ಮಹಾ ವಂಚಕ ಸುಖೇಶ್ ಕುರಿತ ಡಾಕ್ಯುಮೆಂಟರಿ, ನಟಿಯಿಂದ ತಕರಾರು?
Sukesh Chandrashekhar: ಭಾರತದ ಮಹಾನ್ ವಂಚಕ ಸುಖೇಶ್ ಚಂದ್ರಶೇಖರ್ ಕುರಿತು ದೊಡ್ಡ ಒಟಿಟಿಯೊಂದು ಡಾಕ್ಯುಮೆಂಟರಿ ನಿರ್ಮಾಣ ಮಾಡುತ್ತಿದೆ. ಸುಖೇಶ್ ಚಂದ್ರಶೇಖರ್ಗೆ ಬಲು ಆಪ್ತವಾಗಿದ್ದ ಬಾಲಿವುಡ್ ನಟಿಯನ್ನು ಸಹ ಡಾಕ್ಯುಮೆಂಟರಿಗಾಗಿ ಕೇಳಲಾಗಿದೆ. ಆದರೆ ನಟಿ, ಡಾಕ್ಯುಮೆಂಟರಿಯಲ್ಲಿ ತಮ್ಮ ಪಾತ್ರದ ಬಗ್ಗೆ ತಕರಾರು ಎತ್ತಿದ್ದಾರಂತೆ.

ಭಾರತದ (India) ಮಹಾ ವಂಚನ ಸುಖೇಶ್ ಚಂದ್ರಶೇಖರ್ (Sukesh Chandrashekhar) ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ ದಿನ ದೂಡುತ್ತಿದ್ದಾನೆ. ಭಾರತದ ಟಾಪ್ 1 ಉದ್ಯಮಿಗಳು, ರಾಜಕಾರಣಿಗಳು, ಸಿನಿಮಾ ನಟ-ನಟಿಯರಿಗೆ ಮೋಸ ಮಾಡಿರುವ ಸುಖೇಶ್, ಭಾರತದ ಮಹಾನ್ ವಂಚಕ ಎಂಬ ಬಿರುದು ಪಡೆದಿದ್ದಾನೆ. ಮಹಾ ವಂಚಕ ಸುಖೇಶ್ನ ಜೀವನ ಒಂದು ರೀತಿ ಸಿನಿಮಾ ಕತೆಯ ಮಾದರಿಯಲ್ಲಿದೆ. ಪದವಿ ಸಹ ಪಡೆಯದ ಸುಖೇಶ್ ಅದು ಹೇಗೆ ಭಾರತದ ಟಾಪ್ ಉದ್ಯಮಿಗಳನ್ನು, ರಾಜಕಾರಣಿಗಳನ್ನು ಮೋಸ ಮಾಡಿ, ನೂರಾರು ಕೋಟಿ ಆಸ್ತಿ ಮಾಡಿದ ಎಂಬುದು ಬಲು ಕುತೂಹಲ ಕೆರಳಿಸುವ ಕತೆ.
ಈಗಾಗಲೇ ಕೆಲವು ಅಪರಾಧಿಗಳು, ಪ್ರಕರಣಗಳ ಬಗ್ಗೆ ಡಾಕ್ಯುಮೆಂಟರಿಗಳು ಭಾರತದಲ್ಲಿ ನಿರ್ಮಾಣವಾಗಿವೆ. ಒಟಿಟಿಗಳು ಹೆಚ್ಚು ಪ್ರಚಲಿತಕ್ಕೆ ಬಂದ ಬಳಿಕವಂತೂ ಕ್ರೈಂ ಡಾಕ್ಯುಮೆಂಟರಿಗಳು ಭಾರತದಲ್ಲಿ ಹೆಚ್ಚಾಗಿವೆ. ಇದೀಗ ಸುಖೇಶ್ ಜೀವನ ಕುರಿತಾಗಿ ಸಹ ಡಾಕ್ಯುಮೆಂಟರಿ ನಿರ್ಮಾಣ ಆಗುತ್ತಿದೆ. ಸುಖೇಶ್ ಜೀವನದ ಹಲವು ಅಂಶಗಳನ್ನು ಈ ಡಾಕ್ಯುಮೆಂಟರಿ ಹೊರಗೆ ಹಾಕಲಿದೆ. ಆದರೆ ಈ ಡಾಕ್ಯುಮೆಂಟರಿಗೆ ಬಾಲಿವುಡ್ ನಟಿಯೂ ಇರಲಿದ್ದಾರೆ ಎನ್ನಲಾಗುತ್ತಿದೆ.
