ದಕ್ಷಿಣದ ಸ್ಟಾರ್ ಹೀರೋ ಚಿತ್ರಕ್ಕೆ ‘ಧುರಂಧರ್’ ಬೆಡಗಿ ಸಾರಾ ಅರ್ಜುನ್ ನಾಯಕಿ

ಮೆಗಾ ಪವರ್‌ಸ್ಟಾರ್ ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದ ಬಳಿಕ, ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದರೆ. ಈ ಚಿತ್ರಕ್ಕೆ ಬ್ಲಾಕ್‌ಬಸ್ಟರ್ 'ಧುರಂಧರ್' ಖ್ಯಾತಿಯ ಜನಪ್ರಿಯ ನಟಿ ಸಾರಾ ಅರ್ಜುನ್ ನಾಯಕಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಮುಂಬರುವ ದಸರಾ ಹಬ್ಬದ ವಿಶೇಷ ದಿನದಂದು ಅತ್ಯಂತ ಅ್ಧೂರಿಯಾಗಿ ಈ ಹೊಸ ಚಿತ್ರದ ಲಾಂಚ್ ಕಾರ್ಯಕ್ರಮ ಜರುಗಲಿದೆ.

ದಕ್ಷಿಣದ ಸ್ಟಾರ್ ಹೀರೋ ಚಿತ್ರಕ್ಕೆ ಧುರಂಧರ್ ಬೆಡಗಿ ಸಾರಾ ಅರ್ಜುನ್ ನಾಯಕಿ
ಸಾರಾ ಅರ್ಜುನ್

Updated on: Oct 14, 2026 | 10:55 AM

ಮುಖ್ಯಾಂಶಗಳು

  • 'ಧುರಂಧರ್' ಬೆಡಗಿಗೆ ಒಲಿದ ಅದೃಷ್ಟ
  • ರಾಮ್ ಚರಣ್ ಜೊತೆ ತೆರೆ ಹಂಚಿಕೊಳ್ಳಲಿರುವ ನಟಿ ಸಾರಾ ಅರ್ಜುನ್
  • ದಸರಾದಲ್ಲಿ ಅದ್ಧೂರಿ ಲಾಂಚ್

ಟಾಲಿವುಡ್ ನಟ ರಾಮ್ ಚರಣ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ‘RC17’ ಕುರಿತಾದ ರೋಚಕ ಮಾಹಿತಿಯೊಂದು ಹೊರಬಿದ್ದಿದೆ. ‘ಪೆದ್ದಿ’ ಚಿತ್ರದ ಬಿಡುಗಡೆ ಬಳಿಕ ರಾಮ್ ಚರಣ್ ವಿಶ್ರಾಂತಿಯಲ್ಲಿದ್ದರು. ಅವರು ಈ ಸಮಯದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈಗ ಸಂಪೂರ್ಣವಾಗಿ ಚೇತರಿಸಿಕೊಂಡು ಹೊಸ ಸಿನಿಮಾಗೆ ಭರ್ಜರಿಯಾಗಿ ಸಜ್ಜಾಗುತ್ತಿದ್ದಾರೆ. ಖ್ಯಾತ ನಿರ್ದೇಶಕ ಸುಕುಮಾರ್ ಆ್ಯಕ್ಷನ್ ಕಟ್ ಹೇಳಲಿರುವ ಈ ಸಿನಿಮಾದ ನಾಯಕಿಯ ಬಗ್ಗೆ ಚಿತ್ರತಂಡ ಸುಳಿವು ನೀಡಿದೆ.

‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಸಖತ್ ಸೌಂಡ್ ಮಾಡಿದೆ. ಈ ಚಿತ್ರದ ಮೂಲಕ ದೇಶಾದ್ಯಂತ ದೊಡ್ಡ ಮಟ್ಟದ ಖ್ಯಾತಿ ಗಳಿಸಿರುವ ಯುವ ನಟಿ ಸಾರಾ ಅರ್ಜುನ್ ಈಗ ರಾಮ್ ಚರಣ್ ಜೋಡಿಯಾಗಲಿದ್ದಾರೆ ಎಂದು ವರದಿ ಆಗಿದೆ. ‘ಧುರಂಧರ್’ ಚಿತ್ರದಲ್ಲಿನ ಅವರ ಅಭಿನಯ ಹಾಗೂ ಗ್ಲಾಮರ್ ಲುಕ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತ್ತು. ಆ ಚಿತ್ರದ ಭರ್ಜರಿ ಯಶಸ್ಸಿನ ನಂತರ ಅನೇಕ ದೊಡ್ಡ ಆಫರ್‌ಗಳು ಬಂದಿದ್ದರೂ, ಕಥೆಯ ಆಯ್ಕೆಯಲ್ಲಿ ಅತ್ಯಂತ ಚ್ಯೂಸಿಯಾಗಿರುವ ಸಾರಾ ಅರ್ಜುನ್ ಅವರು ಸುಕುಮಾರ್ ಹೇಳಿದ ಸ್ಕ್ರಿಪ್ಟ್ ಮೆಚ್ಚಿ ಈ ಬಿಗ್ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ.

ಸುಕುಮಾರ್ ಈ ಚಿತ್ರದ ಫೈನಲ್ ಸ್ಕ್ರಿಪ್ಟ್ ಅನ್ನು ಈಗಾಗಲೇ ಲಾಕ್ ಮಾಡಿದ್ದು, ಪ್ರಸ್ತುತ ಪ್ರಿ-ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಚಿತ್ರದ ಅತಿ ದೊಡ್ಡ ಹಾಗೂ ಅದ್ಧೂರಿ ಲಾಂಚ್ ದಸರಾ ಹಬ್ಬದ ಸಮಯದಲ್ಲಿ ನೆರವೇರಲಿದೆ. ತದನಂತರ ಡಿಸೆಂಬರ್ ತಿಂಗಳಿಂದ ಚಿತ್ರದ ಅಧಿಕೃತ ಶೂಟಿಂಗ್ ಕಾರ್ಯಗಳು ಶುರುವಾಗಲಿವೆ ಎಂದು ಚಿತ್ರತಂಡ ತಿಳಿಸಿದೆ.

ಇನ್ನು ಈ ಸಿನಿಮಾದ ಸಂಗೀತ ನಿರ್ದೇಶಕರ ಆಯ್ಕೆ ಬಗ್ಗೆಯೂ ಟಾಲಿವುಡ್ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಸೌತ್‌ನ ಮೋಸ್ಟ್ ವಾಂಟೆಡ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕ ಶಾಶ್ವತ್ ಸಚ್‌ದೇವ್ ಅವರ ಹೆಸರುಗಳು ಪರಿಗಣನೆಯಲ್ಲಿದ್ದು, ಇವರಲ್ಲಿ ಒಬ್ಬರು ಶೀಘ್ರದಲ್ಲೇ ಅಂತಿಮಗೊಳ್ಳಲಿದ್ದಾರೆ.

ಇದನ್ನೂ ಓದಿ: ಮಧುಬಾಲಾ ಪಾತ್ರಕ್ಕೆ ಧುರಂಧರ್ ನಟಿ ಸಾರಾ ಅರ್ಜುನ್ ತಯಾರಿ; ಯಾವಾಗಿಂದ ಶೂಟಿಂಗ್?

ಹೆಸರಾಂತ ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ಅತ್ಯಂತ ಪ್ರತಿಷ್ಠಿತವಾಗಿ ನಿರ್ಮಿಸುತ್ತಿದೆ. ರಾಮ್ ಚರಣ್ ಮತ್ತು ಸುಕುಮಾರ್ ಕಾಂಬಿನೇಷನ್‌ನ ಈ ಹೈ-ಬಜೆಟ್ ಚಿತ್ರವು 2028ರಲ್ಲಿ ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:49 am, Wed, 14 October 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us