‘ಧೂಮ್ ಧಾಮ್’ ತೆರೆ ಹಿಂದಿನ ವಿಷಯಗಳ ಬಗ್ಗೆ ಪ್ರತೀಕ್ ಗಾಂಧಿ, ರಿಷಬ್ ಮಾತು

|

Updated on: Feb 22, 2025 | 3:19 PM

ಪ್ರತೀಕ್ ಗಾಂಧಿ ನಟನೆಯ ‘ಧೂಮ್ ಧಾಮ್’ ಸಿನಿಮಾ ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಿದೆ. ಒಂದು ಡಿಫರೆಂಟ್ ಕಹಾನಿ ಈ ಸಿನಿಮಾದಲ್ಲಿ ಇದೆ. ಈ ಸಿನಿಮಾಗೆ ಸಂಬಂಧಿಸಿದಂತೆ ಪ್ರತೀಕ್ ಗಾಂಧಿ ಹಾಗೂ ನಿರ್ದೇಶಕ ರಿಷಬ್ ಸೇಠ್ ಅವರು ಸಂದರ್ಶನ ನೀಡಿದ್ದಾರೆ. ತೆರೆ ಹಿಂದಿನ ಒಂದಷ್ಟು ವಿಷಯಗಳ ಬಗ್ಗೆ ಅವರು ಮಾತನಾಡಿದ್ದಾರೆ.

‘ಧೂಮ್ ಧಾಮ್’ ತೆರೆ ಹಿಂದಿನ ವಿಷಯಗಳ ಬಗ್ಗೆ ಪ್ರತೀಕ್ ಗಾಂಧಿ, ರಿಷಬ್ ಮಾತು
Yami Gautam, Pratik Gandhi, Rishab Seth
Follow us on

ಬಾಲಿವುಡ್​ನ ಭರವಸೆಯ ನಟ ಪ್ರತೀಕ್ ಗಾಂಧಿ ಅವರು ‘ಧೂಮ್ ಧಾಮ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ಯಾಮಿ ಗೌತಮ್ ಅವರು ಅಭಿನಯಿಸಿದ್ದಾರೆ. ‘ಸ್ಕ್ಯಾಮ್​ 1992’ ವೆಬ್ ಸಿರೀಸ್ ಮೂಲಕ ಭಾರಿ ಖ್ಯಾತಿ ಪಡೆದ ಪ್ರತೀಕ್ ಗಾಂಧಿ ಅವರು ಪ್ರತಿ ಪ್ರಾಜೆಕ್ಟ್​ನಲ್ಲೂ ಬೇರೆ ಬೇರೆ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಫೆ.14ರಂದು ನೆಟ್​ಫ್ಲಿಕ್ಸ್​ ಮೂಲಕ ‘ಧೂಮ್ ಧಾಮ್’ ಸಿನಿಮಾ ಬಿಡುಗಡೆ ಆಯಿತು. ಭಾರತಿ ದುಬೆ ನಡೆಸಿದ ಸಂದರ್ಶನದಲ್ಲಿ ಪ್ರತೀಕ್ ಗಾಂಧಿ ಹಾಗೂ ನಿರ್ದೇಶಕ ರಿಷಬ್ ಸೇಠ್ ಅವರು ಮಾತನಾಡಿದ್ದಾರೆ.

