುವ ಆರೋಪ ಅವರ ಮೇಲೆ ಇದೆ. ಅಲ್ಲದೆ ಅವರು ಸುಮಾರು ಬೇಡಿಕೆ ಇಟ್ಟರು ಎಂದು ಕೂಡ ಹೇಳಲಾಗುತ್ತಿದೆ. ಅವರು ವೃತ್ತಿಪರತೆ ಇಲ್ಲದೆ ನಡೆದುಕೊಂಡಿದ್ದು, ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರ್ಮಾಪಕರಿಗೆ ಆತಂಕ ಶುರುವಾಗಿದೆಯಂತೆ.

ಸಂದೀಪ್ ರೆಡ್ಡಿ ವಂಗ ಅವರು ‘ಸ್ಪಿರಿಟ್’ ಚಿತ್ರವನ್ನು ನಿರ್ದೇಶನ ಮಾಡಬೇಕಿದೆ. ಈ ಚಿತ್ರದ ಕಲಾವಿದರ ಆಯ್ಕೆಯಲ್ಲಿ ಅವರು ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಮೊದಲು       ದೀಪಿಕಾಗೆ ಅವರು ಅವಕಾಶ ಕೊಟ್ಟರು. ಆ ಬಳಿಕ ಅವರು ಕಥೆಯನ್ನು ಒಪ್ಪಿದರು ಆ ಬಳಿಕ ಬೇಡ ಎಂದರು. ಇದಕ್ಕೆ ಅವರು ಇಟ್ಟ ಬೇಡಿಕೆ ಕಾರಣ ಎಂದು ಹೇಳಲಾಗುತ್ತಿದೆ. ಹೀಗಿರುವಾಗಲೇ ಅವರ ಮುಂದಿನ ಚಿತ್ರದ ಬಗ್ಗೆ ನಿರ್ಮಾಪಕರಿಗೆ ಚಿಂತೆ ಶುರುವಾಗಿದೆ.

ಪಡುಕೋಣೆ ಅವರು ವೃತ್ತಿಪರವಾಗಿಲ್ಲ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಅವರು ತಮ್ಮ ಮೌಲ್ಯಕ್ಕೆ ತಕ್ಕಂತೆ ಡಿಮ್ಯಾಂಡ್ ಮಾಡುವುದರಲ್ಲಿ ತಪ್ಪೇನಿದೆ ಎಂದು ಕೇಳಿದ್ದಾರೆ. ಹೀರೋಗೆ 20 ಕೋಟಿ ಕೊಡಲು ನಿರ್ಮಾಪಕರು ರೆಡಿ ಇರುತ್ತಾರೆ. ಆದರೆ, ನಾಯಕಿಯರಿಗೆ ಅಷ್ಟು ಕೊಡಲು ಏಕೆ ಸಿದ್ಧರಿಲ್ಲ ಎಂದು ಕೆಲವರು ಕೇಳಿದ್ದಾರೆ.

ಇದನ್ನೂ ಓದಿ:ಡಿಮ್ಯಾಂಡ್ ಮಾಡೋಕೆ ಶುರು ಮಾಡಿದ ದೀಪಿಕಾ ಪಡುಕೋಣೆ; ಕೈ ತಪ್ಪಿತು ಬಿಗ್ ಆಫರ್

ಸದ್ಯ ದೀಪಿಕಾ ಪಡುಕೋಣೆ ಅವರು ‘ಕಲ್ಕಿ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ಹೀರೋ. ಆ ನಿರ್ಮಾಪಕರ ಎದುರು ದೀಪಿಕಾ ಇದೇ ರೀತಿಯ ಬೇಡಿಕೆ ಇಡುತ್ತಾರೆಯೇ ಎನ್ನುವ ಪ್ರಶ್ನೆ ಮೂಡಿದೆ. ಅಲ್ಲು ಅರ್ಜುನ್ ಹಾಗೂ ಅಟ್ಲಿ ಅವರ ಸಿನಿಮಾಗೂ ದೀಪಿಕಾ ನಾಯಕಿ. ಆ ನಿರ್ಮಾಪಕರ ಎದುರು ದೀಪಿಕಾ ಇದೇ ಬೇಡಿಕೆ ಇಟ್ಟಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ದೀಪಿಕಾ ಪಡುಕೋಣೆ ಅವರು 20 ಕೋಟಿ ರೂಪಾಯಿ ಸಂಭಾವನೆ ಮತ್ತು ಬಂಧ ಲಾಭದಲ್ಲಿ ಪಾಲು ಕೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ದೀಪಿಕಾ ಪಡುಕೋಣೆ ಅವರು ಸ್ಪಷ್ಟನೆ ನೀಡಿಲ್ಲ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