ಕೇವಲ ಒಂದು ಕೋಟಿ ಗಳಿಸಿದ ಪವನ್ ಕಲ್ಯಾಣ್ ಸಿನಿಮಾ; ‘ಧುರಂಧರ್ 2’ ಎದುರು ಮಂಕಾದ ಉಸ್ತಾದ್

"ಧುರಂಧರ್ 2" ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದು, ಪವನ್ ಕಲ್ಯಾಣ್ ಅಭಿನಯದ "ಉಸ್ತಾದ್ ಭಗತ್ ಸಿಂಗ್" ಚಿತ್ರವನ್ನು ಮೀರಿಸಿದೆ. "ಧುರಂಧರ್ 2" ಮಂಗಳವಾರ 56 ಕೋಟಿ ಗಳಿಸಿದರೆ, "ಉಸ್ತಾದ್ ಭಗತ್ ಸಿಂಗ್" ಕೇವಲ 1.5 ಕೋಟಿ ಗಳಿಸಿದೆ. ಪವನ್ ಕಲ್ಯಾಣ್ ಅವರ ಇತ್ತೀಚಿನ ಚಿತ್ರಗಳು ನಿರೀಕ್ಷೆ ಮೂಡಿಸದೆ ನಿರಾಸೆ ಮೂಡಿಸಿವೆ.

ಕೇವಲ ಒಂದು ಕೋಟಿ ಗಳಿಸಿದ ಪವನ್ ಕಲ್ಯಾಣ್ ಸಿನಿಮಾ; ‘ಧುರಂಧರ್ 2’ ಎದುರು ಮಂಕಾದ ಉಸ್ತಾದ್
ರಣವೀರ್-ಪವನ್

Updated on: Mar 25, 2026 | 10:52 AM

‘ಧುರಂಧರ್ 2’ ಸಿನಿಮಾ (Dhurandhar 2 Movie) ಅಬ್ಬರಕ್ಕೆ ಎಲ್ಲರೂ ನಡುಗಿ ಹೋಗಿದ್ದಾರೆ. ಇಡೀ ಬಾಕ್ಸ್ ಆಫೀಸ್​ ಶೇಕ್ ಆಗುತ್ತಿದೆ. ಈ ಚಿತ್ರದ ನಾಗಾಲೋಟಕ್ಕೆ ಎಲ್ಲಾ ಸಿನಿಮಾಗಳು ಮಂಕಾಗುತ್ತಿವೆ. ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವಂತೂ ಮಕಾಡೆ ಮಲಗಿದೆ. ಈ ಚಿತ್ರ ಮಂಗಳವಾರ ಗಳಿಕೆ ಮಾಡಿದ್ದು ಕೇಲವ ಒಂದು ಕೋಟಿ ರೂಪಾಯಿ. ಆದರೆ, ತೆಲುಗು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆದ ‘ಧುರಂಧರ್ 2’ಸಿನಿಮಾ, ಪವನ್ ಚಿತ್ರಕ್ಕಿಂತ ಹೆಚ್ಚು ಕಲೆಕ್ಷನ್ ಮಾಡಿದೆ.

‘ಧುರಂಧರ್ 2’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆ ನಿರೀಕ್ಷೆಯನ್ನೂ ಮೀರಿ ‘ಧುರಂಧರ್ 2’ ಸಿನಿಮಾ ಗೆಲುವು ಕಂಡಿದೆ. ಈ ಚಿತ್ರದ ಗಳಿಕೆ ಮಂಗಳವಾರ 56 ಕೋಟಿ ರೂಪಾಯಿ ಇದೆ. ತೆಲುಗು ಭಾಷೆಯಲ್ಲೇ ಚಿತ್ರ ಮೂರು ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ‘ಧುರಂಧರ್ 2’ ಚಿತ್ರವು ಅನಾಯಾಸವಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರವನ್ನು ಮಣಿಸಿದೆ. ಪವನ್ ಚಿತ್ರ ಮಂಗಳವಾರ ಒಂದೂವರೆ ಕೋಟಿ ರೂಪಾಯಿ ಗಳಿಸಿದೆ ಎಂದು ವರದಿ ಆಗಿದೆ.

ಪವನ್ ಕಲ್ಯಾಣ್ ಅವರು ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಈ ಕಾರಣಕ್ಕೆ ಒಪ್ಪಿಕೊಂಡ ಚಿತ್ರಗಳನ್ನು ಮುಗಿಸಬೇಕಾದ ಅನಿವಾರ್ಯತೆ ಕಾರಣದಿಂದ ಆದಷ್ಟು ಪ್ರಯತ್ನಿಸಿ ಶೂಟ್ ಮುಗಿಸಿಕೊಟ್ಟರು. ‘ಓಜಿ’, ‘ಹರಿ ಹರ ವೀರ ಮಲ್ಲು’ ಸಿನಿಮಾಗಳು ರಿಲೀಸ್ ಆಗಿ ಸೋತವು. ಈ ಸಾಲಿಗೆ ‘ಉಸ್ತಾದ್ ಭಗತ್ ಸಿಂಗ್’ ಕೂಡ ಸೇರ್ಪಡೆ ಆಗುತ್ತಿದೆ.

ಪವನ್ ಕಲ್ಯಾಣ್​ಗೆ ಟಾಲಿವುಡ್​​​ನಲ್ಲಿ ಬಹುಬೇಡಿಕೆ ಇದೆ. ಅವರು ಅನೇಕ ಚಿತ್ರಗಳನ್ನು ಮಣಿಸಿದ್ದಾರೆ. ಆದರೆ, ಈಗ ಅವರು ‘ ಧುರಂಧರ್ 2’ ಚಿತ್ರದ ಎದುರು ಮಂಡಿ ಊರಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಪವನ್ ಚಿತ್ರಕ್ಕೆ ಈಗಾಗಲೇ ಸಾಕಷ್ಟು ನೆಗೆಟಿವ್ ವಿಮರ್ಶೆ ಸಿಕ್ಕಿದೆ. ಹೀಗಾಗಿ, ಅವರ ಸಿನಿಮಾ ಮತ್ತೆ ಮೇಲಕ್ಕೆ ಏಳೋದು ಅನುಮಾನ ಎಂದೇ ಹೇಳಲಾಗುತ್ತಾ ಇದೆ.

ಇದನ್ನೂ ಓದಿ: ಆರು ದಿನಕ್ಕೆ 900 ಕೋಟಿ ಗಳಿಸಿದ ‘ಧುರಂಧರ್ 2’; ಆದರೂ, ಒಂದು ವಿಷಯದಲ್ಲಿ ಚಿತ್ರಕ್ಕೆ ಸೋಲು

‘ಧುರಂಧರ್ 2’ ಸಿನಿಮಾದಲ್ಲಿ ರಣವೀರ್ ಸಿಂಗ್, ಸಾರಾ ಅರ್ಜುನ್ ಮೊದಲಾದದವರು ನಟಿಸಿದ್ದಾರೆ. ಆದಿತ್ಯ ಧಾರ್ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us