ಪ್ರತೀಕ್ ಗಾಂಧಿ ಅವರು ‘ಧೂಮ್ ಧಾಮ್’ ಸಿನಿಮಾದಲ್ಲಿ ಮಾಡಿದ ಪಾತ್ರ ಡಿಫರೆಂಟ್ ಆಗಿದೆ. ತಾವು ಈ ಪಾತ್ರ ಒಪ್ಪಿಕೊಂಡಿದ್ದು ಯಾಕೆ ಎಂಬುದನ್ನು ಅವರು ವಿವರಿಸಿದ್ದಾರೆ. ‘ಇಲ್ಲಿಯವರೆಗೆ ಜನರು ನನ್ನನ್ನು ಇಂಥ ಪಾತ್ರದಲ್ಲಿ ನೋಡಿಲ್ಲ. ಪ್ರೇಕ್ಷಕರಿಗೆ ನಾನು ಸರ್ಪ್ರೈಸ್ ನೀಡಬೇಕಿತ್ತು. ನನಗೂ ಒಂದು ಚಾಲೆಂಜ್ ಬೇಕಿತ್ತು. ಇದು ಫನ್ ಪಾತ್ರ. ಆ ಪಾತ್ರಕ್ಕೆ ಬೇರೆ ಬೇರೆ ಆಯಾಮ ಇದೆ’ ಎಂದು ಪ್ರತೀಕ್ ಗಾಂಧಿ ಅವರು ಹೇಳಿದ್ದಾರೆ.

ವೀರ್ ಎಂಬ ಪಾತ್ರವನ್ನು ಪ್ರತೀಕ್ ಗಾಂಧಿ ಅವರು ‘ಧೂಮ್ ಧಾಮ್’ ಸಿನಿಮಾದಲ್ಲಿ ಮಾಡಿದ್ದಾರೆ. ‘ನಿಜ ಜೀವನದಲ್ಲಿ ಕೂಡ ನಾನು ಅಂಥ ಪಾತ್ರಗಳನ್ನು ನೋಡಿದ್ದೇನೆ. ಹೀರೋ ಎಂದರೆ ಸಿನಿಮಾದಲ್ಲಿ ಇರುವಂತೆ ರಿಯಲ್ ಲೈಫ್​ನಲ್ಲಿ ಇರುವುದಿಲ್ಲ. ಅಂಥ ಹೀರೋಗಳನ್ನು ನಾನು ರಿಯಲ್​ ಲೈಫ್​ನಲ್ಲಿ ನೋಡಿಲ್ಲ. ಸರಿಯಾದ ಸಮಯದಲ್ಲಿ ಫೈಟ್ ಮಾಡುವವನೇ ನಿಜವಾದ ಹೀರೋ. ಆತ ಎಲ್ಲ ಸಮಯದಲ್ಲೂ ಫೈಟ್ ಮಾಡಲ್ಲ. ನಾನು ಕೂಡ ಪ್ರತಿ ಬಾರಿ ಜಗಳವನ್ನು ತಡೆಯುತ್ತೇನೆ’ ಎಂದಿದ್ದಾರೆ ಪ್ರತೀಕ್ ಗಾಂಧಿ.

ಈ ಪಾತ್ರಕ್ಕೆ ಪ್ರತೀಕ್ ಅವರನ್ನೇ ಆಯ್ಕೆ ಮಾಡಿದ್ದು ಯಾಕೆ ಎಂದು ಕೇಳಿದ್ದಕ್ಕೆ ನಿರ್ದೇಶಕ ರಿಷಬ್ ಅವರು ಉತ್ತರ ನೀಡಿದ್ದಾರೆ. ‘ಎಲ್ಲರಿಗೂ ಪ್ರತೀಕ್ ಗಾಂಧಿ ಬಗ್ಗೆ ಗೊತ್ತಾಗಿದ್ದು ಸ್ಕ್ಯಾಮ್​ 1992 ವೆಬ್ ಸಿರೀಸ್ ಬಂದಾಗ. ಆದರೆ ನನಗೆ ಅವರ ಬಗ್ಗೆ ಬಹಳ ಹಿಂದೆಯೇ ಗೊತ್ತಿತ್ತು. ಅವರ 2014ರಲ್ಲೇ ಅವರು ಬೇ ಯಾರ್ ಎಂಬ ಗುಜರಾತಿ ಸಿನಿಮಾ ಮಾಡಿದ್ದರು. ಅದರಲ್ಲಿ ಅವರ ನಟನೆ ನನಗೆ ಬಹಳ ಇಷ್ಟ ಆಗಿತ್ತು. ಅವರ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆ ಆಗಲೇ ಇತ್ತು. ‘ಧೂಮ್ ಧಾಮ್’ ಪಾತ್ರವರ್ಗದ ಆಯ್ಕೆ ಬಂದಾಗ ಮೊದಲ ಹೆಸರು ಪ್ರತೀಕ್ ಗಾಂಧಿ ಅವರದ್ದಾಗಿತ್ತು. ಅವರು ಕೂಡ ಒಪ್ಪಿಕೊಂಡರು. ಅವರ ನಟನೆಯ ಪ್ರತಿಭೆ ಬಗ್ಗೆ ನನಗೆ ಯಾವುದೇ ಅನುಮಾನ ಇರಲಿಲ್ಲ’ ಎಂದು ನಿರ್ದೇಶಕ ರಿಷಬ್ ಅವರು ಹೇಳಿದ್ದಾರೆ.

