AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಹಲ್ಗಾಮ್ ಘಟನೆ ಬಗ್ಗೆ ಅಕ್ಷಯ್ ಕುಮಾರ್ ಮಾತಾಡುವಾಗ ಅಶ್ಲೀಲ ಪದ ಬಳಸಿದ ಪ್ರೇಕ್ಷಕರು; ವಿಡಿಯೋ ವೈರಲ್

‘ಕೇಸರಿ: ಚಾಪ್ಟರ್ 2’ ಸಿನಿಮಾ ಪ್ರದರ್ಶನ ಆಗುತ್ತಿರುವ ಚಿತ್ರಮಂದಿರಕ್ಕೆ ಅಕ್ಷಯ್ ಕುಮಾರ್ ಭೇಟಿ ನೀಡಿದ್ದಾರೆ. ಅಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ ಅಕ್ಷಯ್ ಕುಮಾರ್ ಮಾತನಾಡುವಾಗ ಈ ಘಟನೆ ನಡೆದಿದೆ. ಸಿನಿಮಾದಲ್ಲಿ ಬಳಸಿದ ಒಂದು ಅಶ್ಲೀಲ ಪದವನ್ನೇ ಮತ್ತೆ ಪ್ರಸ್ತಾಪಿಸುವ ಮೂಲಕ ಪಹಲ್ಗಾಮ್ ಉಗ್ರರ ದಾಳಿಯನ್ನು ಅವರು ಖಂಡಿಸಿದ್ದಾರೆ.

ಪಹಲ್ಗಾಮ್ ಘಟನೆ ಬಗ್ಗೆ ಅಕ್ಷಯ್ ಕುಮಾರ್ ಮಾತಾಡುವಾಗ ಅಶ್ಲೀಲ ಪದ ಬಳಸಿದ ಪ್ರೇಕ್ಷಕರು; ವಿಡಿಯೋ ವೈರಲ್
Akshay Kumar
ಮದನ್​ ಕುಮಾರ್​
|

Updated on: Apr 27, 2025 | 9:40 AM

Share

ನಟ ಅಕ್ಷಯ್ ಕುಮಾರ್ (Akshay Kumar) ಅವರು ಅನೇಕ ದೇಶಭಕ್ತಿ ಸಿನಿಮಾಗಳನ್ನು ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆಗಿರುವ ‘ಕೇಸರಿ: ಚಾಪ್ಟರ್ 2’ (Kesari: Chapter 2) ಸಿನಿಮಾದಲ್ಲಿ ಕೂಡ ಅಂಥದ್ದೇ ಕಥೆ ಇದೆ. ಜಲಿಯನ್​ವಾಲಾ ಬಾಗ್ ಹತ್ಯಾಕಾಂಡದ ಬಗ್ಗೆ ಈ ಸಿನಿಮಾ ಮಾಡಲಾಗಿದೆ. ಬೇಸರದ ಸಂಗತಿ ಏನೆಂದರೆ, ಈ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲೇ ಪಹಲ್ಗಾಮ್ (Pahalgam) ಹತ್ಯಾಕಾಂಡ ನಡೆದಿದೆ. ಇತ್ತೀಚೆಗೆ ಅಕ್ಷಯ್​ ಕುಮಾರ್ ಅವರು ಪ್ರೇಕ್ಷಕರ ಜೊತೆ ಮಾತನಾಡುವಾಗ ಪಹಲ್ಗಾಮ್ ಉಗ್ರರ ದಾಳಿ ಬಗ್ಗೆ ಪ್ರಸ್ತಾಪ ಮಾಡಿದರು. ಆಗ ಪ್ರೇಕ್ಷಕರು ಅಶ್ಲೀಲ ಪದ (F*** you) ಬಳಕೆ ಮಾಡಿದರು. ಆ ಸಂದರ್ಭದ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಆರ್, ಮಾಧವನ್, ಅನನ್ಯಾ ಪಾಂಡೆ ಮುಂತಾದವರು ನಟಿಸಿದ್ದಾರೆ. ಹಲವು ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆ ಪೈಕಿ ಕೆಲವು ಚಿತ್ರಮಂದಿರಗಳಿಗೆ ಈ ಕಲಾವಿದರು ಭೇಟಿ ನೀಡುತ್ತಿದ್ದಾರೆ. ಅಕ್ಷಯ್ ಕುಮಾರ್​ ಮತ್ತು ಆರ್. ಮಾಧವನ್ ಅವರು ಚಿತ್ರಮಂದಿರವೊಂದಕ್ಕೆ ತೆರಳಿ ಮಾತನಾಡುವಾಗ ಈ ಘಟನೆ ನಡೆದಿದೆ. ಹಾಗಂತ ಪ್ರೇಕ್ಷಕರು ಅಕ್ಷಯ್​ ಕುಮಾರ್​ಗೆ ವಿರುದ್ಧವಾಗಿ ಇಂಥ ಪದ ಬಳಕೆ ಮಾಡಿಲ್ಲ.

