ನಟಿ ದೀಪಿಕಾ ಪಡುಕೋಣೆ ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿ ಇದ್ದಾರೆ. ಹಾಗಾಗಿ ಅವರು ಸದ್ಯಕ್ಕೆ ಸಿನಿಮಾ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದಾರೆ. ತುಂಬು ಗರ್ಭಿಣಿ ಆಗಿರುವ ಅವರು ಆರೋಗ್ಯದ ಕಡೆಗೆ ಗಮನ ಹರಿಸಿದ್ದಾರೆ. ದೀಪಿಕಾ ಪಡುಕೋಣೆ ಜೊತೆ ಅವರ ಪತಿ ರಣವೀರ್ ಸಿಂಗ್ ಅವರು ಮೊದಲ ಮಗುವಿಗಾಗಿ ಕಾದಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ಒಂದು ಗಾಸಿಪ್ ಹಬ್ಬಿಸಿದ್ದಾರೆ. ದೀಪಿಕಾಗೆ ಗಂಡು ಮಗು ಜನಿಸಿದ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ನಕಲಿ ಫೋಟೋ ಮತ್ತು ವಿಡಿಯೋದ ಹಾವಳಿ ಜಾಸ್ತಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಲೈಕ್ ಮತ್ತು ವೀವ್ಸ್ ಪಡೆಯಲು ಏನು ಬೇಕಿದ್ದರೂ ಮಾಡುವ ಜನರು ಇದ್ದಾರೆ. ಯಾರದ್ದೋ ಫೋಟೋವನ್ನು ಎಡಿಟ್ ಮಾಡಿ, ಇದು ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರ ಫೋಟೋ ಎಂದು ನಂಬಿಸುವ ಕೆಲಸ ನಡೆದಿದೆ. ಕೆಲವೆಡೆ ಈ ಫೋಟೋ ವೈರಲ್ ಆಗಿದೆ.
ಸರಿಯಾಗಿ ಗಮನಿಸಿದರೆ ಇದು ನಕಲಿ ಫೋಟೋ ಎಂಬುದು ಗೊತ್ತಾಗುತ್ತದೆ. ಹಾಗಾಗಿ ದೀಪಿಕಾ ಪಡುಕೋಣೆ ಅವರ ಅಭಿಮಾನಿಗಳಿಗೆ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಆದರೆ ಕೆಲವರು ಇದನ್ನೇ ನಿಜ ಎಂದು ನಂಬಿಕೊಂಡವರೂ ಇದ್ದಾರೆ. ದೀಪಿಕಾ ಪಡುಕೋಣೆ ಅವರು ಸೆಪ್ಟೆಂಬರ್ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಇನ್ನು, ದೀಪಿಕಾ ಅವರಿಗೆ ಜನಿಸುವುದು ಗಂಡು ಮಗು ಅಥವಾ ಹೆಣ್ಣು ಮಗು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ: ತುಂಬು ಗರ್ಭಿಣಿ ದೀಪಿಕಾ ಪಡುಕೋಣೆ ಹೊಟ್ಟೆ ಮೇಲೆ ಕೈ ಇಟ್ಟ ಒರಿ; ಫ್ಯಾನ್ಸ್ಗೆ ಕಿರಿಕಿರಿ
ಕೆಲವು ದಿನಗಳ ಹಿಂದೆ ಪಂಡಿತ್ ಜಗನ್ನಾಥ್ ಗುರೂಜಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಒಂದು ಭವಿಷ್ಯ ನುಡಿದಿದ್ದರು. ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ದಂಪತಿಗೆ ಗಂಡು ಮಗು ಜನಿಸಲಿದ್ದು, ಆ ಮಗು ತುಂಬಾ ಅದೃಷ್ಟವನ್ನು ತರಲಿದೆ ಎಂದು ಜಗನ್ನಾಥ್ ಗುರೂಜಿ ಹೇಳಿದ್ದರು. ಅವರು ನುಡಿದಿರುವ ಈ ಭವಿಷ್ಯ ನಿಜವಾಗುತ್ತಾ ಅಥವಾ ಇಲ್ಲವಾ ಎಂಬುದನ್ನು ತಿಳಿಯುವ ಕೌತಕ ಅಭಿಮಾನಿಗಳಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.