‘ಇದು ಕಾಮಿಡಿ ಸಿನಿಮಾ. ಅದು ತುಂಬ ಕಷ್ಟದ ಕೆಲಸ. ಅಂಥ ಸಿನಿಮಾವನ್ನು ಹೇಗೆ ಕಟ್ಟಿಕೊಡುತ್ತಾರೆ ಎಂಬುದು ಮುಖ್ಯ. ನಿರ್ದೇಶಕ ರಿಷಬ್ ಅವರು ಚೆನ್ನಾಗಿ ಮಾಡಿದ್ದಾರೆ. ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುನ್ನ ನಾನು ಅವರ ಜೊತೆ ಚರ್ಚೆ ಮಾಡಿದ್ದೆ. ರಿಷಬ್ ಅವರು ಕಂಫರ್ಟ್ ನೀಡಿದರು’ ಎಂದು ಸಿನಿಮಾ ಸೆಟ್ಟೇರಿದ ರೀತಿಯ ಬಗ್ಗೆ ಪ್ರತೀಕ್ ಗಾಂಧಿ ವಿವರಿಸಿದ್ದಾರೆ. ಈ ಸಿನಿಮಾದಲ್ಲಿ ಕಾಮಿಡಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಅಂಶ ಕೂಡ ಇದೆ.

ಇದನ್ನೂ ಓದಿ: ಸೌರವ್ ಗಂಗೂಲಿ ಬಯೋಪಿಕ್​; ಮುಖ್ಯ ಪಾತ್ರ ಮಾಡಲಿರುವ ನಟ ರಾಜ್​ಕುಮಾರ್ ರಾವ್

‘ಯಾಮಿ ಗೌತಮ್ ಅನುಭವಿ ನಟಿ. ಪಾತ್ರದ ಬಗ್ಗೆ ಅವರು ಯಾವಾಗಲೂ ಆಲೋಚಿಸುತ್ತಾರೆ. ಅದರಿಂದ ನಮಗೂ ಎನರ್ಜಿ ಹೆಚ್ಚುತ್ತದೆ. ಯಾಮಿ ಅವರ ರಿಯಲ್ ಲೈಫ್​ ವ್ಯಕ್ತಿತ್ವಕ್ಕಿಂತಲೂ ಸಂಪೂರ್ಣ ಭಿನ್ನವಾದ ಪಾತ್ರ ಈ ಸಿನಿಮಾದಲ್ಲಿ ಇದೆ. ಅದನ್ನು ಅವರು ಬಹಳ ಚೆನ್ನಾಗಿ ಮಾಡಿದ್ದಾರೆ. ಯಾಮಿ ಗೌತಮ್ ಮತ್ತು ಪ್ರತೀಕ್ ಗಾಂಧಿ ಅವರು ಪ್ರತಿ ದೃಶ್ಯದ ಬಗ್ಗೆಯೂ ಚರ್ಚೆ ಮಾಡುತ್ತಿದ್ದರು’ ಎಂದು ತಮ್ಮ ಸಿನಿಮಾದ ಕಲಾವಿದರ ಬಗ್ಗೆ ನಿರ್ದೇಶಕ ರಿಷಬ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:18 pm, Sat, 22 February 25