ಜಾಕ್ವೆಲಿನ್ ಫರ್ನಾಂಡೀಸ್, ಸುಖೇಶ್ ಚಂದ್ರಶೇಖರ್ಗೆ ಬಲು ಆಪ್ತ. ಆತನ ಗೆಳತಿಯೂ ಆಗಿದ್ದ ಜಾಕ್ವೆಲಿನ್ ಫರ್ನಾಂಡೀಸ್, ಸುಖೇಶ್ನಿಂದ ಕೋಟ್ಯಂತರ ರೂಪಾಯಿ ಹಣ, ಬೆಲೆ ಬಾಳುವ ಐಶಾರಾಮಿ ಕಾರುಗಳು, ಬೆಲೆ ಬಾಳುವ ಆಭರಣ ಇನ್ನೂ ಹಲವಾರು ವಸ್ತುಗಳನ್ನು ಪಡೆದುಕೊಂಡಿದ್ದರು. ಜಾಕ್ವೆಲಿನ್, ಸುಖೇಶ್ಗೆ ಮುತ್ತುಗಳು ಕೊಡುತ್ತಿರುವ ಹಲವು ಚಿತ್ರಗಳು ವೈರಲ್ ಸಹ ಆಗಿವೆ. ಸುಖೇಶ್ ಪ್ರಕರಣದಲ್ಲಿ ಜಾಕ್ವೆಲಿನ್ ಅನ್ನು ಸಹ ಆರೋಪಿಯನ್ನಾಗಿ ಇಡಿ ಮಾಡಿತ್ತು. ಆದರೆ ಪುಣ್ಯವಶಾತ್ ಜಾಕ್ವೆಲಿನ್ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಂಡರು.
ಇದನ್ನೂ ಓದಿ:‘ನಿನ್ನ ಹೊಟ್ಟೆಯಲ್ಲಿ ನಮ್ಮ ಮಗಳಾಗಿ ಬರುತ್ತಾಳೆ’; ತಾಯಿ ನಿಧನದ ಬಗ್ಗೆ ಜಾಕ್ವೆಲಿನ್ಗೆ ಮುಕೇಶ್ ಪತ್ರ
ಇದೀಗ ಡಾಕ್ಯುಮೆಂಟರಿ ನಿರ್ಮಾಣ ಮಾಡುತ್ತಿರುವ ಪ್ರತಿಷ್ಠಿತ ಒಟಿಟಿ ವೇದಿಕೆಯು, ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಸಹ ಸಂಪರ್ಕ ಮಾಡಿದ್ದು, ಡಾಕ್ಯುಮೆಂಟರಿಗಾಗಿ, ಸುಖೇಶ್ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದೆ. ಜಾಕ್ವೆಲಿನ್, ಈ ಬಗ್ಗೆ ತುಸು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಡಾಕ್ಯುಮೆಂಟರಿಯಲ್ಲಿ ತಮ್ಮನ್ನು ಹೇಗೆ ತೋರಿಸಲಾಗುತ್ತದೆ ಎಂಬ ಬಗ್ಗೆ ಆತಂಕಗೊಂಡಿದ್ದಾರಂತೆ. ಇದೇ ಕಾರಣಕ್ಕೆ ಡಾಕ್ಯುಮೆಂಟರಿ ನಿರ್ಮಾಣ ಮಾಡುತ್ತಿರುವವರಿಗೆ ಮುಂಚಿತವಾಗಿ ಡಾಕ್ಯುಮೆಂಟರಿ ತೋರಿಸುವಂತೆ. ತಮ್ಮ ಬಗ್ಗೆ ಋಣಾತ್ಮಕವಾಗಿ ತೋರಿಸದೇ ಇರುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಆ ವಿಷಯ ಬೇಡ, ಈ ವಿಷಯ ಬೇಡ ಎಂದು ತಕರಾರು ಸಹ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಡಾಕ್ಯುಮೆಂಟರಿ ನಿರ್ಮಾಣ ತಡವಾಗುತ್ತಿದೆಯಂತೆ.
ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಸುಖೇಶ್ ಪರಸ್ಪರ ರಿಲೇಶನ್ನಲ್ಲಿದ್ದರು. ಈಗ ಸುಖೇಶ್, ಜೈಲಿನಿಂದ ಜಾಕ್ವೆಲಿನ್ ಫರ್ನಾಂಡೀಸ್ಗೆ ಪತ್ರಗಳನ್ನು ಬರೆಯುತ್ತಿರುತ್ತಾರೆ. ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡೀಸ್ರ ತಾಯಿ ನಿಧನ ಹೊಂದಿದಾಗ ಸಂತಾಪ ವ್ಯಕ್ತಡಿಸಿದ್ದ ಸುಖೇಶ್, ಜಾಕ್ವೆಲಿನ್ ಫರ್ನಾಂಡೀಸ್ ತಾಯಿಗಾಗಿ ಬಾಲಿಯಲ್ಲಿ ಒಂದು ಉದ್ಯಾನವನ್ನು ಡೆಡಿಕೇಟ್ ಮಾಡುವುದಾಗಿ, ಆ ಉದ್ಯಾನದಲ್ಲಿ ಜಾಕ್ವೆಲಿನ್ ತಾಯಿಗೆ ಇಷ್ಟವಾದ ಎಲ್ಲ ಹೂವುಗಳು ಇರುವಂತೆ ನೋಡಿಕೊಳ್ಳುವುದಾಗಿ ಹೇಳಿದ್ದ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




