
‘ಧುರಂಧರ್ 2’ ಸಿನಿಮಾ (Dhurandhar 2 Review) ವಿಶ್ವಾದ್ಯಂತ ತೆರೆಗೆ ಬಂದಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆದರೂ, ಮಾರ್ಚ್ 18ರಂದು ಚಿತ್ರಕ್ಕೆ ಪ್ರೀಮಿಯರ್ ಶೋಗಳನ್ನು ಇಡಲಾಗಿತ್ತು. ಈ ಸಿನಿಮಾ ಅಬ್ಬರಿಸಿದೆ. ಈ ಚಿತ್ರವನ್ನು ನೋಡಿದ ಅನೇಕರು ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈ ಚಿತ್ರದಲ್ಲಿ ಓರ್ವ ಪ್ರಮುಖ ವ್ಯಕ್ತಿ ಕಾಣಿಸಿಕೊಳ್ಳೋದಿಲ್ಲ. ಇದಕ್ಕೆ ವೀಕ್ಷಕರು ಸಾಕಷ್ಟು ಅಸಮಾಧನ ಹೊರಹಾಕಿದ್ದಾರೆ. ಉಳಿದಂತೆ ಸಿನಿಮಾದ ಆ್ಯಕ್ಷನ್ ವಿಷಯ ವೀಕ್ಷಕರಿಗೆ ಇಷ್ಟ ಆಗಿದೆ.
‘ಧುರಂಧರ್ 2’ ಸಿನಿಮಾ ವಿಶ್ವ ಮಟ್ಟದಲ್ಲಿ ಏಕ ಕಾಲಕ್ಕೆ ರಿಲೀಸ್ ಆಗಿದೆ. ಆದರೆ, ಕನ್ನಡ, ತೆಲುಗು, ತಮಿಳು ಮೊದಲಾದ ಭಾಷೆಗಳಲ್ಲಿ ಸಿನಿಮಾದ ಪ್ರೀಮಿಯರ್ ಆಗಿಲ್ಲ. ಹಿಂದಿ ವರ್ಷನ್ ನೋಡಿದ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಣವೀರ್ ಸಿಂಗ್ ಅವರನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅವರ ಆ್ಯಕ್ಷನ್ ದೃಶ್ಯಗಳು ಗಮನ ಸೆಳೆದಿವೆ.
‘ಧುರಂಧರ್’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದರು. ಎರಡನೇ ಭಾಗದಲ್ಲಿ ಅವರು ಫ್ಲ್ಯಾಶ್ಬ್ಯಾಕ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ, ಅವರು ಒಂದೇ ಒಂದು ದೃಶ್ಯದಲ್ಲೂ ಕಾಣಿಸಿಕೊಳ್ಳುವುದಿಲ್ಲ. ಕೇವಲ ಪೋಸ್ಟರ್ಗೆ ಮಾತ್ರ ಸೀಮಿತ ಆಗಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತರಿಸುತ್ತದೆ. ಅವರು ಇರಬೇಕಿತ್ತು ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರಿಗೆ ಅಕ್ಷಯ್ ಖನ್ನಾ ಅವರ ಸ್ಥಾನವನ್ನು ಅರ್ಜುನ್ ರಾಮ್ಪಾಲ್ ತುಂಬಿದ್ದಾರೆ ಎಂದು ಅನಿಸಿದೆ.
ಇದನ್ನೂ ಓದಿ: ಒಂದು ಸೇಡಿನ ಕಥೆ; ‘ಧುರಂಧರ್ 2’ ಸಿನಿಮಾ ವಿಮರ್ಶೆ
ರಣವೀರ್ ಸಿಂಗ್ ಅವರ ಆ್ಯಕ್ಷನ್ ಇಷಟ ಆಗಿದೆ. ಹಿಂಸಾತ್ಮಕ ದೃಶ್ಯವನ್ನು ಸಾಕಷ್ಟು ರಾ ಆಗಿ ತೋರಿಸಲಾಗಿದೆ ಎಂದು ಕೆಲವರಿಗೆ ಹೇಳಿದ್ದಾರೆ. ಆ್ಯಕ್ಷನ್ ದೃಶ್ಯಗಳನ್ನು ಇಷ್ಟಪಡೋರಿಗೆ ಸಿನಿಮಾ ಹೆಚ್ಚು ಇಷ್ಟ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.