ವಿವಾದಕ್ಕೆ ಗುರಿಯಾಗಿರೋ ಪರೇಶ್ ರಾವಲ್ ಒಟ್ಟೂ ಆಸ್ತಿ ಎಷ್ಟು?
ಪ್ರಸಿದ್ಧ ಕನ್ನಡ ನಟ ಪರೇಶ್ ರಾವಲ್ ಅವರ ಆಸ್ತಿ ಎಷ್ಟು ಎನ್ನುವ ವಿಚಾರ ಚರ್ಚೆ ಆಗುತ್ತಿದೆ. ‘ಹೇರಾ ಫೇರಿ 3’ ಚಿತ್ರದಿಂದ ಹೊರನಡೆದಿರುವ ವಿವಾದದ ನಡುವೆಯೂ ಅವರು ಭಾರತದ ಅತ್ಯಂತ ಶ್ರೀಮಂತ ಹಾಸ್ಯ ನಟರಲ್ಲಿ ಒಬ್ಬರು. ಚಿತ್ರದ ನಿರ್ಮಾಪಕರಿಂದ ಅವರಿಗೆ ನೋಟೀಸ್ ಬಂದಿದೆ. ಅವರ ವೃತ್ತಿಜೀವನ ಮತ್ತು ಚಿತ್ರರಂಗದಲ್ಲಿನ ಕೊಡುಗೆಯನ್ನು ಈ ಲೇಖನ ವಿವರಿಸುತ್ತದೆ.

ನಟ ಪರೇಶ್ ರಾವಲ್ (Paresh Rawal) ಅವರು ವಿವಾದಕ್ಕೆ ಒಳಗಾಗಿರೋದು ಗೊತ್ತೇ ಇದೆ. ‘ಹೇರಾ ಫೇರಿ 3’ ಚಿತ್ರದಿಂದ ಅವರು ಹೊರ ನಡೆದಿದ್ದಾರೆ ಮತ್ತು ಈ ಬಗ್ಗೆ ತಂಡಕ್ಕೆ ಮಾಹಿತಿ ನೀಡಿರಲಿಲ್ಲ. ಈ ವಿಚಾರದಲ್ಲಿ ಅವರು ಸಂಕಷ್ಟ ಅನುಭವಿಸಿದ್ದಾರೆ. ಏಕೆಂದರೆ ನಿರ್ಮಾಪಕರ ಕಡೆಯಿಂದ ಈಗಾಗಲೇ ಅವರಿಗೆ ನೋಟಿಸ್ ಬಂದಿದೆ. ಪರೇಶ್ ರಾವಲ್ ಅವರಿಗೆ ಇಂದು (ಮೇ 29) ಜನ್ಮದಿನ. ಅವರ ಆಸ್ತಿ ಬಗ್ಗೆ ಇಂದು ತಿಳಿದುಕೊಳ್ಳೋಣ. ಏಕೆಂದರೆ ಭಾರತದ ಶ್ರೀಮಂತ ಹಾಸ್ಯ ಕಲಾವಿದರಲ್ಲಿ ಇವರೂ ಒಬ್ಬರು.
ಪರೇಶ್ ರಾವಲ್ ಅವರು 1955ರ ಮೇ 30ರಂದು ಜನಿಸಿದರು. ಅವರು ಅವರು ಹುಟ್ಟಿದ್ದು ಅಂದಿನ ಬಾಂಬೇ (ಈಗಿನ ಮುಂಬೈ) ಅಲ್ಲಿ. ಅವರು ಗುಜರಾತಿ ಕುಟುಂಬಕ್ಕೆ ಸೇರಿದವರು. 1982ರಲ್ಲಿ ‘ನಸೀಬ್ ನಹಿ ಬಲ್ಹಾರಿ’ ಹೆಸರಿನ ಗುಜರಾತಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರಿಗೆ ಹಿಂದಿ ಚಿತ್ರರಂಗದಿಂದ ಆಫರ್ ಬಂತು. ನಂತರ ಅವರು ಹಲವು ಚಿತ್ರಗಳಲ್ಲಿ ವಿವಿಧ ಪಾತ್ರಗಳನ್ನು ಮಾಡಿ ಗಮನ ಸೆಳೆದರು.
2000ನೇ ಇಸ್ವಿಯಲ್ಲಿ ಬಂದ ‘ಹೇರಾ ಫೇರಿ’ ಚಿತ್ರದಲ್ಲಿ ಅವರು ಮಾಡಿದ ಬಾಬು ಭಯ್ಯಾ ಪಾತ್ರವು ಗಮನ ಸೆಳೆಯಿತು. ಆ ಬಳಿಕ ಹಲವು ಕಾಮಿಡಿ ಚಿತ್ರಗಳಲ್ಲಿ ಪರೇಶ್ ಅವರು ನಟಿಸಿ ಭೇಷ್ ಎನಿಸಿಕೊಂಡರು. ಸದ್ಯ ಅವರ ಕೈಯಲ್ಲಿ 6-7 ಸಿನಿಮಾಗಳು ಇವೆ.
ಪರೇಶ್ ಅವರು 200 ಕೋಟಿ ರೂಪಾಯಿ ಒಡೆಯ. ಅಂದರೆ ಅವರು ಭಾರತದ ಶ್ರೀಮಂತ ಕಾಮಿಡಿಯನ್ಗಳಲ್ಲಿ ಅವರೂ ಒಬ್ಬರು. ಅಕ್ಷಯ್ ಕುಮಾರ್ ಜೊತೆ ಅವರು ‘ವೆಲ್ಕಮ್ ಟು ದಿ ಜಂಗಲ್’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಪರೇಶ್ ಅವರು 1987ರಲ್ಲಿ ಸ್ವರೂಪ್ ಸಂಪತ್ ಅವರನ್ನು ವಿವಾಹ ಆದರು. ಸ್ವರೂಪ್ ಅವರು ವೃತ್ತಿಯಲ್ಲಿ ನಟಿ ಹಾಗೂ ನಿರ್ಮಾಪಕಿ ಆಗಿದ್ದಾರೆ.
ಇದನ್ನೂ ಓದಿ: ‘ಅವರನ್ನು ಮೂರ್ಖ ಎನ್ನಬೇಡಿ, ಒಳ್ಳೆಯ ಸ್ನೇಹಿತ’; ಪರೇಶ್ ಪರ ಅಕ್ಷಯ್ ಕುಮಾರ್ ಬ್ಯಾಟಿಂಗ್
ಪರೇಶ್ ಅವರು ಪ್ರತಿ ಚಿತ್ರಕ್ಕೆ 1 ಕೋಟಿ ರೂಪಾಯಿ ಪಡೆಯುತ್ತಾರೆ. ‘ಹೇರಾ ಫೇರಿ 3’ ಚಿತ್ರಕ್ಕಾಗಿ ಅವರು 11 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ಪಡೆದಿದ್ದರು. ಅದನ್ನು ಅವರು ಹಿಂದಿರುಗಿಸಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