ಇದನ್ನೂ ಓದಿ
Image
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ರೇಖಾಚಿತ್ರ ಬಿಡುಗಡೆ
Image
ಪಾಕ್ ಸೇನೆಗೆ ನಡುಕ ಶುರು: ಉಪಗ್ರಹ ಚಿತ್ರಗಳಿಂದ ಬಹಿರಂಗವಾಯ್ತು ರಹಸ್ಯ
Image
ಮೆಹಂದಿ ಮಾಸುವ ಮುನ್ನವೇ ನವವಿವಾಹಿತೆಯ ಕುಂಕುಮ ಅಳಿಸಿದ ಉಗ್ರರು
Image
ಪಹಲ್ಗಾಮ್ ದಾಳಿ: ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ

ಅಕ್ಷಯ್ ಕುಮಾರ್ ಅವರು ಇದೇ ಮೊದಲ ಬಾರಿಗೆ ತೆರೆಮೇಲೆ ‘F*** you’ ಎಂಬ ಪದ ಬಳಕೆ ಮಾಡಿದ್ದಾರೆ. ಬ್ರಿಟಿಷ್ ಅಧಿಕಾರಿಗೆ ಬೈಯ್ಯುವ ದೃಶ್ಯದಲ್ಲಿ ಈ ಸಂಭಾಷಣೆ ಇದೆ. ಅದನ್ನೇ ಉಲ್ಲೇಖಿಸಿ ಅವರು ಈಗ ಪಹಲ್ಗಾಮ್ ಉಗ್ರರ ದಾಳಿಯನ್ನು ಕೂಡ ಖಂಡಿಸಿದ್ದಾರೆ.

‘ಅಂಥವರ ಬಗ್ಗೆ ನಮಗೆಲ್ಲ ಕೋಪ ಇದೆ. ಈಗ ಆ ಸಿಟ್ಟು ಮತ್ತೆ ಎಚ್ಚರಗೊಂಡಿದೆ. ನಾನು ಯಾರ ಬಗ್ಗೆ ಮಾತನಾಡುತ್ತಿದ್ದೇನೆ ಎಂಬುದು ನಿಮಗೆಲ್ಲ ಚೆನ್ನಾಗಿ ಗೊತ್ತು. ಇಂದು ನಾನು ಆ ಭಯೋತ್ಪಾದಕರಿಗೆ ಒಂದೇ ಮಾತು ಹೇಳಲು ಬಯಸುತ್ತೇನೆ. ಸಿನಿಮಾದಲ್ಲೂ ಅದನ್ನು ಹೇಳಿದ್ದೇನೆ. ಅದೇನು?’ ಎಂದು ಪ್ರಶ್ನಿಸುತ್ತ ಅಕ್ಷಯ್ ಕುಮಾರ್​ ಅವರು ಪ್ರೇಕ್ಷಕರ ಕಡೆಗೆ ಮೈಕ್ ಹಿಡಿದರು. ಆಗ ಚಿತ್ರಮಂದಿರದಲ್ಲಿ ಇದ್ದ ಪ್ರೇಕ್ಷಕರೆಲ್ಲರೂ ‘F*** you’ ಎಂದು ಜೋರಾಗಿ ಕೂಗಿದರು.

ಇದನ್ನೂ ಓದಿ: ‘ಕರೀನಾ ಕಪೂರ್ ಸಹವಾಸ ಮಾಡಬೇಡ’: ಸೈಫ್​ಗೆ ಎಚ್ಚರಿಕೆ ನೀಡಿದ್ದ ಅಕ್ಷಯ್ ಕುಮಾರ್

ಅಂದಹಾಗೆ, ‘ಕೇಸರಿ 2’ ಸಿನಿಮಾದಲ್ಲಿ ಇಂಥ ಪದ ಬಳಕೆ ಮಾಡಿದ್ದರ ಬಗ್ಗೆ ಅಕ್ಷಯ್ ಕುಮಾರ್ ಅವರು ಈ ಮೊದಲು ಸಮರ್ಥನೆ ನೀಡಿದ್ದರು. ‘ಹೌದು, ನಾನು ಆ ಪದ ಬಳಸಿದ್ದೇನೆ. ಆದರೆ ಅದೇ ದೃಶ್ಯದಲ್ಲಿ ಬ್ರಿಟಿಷ್ ಅಧಿಕಾರಿ ನಮ್ಮನ್ನು ಗುಲಾಮ ಅಂತ ಕರೆದಿದ್ದು ತಪ್ಪು ಅಂತ ನಿಮಗೆ ಅನಿಸುತ್ತಿಲ್ಲವೇ? ನನ್ನ ಪ್ರಕಾರ ಅದಕ್ಕಿಂತ ಕೆಟ್ಟ ಪದ ಬೇರೊಂದಿಲ್ಲ’ ಎಂದು ಅಕ್ಷಯ್ ಕುಮಾರ್ ಅವರು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